Blog number 1042. ಪ್ರೀತಿಗೆ ರಂಗೋಲಿ ಕಾರಣವಾದರೆ.. ಸಾವಿಗೆ ಜಾತಿ ಕಾರಣ.. ಎಂಬ ಶಿಷಿ೯ಕೆ ನೀಡಿ ನನ್ನ ಚೊಚ್ಚಲ ಕಾದಂಬರಿ ಕೆಳದಿ ಸಾಮ್ರಾಜ್ಯ ಮರೆತ ಬೆಸ್ತರ ರಾಣಿ ಚಂಪಕ ಓದಿ ವಿಮರ್ಶೆ ಮಾಡಿದ್ದಾರೆ ಪರಮಾನಂದ. ಇವರು ಖ್ಯಾತ ನಿರ್ದೇಶಕ ನಾಗಭರಣರ ಒಡನಾಡಿಗಳು.. ಒಂದು ಸಣ್ಣ ಪುಸ್ತಕ ಇಷ್ಟೆಲ್ಲ ಪರಿಣಾಮ ಬೀರುತ್ತೆ ಅಂತ ಕನಸಲ್ಲು ಕಂಡಿರಲಿಲ್ಲ.
ಸಿನಿಮಾ ಕ್ಷೇತ್ರದಂತೆ ರಾಜಕೀಯದಲ್ಲಿ ಬಿಜೆಪಿಯ ಎಸ್.ಸಿ.ಮೋಚ೯ದ ರಾಜ್ಯ ಕಾಯ೯ದರ್ಶಿ ಮೈಸೂರಿಗರು ಅವರಿಗೆ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ತುಂಬಾ ಮೆಚ್ಚುಗೆ ಆಗಿದೆ ಅಂತ ಹೇಳಿದ್ದಾರೆ ಅವರ ವಿಮಷೆ೯ ಇನ್ನೂ ಬಂದಿಲ್ಲ ಆದರೆ ಅವರ ಮೆಚ್ಚುಗೆಯ ಈ ಮಾತುಗಳನ್ನು ದಾಖಲಿಸಿದ್ದಾರೆ.
ನಾನು ಓದಿದ ಪುಸ್ತಕಗಳಲ್ಲಿ ಬಹಳ ಮೆಚ್ಚುಗೆಯ ಪುಸ್ತಕವಿದು...
ಇದು ಕೇವಲ ಕಾಲ್ಪನಿಕ ಕಾದಂಬರಿಯಲ್ಲ...
1) ಇತಿಹಾಸದ ದಾಖಲೆ
2) ಮುಗ್ದ ಸುಂದರಿ ಒಬ್ಬಳ 'ಆತ್ಮ' ಚರಿತ್ರೆ
3) ಹಿಂದುಳಿದ ಸಮುದಾಯ ಒಂದರ ನೋವಿನ ಕಥೆ
4) ಸುಳ್ಳಿಗೆ ಬಲಿಯಾದ ಒಂದು ಅಸಹಾಯಕ ಸತ್ಯಕತೆ
5) ವೀರನೊಬ್ಬನ ನಿಷ್ಕಲ್ಮಶ ಪ್ರೇಮಕಥೆ
6) ಇಂದು ಮಾಧ್ಯಮಗಳಂತೆ ಅಂದು ಮಧ್ಯಸ್ಥಿಕೆ ಜನರ ಸುಳ್ಳಿನ ವಿಷ ಸಾಂಕ್ರಾಮಿಕ ಕಥೆ.
7) ಸುಂದರಿ ಒಬ್ಬಳ ಪ್ರೀತಿಗೆ ರಂಗೋಲಿ ಕಾರಣವಾದರೆ, ಸಾವಿಗೆ ಜಾತಿ ಕಾರಣ.
ನನಗೆ ಈ ಪುಸ್ತಕದಿಂದ ಒಂದು ಒಳ್ಳೆಯ ಕಥೆ ಸಿಕ್ಕರೆ, ಅದರ ಜೊತೆಗೆ ಸರಳ ಸುಂದರ ಬರಹಗಾರರು ಸಿಕ್ಕರು.
ಶ್ರೀ ಅರುಣ್ ಪ್ರಸಾದ್‌ರವರು ತಮ್ಮ ಬರಹಗಳ ಸರಣಿಗಳ ಮೂಲಕ ಸಾಹಿತ್ಯ ಲೋಕದೊಳಗೆ ಬರಬೇಕೆಂಬುದು ನನ್ನ ವೈಯಕ್ತಿಕ ಆಗ್ರಹಪೂರ್ವಕ ಮನವಿ.
'ಇದು ಅಕ್ಷರಗಳಿಂದ ದ್ರಶ್ಯಕ್ಕೆ ಬರಲಿ ಸಾವಿರಾರು ಜನಕ್ಕೆ ಸತ್ಯ ತಿಳಿಯಲಿ' ಎಂಬುದು ನನ್ನ ಆಶಯ.
Comments
Post a Comment