Skip to main content

Posts

Showing posts with the label With Bangarappa

3523.ಬಂಗಾರಪ್ಪ

#ಎಸ್_ಬಂಗಾರಪ್ಪನವರು #ಆನಂದಪುರಂ_ಶ್ರೀಮತಿ_ಕನಕಮ್ಮಾಳ್_ಆಸ್ಪತ್ರೆ_ಕಾಯ೯ಕ್ರಮದಲ್ಲಿ #ಶಿವಮೊಗ್ಗ_ಜಿಲ್ಲಾ_ಪಂಚಾಯತ್_ನಿಂದ_ಎಕ್ಸ್_ರೇ_ಯ೦ತ್ರ_ಮಂಜೂರು_ಮಾಡಿಸಿದ್ದೆ #ಉದ್ಘಾಟನೆ_ಆಗ_ಶಿವಮೊಗ್ಗದಿಂದ_ಸಂಸದರಾಗಿದ್ದ_ಬಂಗಾರಪ್ಪರಿಂದ #ಆಗ_ಶಾಸಕರಾಗಿದ್ದ_ಕಾಗೋಡು_ತಿಮ್ಮಪ್ಪ_ಜಿಲ್ಲಾ_ಪಂಚಾಯತ್_ಉಪಾಧ್ಯಕ್ಷ_ತಿಪ್ಪಾನಾಯಕರ_ಉಪಸ್ಥಿತಿ #ಸ್ಥಳಿಯ_ಜಿಲ್ಲಾ_ಪಂಚಾಯತ್_ಸದಸ್ಯನಾಗಿ_ನನ್ನ_ಅಧ್ಯಕ್ಷತೆ #ShivamoggaNews #govtofkarnataka #KarnatakaCongress  #SBangarappa #parilment #exchiefminister #kagoduthimmappa       ಅದು 1996 ನೆ ಇಸವಿ ಆಗಸ್ಟ್ 19 ಅವತ್ತು ನಮ್ಮ ಊರು ಆನಂದಪುರಂನ ಶ್ರೀಮತಿ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆಯ ಎಕ್ಸ್ ರೇ ಯಂತ್ರದ ಉದ್ಘಾಟನಾ ಸಮಾರಂಭದ ದಿನ.      ಈ ಎಕ್ಸ್ ರೇ ಯಂತ್ರ ಆನಂದಪುರಂ ಆಸ್ಪತ್ರೆಗೆ ಬಂದ ಮೊದಲ ಯಂತ್ರ,     ಆಗಷ್ಟೆ ಲೋಕ ಸಭಾ ಸದಸ್ಯರಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಾಂಗ್ರೇಸ್ ಪಕ್ಷದ ಅವರ ಷಡ್ಡಕ ಕೆ.ಜಿ. ಶಿವಪ್ಪರ ಎದರು ಸ್ವರ್ಧಿಸಿ ಆಯ್ಕೆ ಆಗಿದ್ದರು.    ಸಾಗರದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಬಂಗಾರಪ್ಪರ ವಿರುದ್ಧವಾಗಿ ಚುನಾವಣೆ ಮಾಡಿದ್ದರು.     ನಾವೆಲ್ಲ ಬಂಗಾರಪ್ಪರ ಅಭಿಮಾನಿಗಳಾಗಿ ತನು-ಮನ-ಧನದೊಂದಿಗೆ ಅವರ ಗೆಲುವಿಗಾಗಿ ಶ್ರಮಿಸಿದ್ದೆವು...