ದಶರಥ ಶೆಟ್ಟರನ್ನು ಆನಂದಪುರದ ಮೂಲದವರು ಮರೆಯುವಂತಿಲ್ಲ.
ಆಯ೯ವೈಶ್ಯ ಸಮಾಜದ ಇವರು ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವಾಗ ಅಲ್ಲಿ ಹಿಟ್ಟಿನ ಮಿಲ್ ಮತ್ತು ದಿನಸಿ ಅಂಗಡಿ ಸ್ಥಾಪಿಸಿ ದುಡಿಮೆ ಮಾಡಿದವರು, ಆಣೆಕಟ್ಟು ಕಾಮಗಾರಿ ಮುಗಿದು ಕೆಲಸಗಾರರೆಲ್ಲ ಹೋದ ಮೇಲೆ ಆನಂದಪುರಕ್ಕೆ ಬಂದು ನೆಲೆಸಿದರು.
ಆನಂದಪುರದ ಸಕಾ೯ರಿ ಆಸ್ಪತ್ರೆ ಪಕ್ಕ ಜಾಗ ಖರೀದಿಸಿ ಅಲ್ಲಿ ಹೋಲ್ ಸೇಲ್ ದಿನಸಿ ಅಂಗಡಿ, ಹಿಟ್ಟಿನ ಮಿಲ್ ಮತ್ತು ಕಾಫಿ ಪುಡಿ ಘಟಕ ಸ್ಥಾಪಿಸಿದ್ದರು.
ಆಗ ಆನಂದಪುರದಲ್ಲಿ ಯಹ್ಯಾ ಸಾಹೇಬರು ಮತ್ತು ಈಗಿನ ಡಾಕ್ಟರ್ ಪ್ರಭುರವರ ತಂದೆ ಮಾದವ ಪ್ರಭುರವರ ದೊಡ್ಡ ದಿನಸಿ ಅಂಗಡಿ ಮಾತ್ರ ಇದ್ದ ಕಾಲ.
ದಶರಥ ಶೆಟ್ಟರು ತಮ್ಮ ಸಣ್ಣ ಪುತ್ರ ಅಶೋಕ ಹೆಸರಲ್ಲಿ ಪ್ರಾರಂಬಿಸಿದ ಅಶೋಕ ಕಾಫಿ ಪುಡಿ ಈಗ ಶಿವಮೊಗ್ಗದಲ್ಲಿ ಇವರ ಇಬ್ಬರು ಮಕ್ಕಳು (ಪಾಂಡು ಮತ್ತು ಅಶೋಕ ) ಮುಂದುವರಿಸಿದ್ದಾರೆ, ಹಿರಿಯ ಮಗ ಚಿಕ್ಕಮಗಳೂರಲ್ಲಿ ಪ್ರಸಿದ್ಧ ಬ್ರಾಂಡ್ ವಾಸವಿ ಕಾಫಿ ಮಾಲಿಕರು.
ಆನಂದಪುರದಲ್ಲಿಯೇ ಉಳಿದ ಎರಡನೆ ಪುತ್ರ ಜಗದೀಶ್ ಶೆಟ್ಟರು ಕಮಷಿ೯ಯಲ್ ಕಾಂಪ್ಲೆಕ್ಸ್ ನಿಮಿ೯ಸಿದ್ದಾರೆ, ಟ್ರಾನ್ಸ್ ಪೋಟ್೯ ಮತ್ತು ಜಂಬಿಟ್ಟಿಗೆ ಕಲ್ಲಿನ ವ್ಯವಹಾರ ಮಾಡುತ್ತಿದ್ದರು ಜನರೆಲ್ಲ ಇವರನ್ನ ಕಾಪಿ ಪುಡಿ ಶೆಟ್ಟರೆಂದೇ ಕರೆಯುತ್ತಾರೆ ಪ್ರೀತಿಯಿಂದ.
ಊರಿನ ಎಲ್ಲಾ ದಾಮಿ೯ಕ ಕಾಯ೯ಕ್ರಮದಲ್ಲಿ ಮುಂಚೂಣಿಯಾಗಿ ವಿಶೇಷವಾಗಿ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ರಥೋತ್ಸವದಲ್ಲಿ ಹೆಚ್ಚು ಶ್ರಮವಹಿಸುತ್ತಿದ್ದರು.
ಇವತ್ತು ಇವರ 72 ನೇ ವಯಸ್ಸಲ್ಲಿ ಇಹಲೋಕ ತ್ಯಜಿಸಿದ್ದಾರೆ, ಆರೋಗ್ಯವಾಗಿ ಗಟ್ಟು ಮುಟ್ಟಾಗಿ ಯುವಕರನ್ನೂ ನಾಚಿಸುವಂತ ಚಟುವಟಿಕೆಯ ಇವರನ್ನ ಇಡೀ ಪ್ರಪ೦ಚವನ್ನೇ ಕಾಡುತ್ತಿರುವ ಸೋಂಕು ಕಾರಣವಾಗಿದೆ.
ಆನಂದಪುರದ ಹಿರಿಯ ವತ೯ಕರಾದ ಜಗದೀಶ್ ಶೆಟ್ಟರ ಆತ್ಮಕ್ಕೆ ಸದ್ಗತಿ ಸ್ವಗ೯ ಪ್ರಾಪ್ತಿಗೆ ದೇವರಲ್ಲಿ ಪ್ರಾಥಿ೯ಸುತ್ತೇನೆ
Comments
Post a Comment