#ಎಸ್_ಬಂಗಾರಪ್ಪನವರು
#ಆನಂದಪುರಂ_ಶ್ರೀಮತಿ_ಕನಕಮ್ಮಾಳ್_ಆಸ್ಪತ್ರೆ_ಕಾಯ೯ಕ್ರಮದಲ್ಲಿ
#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ನಿಂದ_ಎಕ್ಸ್_ರೇ_ಯ೦ತ್ರ_ಮಂಜೂರು_ಮಾಡಿಸಿದ್ದೆ
#ಉದ್ಘಾಟನೆ_ಆಗ_ಶಿವಮೊಗ್ಗದಿಂದ_ಸಂಸದರಾಗಿದ್ದ_ಬಂಗಾರಪ್ಪರಿಂದ
#ಆಗ_ಶಾಸಕರಾಗಿದ್ದ_ಕಾಗೋಡು_ತಿಮ್ಮಪ್ಪ_ಜಿಲ್ಲಾ_ಪಂಚಾಯತ್_ಉಪಾಧ್ಯಕ್ಷ_ತಿಪ್ಪಾನಾಯಕರ_ಉಪಸ್ಥಿತಿ
#ಸ್ಥಳಿಯ_ಜಿಲ್ಲಾ_ಪಂಚಾಯತ್_ಸದಸ್ಯನಾಗಿ_ನನ್ನ_ಅಧ್ಯಕ್ಷತೆ
#ShivamoggaNews #govtofkarnataka #KarnatakaCongress
#SBangarappa #parilment #exchiefminister #kagoduthimmappa
ಅದು 1996 ನೆ ಇಸವಿ ಆಗಸ್ಟ್ 19 ಅವತ್ತು ನಮ್ಮ ಊರು ಆನಂದಪುರಂನ ಶ್ರೀಮತಿ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆಯ ಎಕ್ಸ್ ರೇ ಯಂತ್ರದ ಉದ್ಘಾಟನಾ ಸಮಾರಂಭದ ದಿನ.
ಈ ಎಕ್ಸ್ ರೇ ಯಂತ್ರ ಆನಂದಪುರಂ ಆಸ್ಪತ್ರೆಗೆ ಬಂದ ಮೊದಲ ಯಂತ್ರ,
ಆಗಷ್ಟೆ ಲೋಕ ಸಭಾ ಸದಸ್ಯರಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಾಂಗ್ರೇಸ್ ಪಕ್ಷದ ಅವರ ಷಡ್ಡಕ ಕೆ.ಜಿ. ಶಿವಪ್ಪರ ಎದರು ಸ್ವರ್ಧಿಸಿ ಆಯ್ಕೆ ಆಗಿದ್ದರು.
ಸಾಗರದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಬಂಗಾರಪ್ಪರ ವಿರುದ್ಧವಾಗಿ ಚುನಾವಣೆ ಮಾಡಿದ್ದರು.
ನಾವೆಲ್ಲ ಬಂಗಾರಪ್ಪರ ಅಭಿಮಾನಿಗಳಾಗಿ ತನು-ಮನ-ಧನದೊಂದಿಗೆ ಅವರ ಗೆಲುವಿಗಾಗಿ ಶ್ರಮಿಸಿದ್ದೆವು.
ಆನಂದಪುರ0ನ ಆಸ್ಪತ್ರೆಯ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಒಂದೇ ವೇದಿಕೆಯಲ್ಲಿ ಹೇಗೆ ಮಾತಾಡುತ್ತಾರೆ ಎಂಬ ಕುತೂಹಲ ತಾಲ್ಲೂಕಿನಾದ್ಯಂತ ಇತ್ತು.
ಇದು 1996ರಲ್ಲಿ ಬಂಗಾರಪ್ಪರಿಂದ ಆನಂದಪುರಂ ಕನಕಮ್ಮಾಳ್ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಿಂದ ನೀಡಿದ ಎಕ್ಸರೇ ಯಂತ್ರ ಉದ್ಘಾಟನಾ ಕಾರ್ಯಕ್ರಮದ ನೆನಪಿನ ಚಿತ್ರ.
ಆಗಿನ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪನವರು ಮತ್ತು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಅಧ್ಯಕ್ಷತೆ ವಹಿಸಿದ್ದೆ.
ಇಡೀ ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಈ ಆಸ್ಪತ್ರೆ ದೊಡ್ಡ ಆಸ್ಪತ್ರೆ ಇದನ್ನು ನಿರ್ಮಿಸಿ ಊರಿಗೆ ದಾನ ಮಾಡಿದವರು ಆನಂದಪುರಂನ ಕೊಡುಗೈ ದಾನಿ- ಭೂ ಮಾಲಿಕರಾದ ಆನಂದಪುರಂ ರಾಮಕೃಷ್ಣ ಅಯ್ಯಂಗಾರರು.
ಸ್ವಾತಂತ್ರ್ಯ ಪೂರ್ವದಲ್ಲಿ ಇವರ ಪತ್ನಿ ಶ್ರೀಮತಿ ಕನಕಮ್ಮಾಳ್ ಮೃತರಾದಾಗ ಅವರ ಆಭರಣಗಳನ್ನು ಮಾರಿ ಪತ್ನಿ ಸ್ಮರಣಾರ್ಥ ಈ ಆಸ್ಪತ್ರೆ ನಿರ್ಮಿಸುತ್ತಾರೆ ಮತ್ತು ಔಷದಿ ಖರೀದಿಗಾಗಿ ಆ ಕಾಲದಲ್ಲಿ ಒಂದು ಲಕ್ಷ ರೂಪಾಯಿ ಎಪ್.ಡಿ. ಇಟ್ಟಿದ್ದಾರೆ.
ಇವರ ಪುತ್ರರೇ ವಿದ್ಯಾ ಮಂತ್ರಿ - ಶಿವಮೊಗ್ಗ ಲೋಕಸಭಾ ಸದಸ್ಯರೂ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರೂ ಆಗಿದ್ದ ಎ.ಆರ್.ಬದರಿನಾರಾಯಣ ಅಯ್ಯಂಗಾರರು.
ಆಗ ಸ್ಥಳೀಯರು ಬಿದ್ದು ಮೂಳೆ ಮುರಿದುಕೊಂಡರೆ ಈ ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರ ಇಲ್ಲದಿದ್ದರಿಂದ ಸಾಗರ ಅಥವ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು ಆದ್ದರಿಂದ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಹಠ ಹಿಡಿದು 15 ಲಕ್ಷ ಮಂಜೂರು ಮಾಡಿಸಿ ಈ ಯಂತ್ರ ತರಿಸಿದ್ದೆ.
ಅವತ್ತು ಬಂಗಾರಪ್ಪ -ಕಾಗೋಡು ಎದುರಾ ಬದುರಾ ಆದರೂ ಪರಸ್ಪರ ಮುಗುಳು ನಗಲಿಲ್ಲ ಮಾತಾಡಲಿಲ್ಲ.
ಕಾರ್ಯಕ್ರಮದ ನಂತರ ಬಂಗಾರಪ್ಪ ಆಪ್ತರ ಎದರು dont care ಎಂಬ ಮಾತಾಡಿದ್ದರು.
ನಿನ್ನೆ 26 ಅಕ್ಟೋಬರ್ ಬಂಗಾರಪ್ಪರ ಹುಟ್ಟು ಹಬ್ಬದಲ್ಲಿ ಈ ಚಿತ್ರ ಅನೇಕ ನೆನಪು ತಂದಿತು.
Comments
Post a Comment