Blog number 1025. ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕದಲ್ಲಿ ಮುಕ್ತಾಯವಾಯಿತು ಅದರ ಪರಿಣಾಮ ಮತ್ತು ವಿಶ್ಲೇಷಣೆ
#ವ್ಯವಸ್ಥಿತವಾಗಿ_ಆಯೋಜಿಸಿದ್ದಾರೆ
#ಇದರ_ಹಿಂದೆ_ಪ್ರಶಾಂತ್_ಕಿಶೋರ್_ಇರಬಹುದು.
#ಕಾಂಗ್ರೇಸ್_ಪಕ್ಷದ_ಕಾಯ೯ಕರ್ತರಲ್ಲಿ_ಸಂಚಲನೆ_ಉಂಟುಮಾಡಿದೆ
#ಆಟಗಾರರ_ಮನಸ್ಥಿತಿಯಲ್ಲಿ_ಟೀಕಿಸದೆ_ವೈಯಕ್ತಿಕವಾಗಿ_ಅವಹೇಳನಕಾರಿ_ಟೀಕೆ_ಸರಿಯಾ?
ಪಾದಯಾತ್ರೆ ಮಾಡದಿದ್ದವರಿಗೆ ಪಾದಯಾತ್ರೆಯ ಆನಂದದ ಅನುಭವ ಸಿಗುವುದಿಲ್ಲ.
ಟ್ರೆಕಿಂಗ್ - ದೇವಾಲಯಗಳಿಗೆ ನಡೆದು ಹೋಗುವಾಗ ಸಿಗುವ ಅನುಭೂತಿಯೇ ಬೇರೆ.
ಹಾಗಂತ ಬಸ್ಸು ತಪ್ಪಿಸಿಕೊಂಡೋ, ಕಾಸಿಲ್ಲದೆ ನಡೆದು ಮನೆ ಮುಟ್ಟುವ ಕಷ್ಟ ಬೇರೆ.
ಏಸು ಕ್ರಿಸ್ತರ ಯಾತ್ರೆ,ಶಂಕರಾಚಾಯ೯ರ ಪಾದಯಾತ್ರೆ, ಗಾಂದೀಜಿ ದಂಡಿ ಯಾತ್ರೆ, ವಿನೋಬಾಜಿ ಭೂದಾನ ಚಳವಳಿಯ ಯಾತ್ರೆ, ಭಾರತ ಯಾತ್ರೆ,ಎನ್.ಟಿ.ಆರ್.ಪಾದಯಾತ್ರೆ, ರಾಜಶೇಖರ ರೆಡ್ಡಿ ಪಾದಯಾತ್ರೆ, ಜಗನ್ ರೆಡ್ಡಿ ಪಾದಯಾತ್ರೆ ...... ಹೀಗೆ ಈ ಎಲ್ಲಾ ಪಾದಯಾತ್ರೆಗಳ ಜೊತೆ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕೂಡ ಸೇರಿದೆ.
ಸೆಪ್ಟೆಂಬರ್ 2022 ರಿಂದ 10 ಜನವರಿ 2023ಕ್ಕೆ ಕನ್ಯಾಕುಮಾರಿಯಿಂದ ಪಂಜಾಬ್ ತನಕ ಪಾದಯಾತ್ರೆಯ ಕಾರ್ಯಕ್ರಮ ನಿಗದಿ ಆಗಿ ಪ್ರಕಟವಾಗಿದೆ, ಜನವರಿ 10 ರ ನಂತರ ಕಾಶ್ಮೀರದ ತನಕದ ಕಾಯ೯ಕ್ರಮ ಇನ್ನೂ ಅಂತಿಮವಾಗಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಬಾರತದಲ್ಲಿ ಪಾದಯಾತ್ರೆ ಪ್ರತಿಭಟನೆ ರಾಜಕೀಯ/ಸಾಮಾಜಿಕ ನಡೆಯಾಗಿ ಹಮ್ಮಿಕೊಂಡಿದೆ ಅದಕ್ಕೆ ನೀಡಿರುವ ಕಾರಣ
"ಅಸಹಿಷ್ಣುತೆ, ಆರ್ಥಿಕ ಸಮಸ್ಯೆ" "ಕೋಮುವಾದ / ನಿರುದ್ಯೋಗ / ಬೆಲೆ ಏರಿಕೆ / ಕೇಂದ್ರಿಕೃತ ರಾಜಕೀಯ" .
ಇದರಲ್ಲಿ ರಾಜಕೀಯ ಆಸಕ್ತರು, ಭಾರತೀಯ ಪ್ರಜೆಗಳು, ಸಂಘ ಸಂಸ್ಥೆಗಳು ಮತ್ತು ಹೋರಾಟಗಾರರು ಭಾಗವಹಿಸಲು ವಿನಂತಿಸಿದೆ.
ಈ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ ಇವರ ಜೊತೆ 118 ಮುಖಂಡರು ಪ್ರಾರಂಭದಿಂದ ಅಂತ್ಯದವರೆಗೆ ಜೊತೆಯಾಗಿರುತ್ತಾರೆ.
ಯೋಗೇಂದ್ರ ಯಾದವ್ ರ ಸ್ವರಾಜ್ ಇಂಡಿಯಾ ಜೊತೆಯಾಗಿದೆ.
ತಮಿಳುನಾಡಿನ DMK, ಮಹಾರಾಷ್ಟ್ರದ ಶಿವಸೇನೆ, NCP ಬೆಂಬಲ ಘೋಷಿಸಿದೆ.
ಗುಜರಾತ್ ಮತ್ತು ಹಿಮಾಚಲ ವಿದಾನ ಸಭಾ ಚುನಾವಣೆ ನಂತರವೇ ಈ ಯಾತ್ರೆ ಆ ಮಾರ್ಗದಲ್ಲಿ ತಲುಪುವುದರಿಂದ ಈ ಚುನಾವಣೆಗಳು ಗುರಿಯಾಗಿಸಿ ಈ ಯಾತ್ರೆ ಮಾಡುತ್ತಿಲ್ಲ ಎಂಬ ಕಾಂಗ್ರೇಸ್ ಪಕ್ಷದ ಸಮರ್ಥನೆ ಸರಿಯಾಗಿದ್ದರು ಈ ಯಾತ್ರೆಯ ದೂರದೃಷ್ಟಿ 2024ರ ಲೋಕ ಸಭಾ ಚುನಾವಣೆಯೇ ಗುರಿಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಈ ಯಾತ್ರೆಯನ್ನು ನೋಡಿದಾಗ ರಾಹುಲ್ ಗಾಂಧಿಯವರ ಪಾದಯಾತ್ರೆ ವ್ಯವಸ್ಥಿತವಾಗಿ ಆಯೋಜಿಸಿರುವುದು, ಪ್ರತಿ ದಿನದ ಕಾರ್ಯಕ್ರಮಗಳ ಅಚ್ಚುಕಟ್ಟುತನ, ಪಾದಯಾತ್ರೆ ಬಿಡುವಿನಲ್ಲಿ ನಡೆಸುವ ಸಂವಾದ, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಮೊದಲೇ ನಿರ್ಧರಿಸಿದ ವಿಶೇಷ ವ್ಯಕ್ತಿಗಳು ಅದರಲ್ಲೂ ಸಾಹಿತಿಗಳು - ಬರಹಗಾರರು - ಸಂತ್ರಸ್ಥರಿಗೆ ಹೆಚ್ಚು ಅವಕಾಶ ನೀಡಿದ್ದಾರೆ.
ರಾಜ್ಯದಲ್ಲಿ ಸಾಹಿತಿ ದೇವನೂರು ಮಹಾದೇವ, ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಕೊರಾನ ಕಾಲದಲ್ಲಿ ಮೃತರಾದ ಸಂತ್ರಸ್ಥ ಕುಟುಂಬ, ಲಂಕೇಶ್ ರ ಪತ್ನಿ ಮತ್ತು ಪುತ್ರಿ, ಕೋಲಾರದಲ್ಲಿ ಬಿದ್ದ ದೇವರ ಪಲ್ಲಕ್ಕಿ ಗುಜ್ಜು ಎತ್ತಿಕೊಟ್ಟಿದ್ದರಿಂದ ಬಹಿಷ್ಕಾರ ದಂಡ ಶಿಕ್ಷೆ ಅನುಭವಿಸುತ್ತಿರುವ ತಾಯಿ ಮಗ ಹೀಗೆ ಸಾಲು ಸಾಲು ವ್ಯಕ್ತಿಗಳ ಜೊತೆ ರಾಜ್ಯದ 15 ದಿನದ ಯಾತ್ರೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ಭಾಗಿಯಾಗುವಂತೆ ಮಾಡಿದ್ದಾರೆ, ರಾಜ್ಯದಲ್ಲಿ 89 ವಿವಿದ ರಾಜಕೀಯೇತರ ಸಂಘಟನೆಗಳು ಭಾಗಿಯಾಗಿದೆ.
ಇಷ್ಟು ವ್ಯವಸ್ಥಿತವಾಗಿ ಯೋಜಿಸಿದ ಈ ಪಾದಯಾತ್ರೆ ಸಾಗುತ್ತಿರುವ ರಾಜ್ಯದಲ್ಲಿ ಜನರ ಗಮನ ಸೆಳೆಯುತ್ತಿದೆ, ತುಕ್ಕುಹಿಡಿದ ಸೈಕಲ್ ನಂತಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಈ ಪಾದ ಯಾತ್ರೆ ಒವರ್ ಆಯಿಲ್ ಮಾಡಿದಂತೆ ಆಗಿದೆ.
ಬಿಜೆಪಿಯ ಅಧಿಕಾರದ ಶಕ್ತಿ ಪ್ರದರ್ಶನ, ಅವರ ಸದಾ ಕಾರ್ಯ ಚಟುವಟಿಕೆಯ ಸಂಘಟನೆಯ ಚತುರತೆ ಮತ್ತು ಸಾಮಾಜಿಕ ಜಾಲ ತಾಣದ ವ್ಯವಸ್ಥಿತ ಬಳಕೆಯಿಂದ ಕಾಂಗ್ರೇಸ್ ಕಾರ್ಯಕರ್ತರು ತಣ್ಣಗಾಗಿದ್ದರು ಈ ಪಾದಯಾತ್ರೆಯಿಂದ ಅವರೆಲ್ಲ ಹೆಚ್ಚು ಕ್ರಿಯಾಶೀಲರಾಗುವಂತಾಯಿತು.
ಈ ಪಾದಯಾತ್ರೆ ಸ್ಥಳಿಯ ಸಕಾ೯ರಗಳ ಬೆಲೆ ಏರಿಕೆ - ಲಂಚ - ಆಡಳಿತ ವೈಪಲ್ಯ ವಿಚಾರಗಳು ಆಡಳಿತ ವಿರೋದಿ ಅಲೆಯ ಜೊತೆ ಸಮ್ಮಿಳನಗೊಂಡು ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಅಂದಾಜಿಸಿ ರಾಹುಲ್ ಗಾಂಧಿ ಪಾದಯಾತ್ರೆಗೆ ಪರ್ಯಾಯವಾಗಿ ಬಿಜೆಪಿ " ಪರಿವಾರ ಬಚಾವ್ " ರ್ಯಾಲಿ ಪ್ರಾರಂಬಿಸಿದೆ.
ಬಿಜೆಪಿ ಪಕ್ಷ ಆಟಗಾರನ ಮನಸ್ಥಿತಿ (Sports Mentality)ಯಿಂದ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಟೀಕಿಸಬಹುದಾಗಿದ್ದರೂ ಆ ಪಕ್ಷದ ನಾಯಕರುಗಳು ಈ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದು ಮಾತ್ರ ವಿಚಿತ್ರವಾಗಿದೆ.
ಮಾಜಿ ಮಂತ್ರಿ ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕರ ಮಗಳ ಜೊತೆಯ ಪೋಟೋ ಟ್ವೀಟರ್ ನಲ್ಲಿ ಕೆಟ್ಟ ರೀತಿ ಪೋಸ್ಟ್ ಮಾಡಿ ನಂತರ ಸತ್ಯ ತಿಳಿದು ಡಿಲೀಟ್ ಮಾಡುವಂತ ಪ್ರಸಂಗ ಕೂಡ ಆಯಿತು.
ಸೆಪ್ಟೆಂಬರ್ 7 ರಿಂದ ಜನವರಿ 10 ರ ತನಕ 131 ದಿನಗಳಲ್ಲಿ 11 ರಾಜ್ಯ ಹಾದು ಹೋಗುವ ರಾಹುಲ್ ಗಾಂಧಿ ಪಾದಯಾತ್ರೆ ನಂತರದ 17 ದಿನಗಳಲ್ಲಿ ಕಾಶ್ಮೀರ ತಲುಪಿ 3500 ಕಿ.ಮಿ. ನ ಐತಿಹಾಸಿಕ ದಾಖಲೆಯ ಪಾದಯಾತ್ರೆ ಆಗಲಿದೆ.
ಈ ಪಾದಯಾತ್ರೆ ಯಾವುದೇ ಲಾಡ್ಜ್ ಹೋಟೆಲ್ ಬೆಳೆಸುವುದಿಲ್ಲ ಎನ್ನುವುದು ವಿಶೇಷ.
ಈ ಬ್ರಹತ್ ಪಾದಯಾತ್ರೆ ಹಮ್ಮಿಕೊಂಡು ಕಾಂಗ್ರೇಸ್ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ರಾಹುಲ್ ಗಾಂಧಿಗೆ ದೇಶದಲ್ಲಿ ಜನಪ್ರಿಯರನ್ನಾಗಿಸುವ ಈ ಪ್ರಯತ್ನದ ಹಿಂದೆ ಬುದ್ದಿವಂತ ತಂಡವೊಂದು ಕೆಲಸ ಮಾಡುತ್ತಿರುವುದು ಸುಳ್ಳಲ್ಲ ಇದು ಪ್ರಖ್ಯಾತ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ತಂಡ ಪರೋಕ್ಷವಾಗಿರುವ ಸಾಧ್ಯತೆ ಇದೆ ಅಂತ ಬಾವಿಸಿ ಬರೆದಿದ್ದೆ ಈ ಲೇಖನ ಓದಿ ದೇಶದ ಖ್ಯಾತ ಪತ್ರಕರ್ತ ಮಿತ್ರ ಡಿ.ಪಿ. ಸತೀಶ್ ಪ್ರತಿಕ್ರಿಯಿಸಿದ ಪ್ರಕಾರ ಇದು ಸುನಿಲ್ ಕುನುಗೊಳ ಎ೦ಬ ಚುನಾವಣಾ ತಜ್ಞರಂತೆ.
ಶೂನ್ಯ ಸಹಿಷ್ಣುತೆ ಪ್ರತಿಪಾದಿಸುವ ರಾಹುಲ್ ಗಾಂಧಿ ಈ ಪಾದಯಾತ್ರೆಯಿಂದ ಜನರ ಸಮೀಪ ಬರುವಂತಾಯಿತು, ತನ್ನ ಅಜ್ಜಿ ಪ್ರದಾನ ಮಂತ್ರಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂದಿ ಹತ್ಯೆಯಿಂದ ವಿಶೇಷ ರಕ್ಷಣಾ ಕವಚದಲ್ಲಿ ಬಾಲ್ಯ ಯೌವನ ಕಳೆದ ರಾಹುಲ್ ಗಾಂಧಿಗೆ ಪಾದಯಾತ್ರೆಯ ಅನುಭವ ಹೊಸ ನಾಯಕತ್ವ ನೀಡಲಿದೆ ಜೊತೆಗೆ ಅವರಿಗೆ ಈ ಹಿಂದೆ ವಿರೋದ ಪಕ್ಷಗಳು ಮಾಡಿದ್ದ ಖಾಯಂ ಬ್ರಾಂಡ್ ಪಪ್ಪು ಎಂಬ ಟ್ರೋಲಿಂಗ್ ಸುಳ್ಳು ಎಂದು ಸಾಬೀತಾಗಲಿದೆ.
Comments
Post a Comment