Blog number1018. ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷಕ್ಕೆ ಶಕ್ತಿ ಆಗಿದ್ದ ಪೈಲ್ವಾನರೂ ಆಗಿದ್ದ ಕೆ.ಎಂ.ಲಿಂಗಪ್ಪನವರು ಒಂದು ನೆನಪು.
ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.
ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು.
2 ರಿಂದ 3 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!
ಈಗ ಲಿಂಗಣ್ಣನವರಿಲ್ಲ, ಸಾರ್ಥಕ ಬದುಕು ಅವರದ್ದು , ಲಿಂಗಣ್ಣನವರು ವೃದ್ದಾಪ್ಯದ ಕಾರಣ ರಾಜಕಾರಣದಿಂದ ನಿವೃತ್ತರಾದ ಮೇಲೆ ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.
ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.
ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.
ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲಿಂಗಪ್ಪನವರು ವಯೋ ಸಹಜ ಅನಾರೋಗ್ಯದಿಂದ ಕಳೆದ ವಷ೯ ಇಹಲೋಕ ತ್ಯಜಿಸಿದ್ದಾರೆ.
ಅವರು ವಿಶ್ರಾ೦ತ ಜೀವನದಲ್ಲಿದ್ದಾಗ ಬೇಟಿ ಮಾಡಿದಾಗ ಅನೇಕ ರಾಜಕೀಯದ ಹಳೇಯ ನೆನಪು ಮಾಡಿಕೊಂಡರು.
Comments
Post a Comment