Blog number 998. ಬ್ರಾಂತೇಶ, ಕಾಂತೇಶ ಮತ್ತು ಶಾಂತೇಶ ಹೆಸರಿನ ಮೂರು ಪುರಾಣ ಪ್ರಸಿದ್ಧ ಆಂಜನೇಯ ದೇವಸ್ಥಾನ ಸೂಯೋ೯ದಯದಿಂದ ಸೂರ್ಯಾಸ್ತದ ಒಳಗೆ ಸಂದರ್ಶಿಸಿದರೆ ಕಾಶೀ ಯಾತ್ರೆಯಷ್ಟೇ ಪುಣ್ಯ ಎಂಬ ನಂಬಿಕೆ
ಶಿಕಾರಿಪುರದಲ್ಲಿ ಪ್ರಖ್ಯಾತ ಆಂಜನೇಯ ದೇವಾಲಯವಿದೆ ಭಕ್ತರು ಹುಚ್ಚುರಾಯಸ್ವಾಮಿ ದೇವಾಲಯ ಎಂದೇ ಕರೆಯುತ್ತಾರೆ ಈ ದೇವರಿಗೆ ಪುರಾಣದ ಹೆಸರು ಬ್ರಾ೦ತೇಶ ಅಂತ.
ಇಲ್ಲಿ೦ದ ಸುಮಾರು 60 ಕಿಮಿ ದೂರದಲ್ಲಿ ಬ್ಯಾಡಗಿ ಸಮೀಪ ಕದರ ಮುಂಡರಗಿ ಎಂಬಲ್ಲಿ ಬೃಹತ್ ಆಂಜನೇಯ ದೇವಾಲಯವಿದೆ ಈ ದೇವರ ಪುರಾಣದ ಹೆಸರು ಕಾ೦ತೇಶ
ಇಲ್ಲಿಂದ ಸುಮಾರು 40 ಕಿಮಿ ದೂರದಲ್ಲಿ ಚಿಕ್ಕೆರೂರು ಸಾತೇನಳ್ಳಿಯ ಆಂಜನೇಯ ದೇವಸ್ಥಾನವಿದೆ ಈ ದೇವರ ಪುರಾಣದ ಹೆಸರು ಶಾ೦ತೇಶ.
ಒಂದು ನಂಬಿಕೆ ಶತ ಶತಮಾನದಿಂದ ಈ ಬಾಗದಲ್ಲಿದೆ ಅದೇನೆಂದರೆ ಸೂಯೋ೯ದಯದಿಂದ ಸೂಯಾ೯ಸ್ತದ ಒಳಗೆ ಶಿಕಾರಿಪುರದ ಬ್ರಾಂತೇಶನ ದಶ೯ನ ಮಾಡಿ ನಂತರ ಕದರ ಮುಂಡರಗಿಯ ಕಾಂತೇಶನ ದಶಿ೯ಸಿ ಕೊನೆಯದಾಗಿ ಸಾತೇನಳ್ಳಿಯ ಶಾಂತೇಶನ ದಶ೯ನ ಮಾಡಿದರೆ ಕಾಶಿಯಾತ್ರೆಯಷ್ಟೇ ಪವಿತ್ರ
ಹಾಗೂ ಗ್ರಹ ದೋಷ, ಶನಿ ದೋಷಗಳು ಕೂಡ ಪರಿಹಾರ ಎಂಬುದು ನಂಬಿಕೆ ಮತ್ತು ಆಚರಣೆಯಲ್ಲಿದೆ.
1993ರಿಂದ ಈ ಯಾತ್ರೆ ಮಾಡಬೇಕು ಅಂತ ನಿಶ್ಚಯಿಸಿದ್ದರೂ ಸಾದ್ಯವೇ ಆಗಿರಲಿಲ್ಲ ಆಗ ನನ್ನ ವಯಸ್ಸು 28 ಅದು ಇವತ್ತು 20 I9 ರ ಅಕ್ಟೋಬರ್ 14ರಂದು ಈಡೇರಿತು ಸುಮಾರು 26 ವಷ೯ದ ನಂತರ !
Comments
Post a Comment