Blog number 1004. ಉಡುಗೊರೆಗೆ ಬೆಲೆ ಕಟ್ಟಲಾಗದಂತ ಅಮೂಲ್ಯ ವಸ್ತು ಅದನ್ನು ನೀಡಿದವರ ಸ್ಮರಣೆಗಾಗಿ ನೆನಪಿನ ಕಾಣಿಕೆ ಸಂರಕ್ಷಿಸಿಟ್ಟರೆ ಅದೇ ನಾವು ಗೆಳೆತನಕ್ಕೆ ನೀಡುವ ದೊಡ್ಡ ಗೌರವ.
#ನಾವು_ನೀಡಿದ_ಉಡುಗೊರೆಗೆ_ಸ್ವೀಕರಿಸಿದವರು_ಯಾವ_ಗೌರವ_ನೀಡಿದ್ದಾರೆಂಬ_ಕುತೂಹಲ_ಇದ್ದಿದ್ದೇ
#ಉಡುಗೊರೆ_ನೀಡುವವರ_ಸ್ವೀಕರಿಸುವರ_ಮನಸ್ಥಿತಿ
#ನೆನಪಿನಲ್ಲಿ_ಸದಾ_ಉಳಿಯುವಂತೆ_ಇರಲಿ_ನೆನಪಿನ_ಕಾಣಿಕೆ
#ನನ್ನಲ್ಲಿರುವ_ನೆನಪಿನ_ಕಾಣಿಕೆ_ನನ್ನ_ಆಫೀಸಿನಲ್ಲಿ_ಸುರಕ್ಷಿತ
ನೆನಪಿನ ಕಾಣಿಕೆ - ಉಡುಗೊರೆ ಅಂತೆಲ್ಲ ಕರೆಯುವ ಇಂಗ್ಲೀಷ್ ನ Gift ನನಗೆ ಕೊಡುವವರು ತುಂಬಾ ಕಡಿಮೆ ಮತ್ತು ನಾನು ಸ್ವೀಕರಿಸುವುದೂ ಇಲ್ಲ ಆದರೆ ಪುಸ್ತಕ ಮಾತ್ರ ಸ್ಟೀಕರಿಸುತ್ತೇನೆ ಯಾಕೆಂದರೆ ನನ್ನ ಮದುವೆ ಕೂಡ ಆಪ್ತ 15 ರಿಂದ 20 ಜನರ ಮಧ್ಯದಲ್ಲಿ, ಹುಟ್ಟುಹಬ್ಬ, ಆ್ಯನಿವರ್ಸರಿಗಳು ಇಲ್ಲ, ಸನ್ಮಾನ ಸ್ವೀಕರಿಸುವುದಿಲ್ಲ ಮತ್ತು ಅತ್ಯಂತ ಅತ್ಯಾಪ್ತರು ಹೆಚ್ಚಿನವರು ಬಡವರು ಹೀಗಾಗಿ ನನಗೆ ನೆನಪಿನ ಕಾಣಿಕೆ ಬರುವುದೂ ಇಲ್ಲ.
ಆದರೂ ಕೆಲ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಿದ್ದು ಮಾತ್ರ ನಾನು ಹಾಳಾಗದಂತೆ ಸಂರಕ್ಷಿಸಿಡಲು ಹೆಚ್ಚು ಶ್ರಮ ಹಾಕುತ್ತೇನೆ.
ನನ್ನ ನಿತ್ಯ ಕಾಯಕದ ಕಛೇರಿಯಲ್ಲಿ ಇಟ್ಟಿರುವ ನೆನಪಿನ ಕಾಣಿಕೆಗಳು ಅದನ್ನು ನೀಡಿದವರು ಯಾರು? ಯಾವಾಗ ನೀಡಿದರೆಂಬ ಕಥೆ ಹೇಳುತ್ತದೆ.
ನನ್ನ ಎದುರಿನ ಕಿಟಕಿ ಮೇಲಿನ ರಾಧಕೃಷ್ಣರ ಲೋಹದ ವಿಗ್ರಹ ನೀಡಿದವರು ನಮ್ಮ ಊರಿನ ಶಾಲಾ ಶಿಕ್ಷಕಿ ಅನುರಾಧಾ ಟೀಚರ್ ಮತ್ತು ಚಂದ್ರಕಲಾ ಟೀಚರ್ ಇವರು ನಮ್ಮೆಲ್ಲ ಮಕ್ಕಳಿಗೆ ವಿದ್ಯೆ ಕಲಿಸಿದವರು 2007 ರಲ್ಲಿ ನನ್ನ ತಂದೆ-ತಾಯಿ ಸ್ಮರಣಾರ್ಥ ಕಲ್ಯಾಣ ಮಂಟಪ ಕಟ್ಟಿದಾಗ ಈ ನೆನಪಿನ ಕಾಣಿಕೆ ನೀಡಿದ್ದರು ಇದನ್ನು ಹಳೆಯ ಲಾಡ್ಜ್ ಆಪೀಸಿನಲ್ಲೂ ಇಟ್ಟಿದ್ದೆ ಈಗ ಹೊಸ ಆಫೀಸಿಗೆ ಬಂದಿದೆ.
ನನ್ನ ಬಲ ಭಾಗದ ಗೋಡೆ ಮೇಲೆ ನನ್ನ ಕ್ಯಾರಿಕೇಚರ್ ಬಿಡಿಸಿ ನೆನಪಿನ ಕಾಣಿಕೆ ನೀಡಿದವರು ಖ್ಯಾತ ಚಿತ್ರಕಾರ ನಿರಂಜನ ಕುಗ್ವೆ ಅವರು.
ಇದರ ಕೆಳಗಿನ ಬೀಟೆ ಮರದ ಫಲಕದಲ್ಲಿ ಶ್ರೀಗಂಧದಲ್ಲಿ ಕನ್ನಡ ಮತ್ತು ಸಂಸ್ಕೃತದಲ್ಲಿ ಅಕ್ಷರಗಳನ್ನು ಕೆತ್ತಿದ, ಗಣಪತಿ ವಿಗ್ರಹದ ಜೊತೆಯ ಶುಭ ಲಾಭ ಅಕ್ಷರದ ಜೊತೆ ಗಣಪತಿ ಸ್ತ್ರೋತ್ರ "#ವಕ್ರತುಂಡಾ_ಮಹಾಕಾಯ " ದ ನೆನಪಿನ ಕಾಣಿಕೆ ನೀಡಿದವರು ಸಾಗರದ ಉದಯೋನ್ಮುಖ ಶ್ರೀ ಗಂದ ಕೆತ್ತನೆಕಾರರಾಗಿದ್ದ ಷಣ್ಮುಖಪ್ಪ 1997 ರಲ್ಲಿ ಚಿಕ್ಕವಯಸ್ಸಲ್ಲಿ ಇಹಲೋಕ ತ್ಯಜಿಸಿದರು, ಇದಕ್ಕೆ ಹಾಕಿದ ಮಣಿಸರ ನೀಡಿದವರು ಅಖಿಲ ಭಾರತ ಗುರುಸ್ವಾಮಿಗಳ (ಆಯ್ಯಪ್ಪಸ್ವಾಮಿಗಳ) ಸಂಘದ ರಾಷ್ಟ್ರಾಧ್ಯಕ್ಷ ರೋಜಾ ಷಣ್ಮುಗಂ ಸ್ಟಾಮಿಗಳು.
ಚಿಕ್ಕ ಚಿಕ್ಕ ಎರೆಡು ನಾಯಿ ವಿಗ್ರಹ ನನ್ನ ಮಗಳು ನೀಡಿದ್ದು, ಬುದ್ದನ ಮುಖದ ಮರದ ವಿಗ್ರಹ ನೀಡಿದ್ದು ನನ್ನ ಎರಡನೆ ಸಹೋದರಿ.
ಆಗ್ರಾದಿಂದ ಅಮೃತ ಶಿಲೆಯ ತಾಜ್ ಮಹಲ್ ಮಾದರಿಯ ಉಡುಗೊರೆ ನೀಡಿದವರು ದುಬೈನಲ್ಲಿ ಜಾಹಿರಾತು ಸಂಸ್ಥೆ ನಡೆಸುವ ಸ್ವಾಮಿನಾಥನ್ ಅಯ್ಯರ್.
ಕುಂದಾಪುರ ತಾಲೂಕಿನ ಯಡಮೊಗೆಯ ಕೊಡಚಾದ್ರಿ ಹಲವರಿ ಮಠದ ಪೀಠಾಧಿಪತಿ ಪೀರ್ಯೊ ಯೋಗಿ ಜಗದೀಶನಾಥ್ ಜೀ ನೀಡಿದ ಸ್ಮರಣಿಕೆ ಶಿವ ಗೋರಕ್ಷ ನಾಥ, ಕಾಶೀ ಕಾಲ ಬೈರವ ದೇವರ ಚಿತ್ರಗಳು.
ನನ್ನ ಅಕ್ಕನ ಶಾಲಾ ಸಹಪಾಟಿ ಆನಂದಪುರಂನ ಒಂದು ಕಾಲದ ಪ್ರತಿಷ್ಟಿತ ಕೋಮಲ ವಿಲಾಸ್ ಹೋಟೆಲ್ ಮಾಲಿಕರಾದ ರಾಮಕಿಣಿಯವರ ಪುತ್ರಿ ನಳಿನಾ (ಕುಸುಮಾ ಕಾಮತ್) ರ ಪತಿ ಬೆಂಗಳೂರು HAL ನಲ್ಲಿ ಚೀಪ್ ಇ೦ಟಿಲೆಜೆನ್ಸ್ ಆಫೀಸರ್ ಈ ದಂಪತಿಗಳು ನಮ್ಮಲ್ಲಿಗೆ ಬಂದಾಗ ನೀಡಿದ ಸುಖೋಯ್ ಪೈಟರ್ ಜೆಟ್ SU-30 ಮಾದರಿ ನನ್ನ ಕಛೇರಿಯ ಟೇಬಲ್ ಗೆ ಒಂದು ಭೂಷಣ ಆಗಿದೆ.
ಹೀಗೆ ಅನೇಕ ಗೆಳೆಯರು ನೀಡಿದ ಅಪೂರ್ವ ಪುಸ್ತಕಗಳು ಮತ್ತಿತರ ವಸ್ತುಗಳನ್ನು ಮನೆಯಲ್ಲಿ ನನ್ನ ಕಣ್ಣೆದುರಿನಲ್ಲೇ ಜೋಡಿಸಿಕೊಂಡಿದ್ದೇನೆ.
ಉಡುಗೊರೆಗಳು ನೀಡಿದವರ ನೆನಪು ಹಸಿರಾಗಿಸುವ ಅದನ್ನು ನೀಡಿದ ಸಂದರ್ಭವನ್ನು ನೆನಪಿಸುವ ನೆನಪಿನ ಕಾಣಿಕೆಗಳು ಸ್ವೀಕರಿಸಿದವರಿಗೆ ಮಾತ್ರ ಯಾವತ್ತೂ ಅಮೂಲ್ಯವಾದದ್ದು ಅದನ್ನು ಎಲ್ಲೋ ಇಟ್ಟು ಮರೆತರೆ ನೆನಪಿನ ಕಾಣಿಕೆಯನ್ನು ಮತ್ತು ಅದನ್ನು ನೀಡಿದವರನ್ನು ಅಪಮಾನ ಮಾಡಿದಂತೆ.
ಆದ್ದರಿಂದ ನೆನಪಿನ ಕಾಣಿಕೆ ನನ್ನ ಸುತ್ತಮುತ್ತ ರಾರಾಜಿಸುತ್ತಾ ಇರುವುದರಿಂದ ನನಗೆ ಅದನ್ನು ನೀಡಿದವರ ನೆನಪು ಸದಾ ಇರುವಂತಾಗಿದೆ ಮತ್ತು ಆ ಸಂದರ್ಭವನ್ನು ಸದಾ ನೆನಪಿಸುತ್ತಿರುತ್ತದೆ.
Comments
Post a Comment