Blog number 1016. ಜಿನೈಕ್ಯ ಜಂಗಲ್ ವಾಲೆ ಬಾಬಾರ ಮೂರನೆ ಪುಣ್ಯ ಸ್ಮರಣೆ ದಿನಾಂಕ 18-ಅಕ್ಟೋಬರ್ -2022 ಮಂಗಳವಾರ, ಯಮ ಸಲ್ಲೇಖನ ವೃತದಿಂದ ದೇಹ ತ್ಯಾಗ ಮಾಡಿದ ಕಠೋರ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರರು ನಮ್ಮಲ್ಲಿ ವಾಸ್ತವ್ಯ ಮಾಡಿದ್ದರು ಮತ್ತು ಅವರ ಸಂದರ್ಶನ ಮಾಡಿದ್ದೆ.
#ಯಮ_ಸಲ್ಲೇಖನ_ವೃತ_ಮಾಡಿ_ದೇಹ_ತ್ಯಾಗ_ಮಾಡಿದ_ಕಠೋರ_ಸಾದಕರು
#ಬ್ರಹ್ಮಚರ್ಯ_ಪಾಲಿಸುವ_ವಾಹನ_ಬಳಸದೆ_ಬರಿಕಾಲಿನಲ್ಲಿ_ಪರಿಕ್ರಮಿಸುವ
#ಆಹಾರ_ವಸ್ತ್ರವನ್ನು_ತ್ಯಜಿಸುವ_ಜೈನ_ಮುನಿಗಳು
#ಇಂತಹ_ಸಂತರು_ನಮ್ಮಲ್ಲಿ_ತಂಗಿದ್ದರು_ಅವರಿ೦ದ_ಆಶ್ರೀವಾದ_ಪಡೆದದ್ದು_ನನ್ನ_ಪೂರ್ವ_ಜನ್ಮದ_ಪುಣ್ಯ.
#ಅಕ್ಟೋಬರ್_18_ಅವರ_ಮೂರನೆ_ಪುಣ್ಯಸ್ಮರಣೆ
ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ #ರಾಷ್ಟ್ರ_ಸಂತ_108_ಶ್ರೀ_ಚಿನ್ಮಯ_ಸಾಗರ_ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ನಿಯಮ್ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ಒಂದು ತಿಂಗಳ ನಂತರ 12 ಅಕ್ಟೋಬರ್ 2019 ರಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದಿನಾಂಕ 18 ಅಕ್ಟೋಬರ್ 2019 ದೇಹ ತ್ಯಾಗ ಮಾಡಿ ಜಿನೈಕರಾದರು.
2022 ರ ಅಕ್ಟೋಬರ್ 18ಕ್ಕೆ ಅವರು ಜಿನೈಕ್ಯರಾಗಿ 3ನೇ ಪುಣ್ಯ ತಿಥಿ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಅವರ ಹುಟ್ಟೂರು ಜುಗಲ್ ಎಂಬ ಹಳ್ಳಿಯಲ್ಲಿ ಅವರ ಸಮಾದಿ ಇದೆ.
ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ .
ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಎಂದೇ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.
ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಿದ್ದರು.
ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ದರ್ಶನಕ್ಕೆ ಬಂದಿದ್ದರು.
ಇವರು ಮೂರು ಸಾವಿರಕ್ಕಿಂತ ಹೆಚ್ಚು ನಕ್ಸಲೈಟರನ್ನು ಮುಖ್ಯ ವಾಹಿನಿಗೆ ಕರೆತಂದ ಮಹಾನ್ ದಾಖಲೆ ಇವರದ್ದು.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗಲ್ ಎಂಬ ಹಳ್ಳಿ ಇವರ ಹುಟ್ಟೂರು.
ಜಂಗಲ್ ವಾಲೆ ಬಾಬರ ಆತಿಥ್ಯ ನೀಡುವ ಬಾಗ್ಯ ನನಗೆ ಸಿಕ್ಕಿತ್ತು ಅಂದಾಗ ಸತಾರದ ಜೈನ ಮುಖಂಡರು ಜೈನ ಪ್ರಮುಖರಾದ ದಮ೯ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಇನ್ನೂ ಸಿಕ್ಕಿಲ್ಲ ನಿಮಗೆ ಅವರ ದರ್ಶನ ಆಗಿದ್ದು ನಿಮ್ಮ ಅದೃಷ್ಟ ಅಂತ ಹೇಳಿದ್ದರು.
ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.
ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ್ರೀವಾದ ಮಾಡಿ ಹೋಗುತ್ತಾರೆ.
ನನ್ನ ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮರ ಸ್ಮರಣಾಥ೯ ನಿಮಿ೯ಸಿರುವ "ಕೃಷ್ಣ ಸರಸ ಕನ್ವೆನ್ಷನ್ ಹಾಲ್" ನ ಮಹಿಮೆ ಅಂತ ಬಾವಿಸುತ್ತೇನೆ.
ಜಂಗಲ್ ವಾಲೆ ಬಾಬ ಬರುವ ಹಿಂದಿನ ದಿನ ಸಾಗರದ ಜೈನ ಮುಖಂಡರಾದ ರಾಜ್ ಕುಮಾರ್ ಜೈನ್ ಮತ್ತು ವಿ.ಟಿ.ಸ್ವಾಮಿ ಬಂದು ನಾಳೆ ಒಬ್ಬ ಸಂತರು ಬರುತ್ತಾರೆ ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು ಅದರಂತೆ ಮರುದಿನ ಬಂದವರು ಜಂಗಲ್ ವಾಲೆ ಬಾಬ.
ಅವರು ಬಂದು ವಿರಾಜಮಾನರಾದ ನಂತರ ಮಾಲಿಕರನ್ನ ಕರೆಯಿರಿ ಅಂದರಂತೆ,ಅವರಾಗಿ ಕರೆದದ್ದರಿಂದ ಹೋಗಿ ದಶ೯ನ ಪಡೆದು ಅವರನ್ನ ಮಾತಿಗೆ ಎಳೆದೆ, ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಗೆ ಅವರ ಅನುಮತಿಯಿಂದ ಸಂದಶ೯ನ ಮಾಡಿದೆ, ಅವರು 3000ಕ್ಕೂ ಹೆಚ್ಚು ನಕ್ಸಲೈಟ್ಸ್ ರನ್ನ ಮುಖ್ಯ ವಾಹಿನಿಗೆ ತಂದ ಬಗ್ಗೆ ಅವರಿಗೆ ಪುನರ್ವಸತಿ ಪರಿಹಾರ ವ್ಯವಸ್ಥೆ ಮಾಡಿದ ಬಗ್ಗೆ ವಿವರಿಸಿದ್ದರು.
2015 ರಿಂದ 2016 ರ ವರೆಗೆ ಕನಾ೯ಟಕದ ಪ್ರಮುಖ ಜೈನ ಕೇಂದ್ರ ಸಂದಶಿ೯ಸಿದ್ದರು ಈ ಅವದಿಯಲ್ಲಿ ಎರೆಡು ಚಾತುಮಾ೯ಸ ಕನಾ೯ಟಕದಲ್ಲಿ ಮಾಡಿದ್ದಾರೆ ಒಂದು ಖಾನಾಪುರ ಮತ್ತೊಂದು ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ.
ದಮ೯ಸ್ಥಳದಲ್ಲಿ ಇವರಿಗೆ ವಿರೇಂದ್ರ ಹೆಗ್ಗಡೆಯವರು ನೀಡಿದ ಸ್ವಾಗತದ ನಂತರ ಇವರು ಹೋದಲ್ಲೆಲ್ಲ ಇವರನ್ನ ಬೇಟಿ ಮಾಡಿದ ಗಣ್ಯರ ಮಾಹಿತಿ ಟ್ವಿಟರ್ ನಲ್ಲಿ ಮತ್ತು ಅಂತರ್ಜಾಲದಲ್ಲಿ ನೋಡಿದಾಗ, ನಮ್ಮ ಆತಿಥ್ಯ ಸ್ವೀಕರಿಸಿದವರು, ಸಂದಶ೯ನಕ್ಕೆ ಅವಕಾಶ ನೀಡಿದವರು ಮತ್ತು ಆಶ್ರೀವದಿಸಿದವರು ಇವರೇಯೆ ? ಎಂಬ ಅನುಮಾನ ಉಂಟಾಗುತ್ತೆ, ಇಂತಹ ರಾಷ್ಟ್ರ ಸಂತರ ಸಂದಶಿ೯ಸಿದ ಹೆಮ್ಮೆ ನನ್ನದು.
Comments
Post a Comment