Blog number 999. ಕಜ್ಜಿಗೆ ಕಾರಣವಾದ ಸ್ಕೇಬೀಸ್ ಕ್ರಿಮಿ ಈಗ ನಿಯಂತ್ರಣದಲ್ಲಿದೆ 1970 ಕ್ಕೆ ಹಿಂದೆ ಇದರ ಸಮಸ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಬೀರವಾಗಿ ಪರಿಗಣಿಸಿತ್ತು.
#ಇದು_1970ಕ್ಕಿಂತ_ಮುಂಚೆ_ವಿಶ್ವದಾದ್ಯಂತ_ಮಕ್ಕಳನ್ನು_ಹೈರಾಣು_ಮಾಡಿತ್ತು
#ವಿಶ್ವ_ಆರೋಗ್ಯಸಂಸ್ಥೆ_ಪ್ರಕಾರ_ವಿಶ್ವದಾದ್ಯಂತ_ಇನ್ನೂರು_ದಶಲಕ್ಷ_ಜನ_ಕಜ್ಜಿ_ಪೀಡಿತರು.
#ಕ್ರಿಸ್ತ_ಪೂರ್ವ_494ರಲ್ಲಿಯೇ_ಕಜ್ಜಿ_ಅವತರಿಸಿತ್ತು.
#ಉಷ್ಣಪ್ರದೇಶದ_ಭೂಮಧ್ಯ_ರೇಖೆಯಲ್ಲಿ_ಬರುವ_ದೇಶದಲ್ಲಿ_ಕಜ್ಜಿ_ಜಾಸ್ತಿ
#ಬರಗಾಲ_ಯುದ್ಧ_ಸಮಯ_ಜೈಲು_ಶಾಲೆಗಳು_ಕಜ್ಜಿ_ಕ್ರಿಮಿ_ಹರಡುವ_ಸಮಯ_ಸ್ಥಳ.
#ಕಜ್ಜಿಗೆ_ನಮ್ಮೂರ_ಹರಿಜನ_ಗುತ್ಯಜ್ಜಿ_ಔಷದಿ_ಪರಿಣಾಮಕಾರಿ_ಆಗಿತ್ತು.
1970 ರ ದಶಕದ ನಂತರ ಹುಟ್ಟಿದ ಮಕ್ಕಳಲ್ಲಿ ಕಜ್ಜಿ ಕಷ್ಟ ಅಷ್ಟಾಗಿ ಗೊತ್ತಿಲ್ಲ, ಅದಕ್ಕಿಂತ ಹಿಂದಿನವರೆಲ್ಲ ಕಜ್ಜಿಯಿಂದ ನರಳಿದವರೆ.
ಸ್ಕೇಬೀಸ್ ಎಂಬ ಅರ್ಧ ಮಿಲಿ ಮೀಟರ್ ಗಿಂತ ಸಣ್ಣ ಗಾತ್ರದ ಕ್ರಿಮಿ ಒಬ್ಬರಿಂದ ಇನ್ನೊಬ್ಬರಿಗೆ ಕೇವಲ 10 ನಿಮಿಷದ ಸಂಪರ್ಕದಲ್ಲಿ ಹರಡುವ ಮತ್ತು ಚರ್ಮದ ಮೇಲ್ಪದರಲ್ಲಿ ಬಿಲದಂತೆ ಕೊರೆದು ಕೊಂಡು, ಒಳ ಸೇರುವ ಕ್ರಿಮಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕೆರೆತ, ತುರಿಕೆ ಮತ್ತು ಕೀವಿನ ಕಜ್ಜಿ ಉಂಟು ಮಾಡುತ್ತದೆ.
ಸ್ಕೇಬೀಸ್ ಮತ್ತು ಅದರ ಮೊಟ್ಟೆ ಬರಿಗಣ್ಣಿಗೆ ಕಾಣಿಸುವುದಿಲ್ಲ, ಮೈಕ್ರೋಸ್ಕೋಪ್ ನಲ್ಲಿ ಮಾತ್ರ ನೋಡಬಹುದು.
ಇದು ಪರಾವಲಂಬಿ ಕ್ರಿಮಿ, ರೋಗ ನಿರೋದಕ ಶಕ್ತಿ ಇಲ್ಲದವರಲ್ಲಿ ಬೇಗ ಹರಡುತ್ತದೆ, ಎರಡರಿಂದ ಮೂರು ದಿನ ಜೀವಂತ ಆಗಿರುವ ಈ ಕ್ರೀಮಿ ಕೇವಲ 10 ನಿಮಿಷದಲ್ಲಿ ಸಂಪರ್ಕಕ್ಕೆ ಬಂದವರ ದೇಹಕ್ಕೆ ಸೇರಿ ಬಿಡುತ್ತದೆ.
ನಿತ್ಯ ಸ್ನಾನ, ಹಾಸಿಗೆ ಹೊದಿಕೆ ಬದಲಿಸದೆ ಇದ್ದರೆ ಈ ಸಮಸ್ಯೆ ಜಾಸ್ತಿ.
ವ್ಯಾಕ್ಯೂಮ್ ಕ್ಲೀನರ್ ನಿಂದ, ಬಿಸಿ ನೀರು ಅಥವ ಸ್ಟೀಮ್ ನಿಂದ ಈ ಕ್ರಿಮಿಯನ್ನು ಸುಲಭವಾಗಿ 50 ಡಿಗ್ರಿ ಪೆರಾನ್ ಹೀಟ್ ನಿಂದ 122 ಡಿಗ್ರಿ ಉಷ್ಣತೆಯಿಂದ ನಿವಾರಿಸಬಹುದು.
ಯುದ್ದ ಕಾಲದಲ್ಲಿ, ಬರಗಾಲದಲ್ಲಿ, ಜೈಲಿನಲ್ಲಿ, ಶಾಲೆ ಮತ್ತು ಹಾಸ್ಟೇಲ್ ನಲ್ಲಿ ಈ ಕಜ್ಜಿ ಹೆಚ್ಚು ಹರಡುತ್ತದೆ.
ಆಗೆಲ್ಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹಾಸಿಗೆ ಅಂದರೆ ಸೆಣಬಿನ ಗೋಣಿ ಚೀಲ ಇದರಿಂದ ಸ್ಕೇಬೀಸ್ ಕ್ರಿಮಿ ಹೆಚ್ಚು ಹರಡುತ್ತಿತ್ತು.
ಈಗ ನಿತ್ಯ ಸ್ನಾನ, ಹಾಸಿಗೆ - ಹೊದಿಕೆಯ ಸ್ವಚ್ಚತೆ ಮತ್ತು ಇನ್ನೊಬ್ಬರ ಟವೆಲ್ ಅಥವ ಉಡುಪು ಬಳಸದ ಆರೋಗ್ಯ ಕಾಳಜಿಯ ಕಾಲಮಾನದಲ್ಲಿ ಕಜ್ಜಿ ನಿಯಂತ್ರಣದಲ್ಲಿದೆ.
1960 ರ ದಶಕದಲ್ಲಿ ಕಜ್ಜಿ ಆದ ಮಕ್ಕಳಿಗೆ ಔಷದಿ ನಮ್ಮ ಊರಲ್ಲಿ ನೀಡುತ್ತಿದ್ದದ್ದು ನಮ್ಮ ಹಳ್ಳಿ ಯಡೇಹಳ್ಳಿಯ ಹರಿಜನ ಕಾಲೋನಿಯ ದೇಸಿ ಡಾಕ್ಟರ್ ಗುತ್ಯಜ್ಜಿ.
ಗುತ್ಯಜ್ಜಿ - ಗುತ್ಯಕ್ಕ ಎಂದು ಕರೆಯುವ ಹಣ್ಣು ಹಣ್ಣು ಮುದುಕಿ ಬಹುಶಃ ಆ ಕಾಲದಲ್ಲಿ 80 ರ ವಯೋಮಾನ ಕಜ್ಜಿ ಆದ ನಮ್ಮಂತ ಮಕ್ಕಳ ಕಜ್ಜಿ ಪ್ರಮಾಣ ನೋಡಿ ಔಷದಿ ತಯಾರಿಸಲು ಕೆಲ ಮೂಲ ವಸ್ತು ಕೇಳುತ್ತಿದ್ದರು.
ಕಹಿ ಜೀರಿಗೆ, ಕೊಬ್ಬರಿ ಎಣ್ಣೆ, ತಾಮ್ರದ ನಾಣ್ಯ ಮತ್ತು ಹಿತ್ತಾಳೆಯ ಸಣ್ಣ ಪಾತ್ರೆ ಅದಕ್ಕೆ ಅವರದ್ದೇ ಆದ ಎಲೆ-ನಾರು-ಬೇರು ಸೇರಿಸಿ ಕುದಿಸಿ ನಂತರ ತಣ್ಣಗೆ ಮಾಡಿ ಆ ಔಷದಿ ತಾಮ್ರ ಮತ್ತು ಹಿತ್ತಾಳೆಯಲ್ಲಿ ಕಿಲುಬು ಬಿಟ್ಟು ನೀಲಿ ಬಣ್ಣ ತಲುಪಿದ ಮೇಲೆ ನಮ್ಮ ಕಜ್ಜಿ ಮೇಲೆ ದಿನಕ್ಕೆ ಮೂರು ಬಾರಿ ಲೇಪಿಸಿದರೆ ಕಜ್ಜಿ ನಾಪತ್ತೆ ಆಗುತ್ತಿತ್ತು.
19 ನೇ ಶತಮಾನದಲ್ಲಿ ಯುರೋಪಿನಲ್ಲಿ ಗಂದಕದ ಜೊತೆ ಎಣ್ಣೆ ಸೇರಿಸಿ ಕಜ್ಜಿ ಮೇಲೆ ಲೇಪಿಸುವ ಆಚರಣೆ ಮತ್ತು ಗುತ್ಯಜ್ಜಿ ಔಷದಿಗೆ ಸಾಮ್ಯತೆ ಇದೆ.
ಈಗ ಕಜ್ಜಿ ನಿಯಂತ್ರಣದಲ್ಲಿದೆ.
Comments
Post a Comment