#ಅಂಜಲಿ #ಒಂಬತ್ತು_ವರ್ಷದ_ಹಿಂದೆ_ಈ_ದಿನ_ನಮ್ಮ_ಮನೆಗೆ_ಬಂದಿದ್ದಳು #ಮೇ_17_2016 #ಅದೇ_ವರ್ಷದ_ಆಗಸ್ಟ್_15ಕ್ಕೆ_ಬಿಡುಗಡೆ_ಮಾಡಿದೆ #monkey #anjali #memories #petlovers ಅಂಜಲಿ ಅದು ನಾವಿಟ್ಟ ಹೆಸರು ಅವಳ ಹೆಸರು ಬೇರೆ ಇರಬೇಕು ಅವಳು ನಮ್ಮೂರು ಬಂದು ಸೇರಿ ಊರಿನ ಬಾಲಕರ ಗಮನ ಸೆಳೆದದ್ದು ಹೇಗಂದರೆ... ಅವಳಿಗೆ ಮನುಷ್ಯರ ಸಹವಾಸ ಚೆನ್ನಾಗಿತ್ತು ಆದ್ದರಿಂದ ಮಕ್ಕಳೆಲ್ಲ ಕಡಲೆಕಾಯಿ ಬಾಳೆಹಣ್ಣು ತೋರಿಸಿದರೆ ಅವರ ಹತ್ತಿರ ಯಾವುದೇ ಭಯ ಇಲ್ಲದೆ ಬಂದು ಕೈಯಿಂದ ಸ್ವೀಕರಿಸಿ ಹೋಗುತ್ತಿದ್ದಳಂತೆ, ಇದರಿಂದ ಇವಳು ನಮ್ಮೂರಿನ ಲಾರಿ ಮಾಲೀಕರಾದ ಅಮೀರ್ ಸಾಹೇಬರ ಮಕ್ಕಳ ಜೊತೆಯಾಗಿ ಅವರ ಮನೆ ಸೇರಿದಳು. ಆದರೆ ಅವಳು ಕೆಲವೊಮ್ಮೆ ಜನರಿಗೆ ಕಚ್ಚಲು ಬರುವುದು ಸಿಟ್ಟಾಗುವುದು ಇವೆಲ್ಲ ಅವಳ ನೆಗೆಟಿವ್ ಅಂಶಗಳಾಗಿತ್ತು, ಅಮೀರ್ ಸಾಹೇಬರು ಅವರ ಮಗನ ಹತ್ತಿರ ಇದನ್ನು ನನಗೆ ಸಾಕಲು ಕಳಿಸಿ ಕೊಟ್ಟಿದ್ದರು, ನನಗೂ ಮಂಗ ಒಂದನ್ನು ಸಾಕುವ ಆಸೆ ಪೂರೈಸಿರಲಿಲ್ಲ ಇದು ಹೆಣ್ಣು ಮಂಗ ಆಗಿತ್ತು ತಕ್ಷಣ ಇದಕ್ಕೊಂದು ಬೋನು- ಚೈನು, ಬೋನಿನಿಂದ ಹೊರ ಬಿಟ್ಟಾಗ ನಮ್ಮ ಹಲಸಿನ ಮರ ಅಮಟೆ ಮರ ಮೇಲೆ ಹತ್ತಿ ಇಳಿಯುವಷ್ಟು ಉದ್ದದ ಸೊಂಟಕ್ಕೆ ಹಗ್ಗ ಹೀಗೆ ಎಲ್ಲ ವ್ಯವಸ್ಥೆ ಆಯಿತು. ನಿತ್ಯ ಬೆಳಿಗ್ಗೆ ತಿನ್ನಲು ಹಸಿ ಶೇಂಗಾ, ಬಾಳೆಹಣ್ಣು - ಕ್ಯಾರೆಟ್ -ಸೌತೆಕಾಯಿ -ಪೇರಲೆ ಹಣ್ಣು ಇತ್ಯಾದಿ ಸಂಗ್ರಹವಾಯಿತು ನಂತ...