Blog number 1009. ಡ್ರೈಯರ್ ನಲ್ಲಿ ಒಣಗಿಸುವ ಎಲೆ ಕೋಸು ಎಲೆಗಳಿಗೆ ಕಾಶ್ಮೀರದಲ್ಲಿ ಬಾರೀ ಡಿಮ್ಯಾಂಡ್, ಮಲೆನಾಡಿನ ಮುಂಗಾರಿನ ವಿಶೇಷ ಸಸ್ಯಗಳನ್ನು ಒಣಗಿಸಿ ಬಳಸಿ ಮಾರುಕಟ್ಟೆ ಮಾಡಬಹುದಾ?
#ಮಲೆನಾಡಿನ_ಅನೇಕ_ತಂಬುಳಿ_ಸೊಪ್ಪು_ಡ್ರೈಯರ್_ಬಳಸಿ_ಮಾರುಕಟ್ಟೆ_ಮಾಡಬಹುದು.
#ನಾಗೇಂದ್ರಸಾಗರ್_ತಲವಾಟ_ರಾಘವೇಂದ್ರಶರ್ಮಾ_ಗಮನಿಸಲಿ.
#ಒಣಗಿಸಿದ_ಪಶ್ಚಿಮಘಟ್ಟದ_ವೈವಿಧ್ಯಮಯ_ಸೊಪ್ಪುಗಳಿಗೆ_ವಿಸ್ತಾರ_ಮಾರುಕಟ್ಟೆ_ಸಾಧ್ಯತೆ.
ಡ್ರೈ ಕೊಲಾಡ್೯ ಗ್ರೀನ್ (Dry Collard green) ಎಂಬ ಒಣಗಿಸಿದ ಎಲೆ ಕೋಸು ಎಲೆಗಳಿಗೆ ಕಾಶ್ಮೀರದಲ್ಲಿ ಬಾರಿ ಬೇಡಿಕೆಯ ಪದಾರ್ಥವಾಗಿದೆ ಇದರಿಂದ ಅಲ್ಲಿ ನೂರಾರು ರೀತಿಯಲ್ಲಿ ವಿಶೇಷ ಅಡುಗೆಗಳು ಮಾಡುತ್ತಾರೆ.
ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಎಲ್ಲಾ ಕಾಲದಲ್ಲೂ ಸಂಗ್ರಹಿಸಿ ಬಳಸಬಹುದಾಗಿದೆ.
ಇದು ಕಾಶ್ಮೀರ ಮಾತ್ರವಲ್ಲ ವಿಶ್ವದಾದ್ಯಂತ ಅಡುಗೆಗೆ ಬಳಸುವ ಖಾದ್ಯವಾಗಿ ಜನಪ್ರಿಯವಾಗಿದೆ.
ಕಾಶ್ಮೀರದಲ್ಲಿ ಮಾಂಸದ ಜೊತೆಯ ಹಾಕ್ ಮಟನ್ ಮತ್ತು ಸಾಗ್ ಮಟನ್ ಎಂಬ ಹಸಿರು ಬಣ್ಣದ ಅಡುಗೆ ತುಂಬಾ ಪ್ರಸಿದ್ದಿ ಪಡೆದಿದೆ ಅದೇ ರೀತಿ ಕಾಶ್ಮೀರಿ ಪಂಡಿತರ ಸಾಗ್ ಎಂಬ ಸಸ್ಯಹಾರಿ ಅಡುಗೆ ಕೂಡ.
ಕಾಶ್ಮೀರದಲ್ಲಿ ಈ ಎಲೆ ಕೋಸುಗಳನ್ನು ದೇಸಿ ಪದ್ಧತಿಯಲ್ಲಿ ಮನೆ ಮನೆಯಲ್ಲಿ ಒಣಗಿಸುತ್ತಿದ್ದರು ಈಗ ವಿವಿದ ಮಾದರಿಯ ವಿದ್ಯುತ್ ಮತ್ತು ಸೋಲಾರ್ ಡ್ರೈಯರ್ ಬಳಸುತ್ತಾರೆ.
ಸಾಗರ ತಾಲ್ಲೂಕಿನ ಕೃಷಿ ವಿಜ್ಞಾನಿ ನಾಗೇಂದ್ರ ಸಾಗರ್ ಈಗಾಗಲೇ ಮಲೆನಾಡಿನ ರೈತರಿಗೆ ವಿವಿಧ ಡ್ರೈಯರ್ ಪರಿಚಯಿಸಿದ್ದಾರೆ ಅದರಲ್ಲಿ ಅನಾನಸ್ - ಬಾಳೆ ಹಣ್ಣು - ಸಪೋಟ-ಅಂಜೂರ ಹಣ್ಣುಗಳ ಸಂಸ್ಕರಿಸಿ ಮಾರಾಟ ಮಾಡುವ ತರಬೇತಿ ನೀಡುತ್ತಿದ್ದಾರೆ.
ಅದೇ ರೀತಿ ಪತ್ರಕರ್ತ ತಲವಾಟ ರಾಘವೇಂದ್ರ ಶಮಾ೯ ಕೂಡ ಸ್ಪಂತ ಬಳಕೆಗೆ ಟೇಬಲ್ ಟಾಪ್ ವಿದ್ಯುತ್ ಡ್ರೈಯರ್ ಖರೀದಿಸಿ ಬಳಸುತ್ತಿದ್ದಾರೆ ಅವರು ವಿವಿದ ಹಣ್ಣು ತರಕಾರಿ ಜೊತೆ ಕಳಲೆಯನ್ನೂ ಒಣಗಿಸಿ ಬಳಸಿ ನೋಡಿದ್ದಾರೆ.
Comments
Post a Comment