#ಬನವಾಸಿ_ರೋವೂಪ್_ಸಾಹೇಬರು_ಡಾಕ್ಟರ್_ಆದ_ಕಥೆ.
#ಅನಾನಸ್_ಕಿಂಗ್_ಬನವಾಸಿ_ರೋವೂಪ್_ಸಾಹೇಬರ_ಐದನೇ_ಪುಣ್ಯಸ್ಮರಣೆ.
#ದಾರವಾಡ_ಕೃಷಿ_ವಿಶ್ವವಿದ್ಯಾಲಯದ_ಗೌರವ
#ಡಾಕ್ಟರೇಟ್_ಪಡೆದ_ರಾಜ್ಯದ_ಮೊದಲ_ರೈತ.
#ನನ್ನ_ಮತ್ತು_ರೋವೂಪ್_ಸಾಹೇಬರ_ಮೊದಲ_ಬೇಟಿಯ_ನೆನಪು
#ಡಾಕ್ಟರ್_ಅಬ್ದುಲ್_ರೋವೂಪ್_ಅಬ್ದುಲ್_ಕರೀಂ_ಶೇಖ್_ಬನವಾಸಿ
#ಅವರ_ಕೃಷಿ_ಸಾಧನೆ_ಮುಂದಿನ_ತಲೆಮಾರಿಗೂ_ಒಂದು_ಸಾಧನೆಯ_ಕೈಪಿಡಿ_ಆಗಿದೆ.
#ananas #ananasking #pineapple #pineapplelove #Banavasi #darwad #Agriuniversity #drrovopsaheb
ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ ಅದಕೆ ಕಾರಣ ಇವರು ಅನಾನಸ್ ಬೆಳೆ ಬೃಹತ್ ವಾಣಿಜ್ಯ ಬೆಳೆ ಆಗಿ ರಾಷ್ಟ್ರಮಟ್ಟದ ಮಾರುಕಟ್ಟೆಯಲ್ಲಿ ಪರಿಚಯಿಸಿದ ಸಾಧಕರು ಇವರು.
ಕೃಷಿಯನ್ನು ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು ಸಾಧನೆಯ ಕೈಪಿಡಿ ಆಗಿದೆ.
ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.
ಇವರ ಸಾದನೆ ಆ ಮಟ್ಟದ್ದು
ಉ.ಕ.ಜಿಲ್ಲೆಯ ಬನವಾಸಿ ವಾಸಿ ಆದ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.
ಇದು ಕೃಷಿ ವಿಶ್ವವಿದ್ಯಾಲಯ ಇವರ ಸಾಧನೆಗೆ ನೀಡಿದ ಗೌರವ ಡಾಕ್ಟರೇಟ್ ಮತ್ತು ರೈತರೊರ್ವರಿಗೆ ಡಾಕ್ಟರೇಟ್ ನೀಡಿದ ಮೊದಲ ವ್ಯಕ್ತಿ ಈ ಅನಾನಸ್ ಕಿಂಗ್ ಬನವಾಸಿ ರೋವುಪ್ ಸಾಹೇಬರು.
ರೋವೂಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರ ಕೆಲವರದ್ದು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ.
ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ #ಜಾನಕಪ್ಪನವರು ಡಾಕ್ಟರ್ ರೋವೂಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.
ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುತ್ತಾ ಕುಳಿತಿದ್ದವು.
ಆಗ ಒಂದು ವಿಶೇಷ ನಡೆಯಿತು ರೋವುಪ್ ಸಾಹೇಬರ ಮನೆಯ ಡೈನಿಂಗ್ ಹಾಲ್ ನಿಂದ ನನ್ನ ಮುಂಬೈನ ಗೆಳೆಯ ವಿಜಯ್ ಗಡ್ಕರ್ ಬಂದರು ಅವರ ಹಿಂದೆ ರೋವುಪ್ ಸಾಹೇಬರು.
ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮತ್ತು ನಿರ್ವಹಣೆ ಮಾಡುತ್ತಾರೆಂದು ನಂತರ ತಿಳಿಯಿತು.
ಆ ಕಾರಣದಿಂದ ಅವರು ರೋವುಪ್ ಸಾಹೇಬರ ಅತಿಥಿ ಆಗಿದ್ದರು ಇದರಿಂದ ರೋವೂಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು.
ಎಕರೆ ಒ0ದರಲ್ಲಿ ಸರಾಸರಿ 30 ಟನ್ ಅನಾನಸ್ ಬೆಳೆ ತೆಗೆಯುವ ಇವರ ವಿಧಾನವೇ ಬಿನ್ನ, ಇವರಿಂದಲೇ ಅನಾನಸ್ ಬೆಳೆಯ ಹಬ್ ಆಗಿದೆ ಬನವಾಸಿ.
ಅನಾನಸ್ ಒಯ್ಯಲು ದೂರದ ದೆಹಲಿ ಪಂಜಾಬಿನಿಂದ ಖರೀದಿದಾರರು ಬರುತ್ತಾರೆ.
ಅನಾನಸ್ ಸೀಸನ್ ನಲ್ಲಿ ಉತ್ತರ ಭಾರತದ ದೊಡ್ಡ ದೊಡ್ಡ ಟ್ರಕ್ ಗಳು ಅನಾನಸ್ ಹಣ್ಣು ತುಂಬಿಕೊಂಡು ಹೋಗುತ್ತದೆ.
ಇವರದ್ದೇ ಸ್ವಂತ ಅನಾನಸ್ ಹಣ್ಣು ಸಂಸ್ಕರಣದ ಘಟಕ ಸ್ಥಾಪಿಸಿದ್ದಾರೆ.
ದಿನಕ್ಕೆ 10 ರಿಂದ 20 ಟನ್ ಹಣ್ಣು ಸಂಸ್ಕರಣ ಮಾಡುತ್ತಾರೆ.
ಇವರ ಪುತ್ರ ಸಿಸಿ೯ ರಸ್ತೆಯಲ್ಲಿ ಇನ್ನೊಂದು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ.
ಇವರ ಕೃಷಿ ವಿದಾನ ವಿಬಿನ್ನ ನೂರಾರು ಎಕರೆ ಖುಷ್ಕಿ ಜಮೀನು ಅನಾನಸ್ ಬೆಳೆಯಲು ಗುತ್ತಿಗೆಗೆ ಪಡೆಯುತ್ತಾರೆ.
ಅಲ್ಲಿ ನೀರಿಗಾಗಿ ಬೋರ್ ವೆಲ್ ತೆಗೆಸುತ್ತಾರೆ ನಂತರ ದೊಡ್ಡ ಮಟ್ಟದ ಅನಾನಸ್ ಕೃಷಿ ಪ್ರಾರಂಬಿಸುತ್ತಾರೆ.
ಅನಾನಸ್ ಬೆಳೆ ತೆಗೆದು ಲಾಭದಿಂದ ಅದೇ ಜಮೀನು ಖರೀದಿಸಿ ಬಾಳೆ ಹಾಕಿ ಅದರ ಮಧ್ಯ ಅಡಿಕೆ ಹಾಕುತ್ತಾರೆ ಆರೇಳು ವರ್ಷದಲ್ಲಿ ಅದನ್ನು ಅತ್ಯುತ್ತಮ ಅಡಿಕೆ ತೋಟವಾಗಿ ಬದಲಿಸಿಬಿಡುವ ಕುಶಾಗ್ರಮತಿ ಅವರು.
2007 ರಲ್ಲಿ ಅವರ ಹಿಡಿತದಲ್ಲಿ 2000 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಅನಾನಸ್, ಬಾಳೆ ಮತ್ತು ಅಡಿಕೆ ಬೆಳೆ ಇತ್ತು.
ಅವರ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಂದದ್ದು, ಸುರಿಗಿ ಹೂವಿನ ದಂಡೆ ಮಾರಿ ಜೀವನ ಮಾಡಿದ್ದು ನೆನಪಿಸಿಕೊಂಡಾಗ ಅವರ ಕಣ್ಣು ತೇವ ಆಗಿತ್ತು.
ಪ್ರಾಥಮಿಕ ಶಿಕ್ಷಣವೂ ಪೂಣ೯ ಮಾಡಲಾಗದ ಬಡತನ ಈಗಿನ ಕೃಷಿ ಸಾಹಸದಿಂದ ಕೃಷಿ ವಿಶ್ವವಿದ್ಯಾಲಯ ಒ೦ದು ಗೌರವ ಡಾಕ್ಟರೇಟ್ ಕೊಡುವ ಮಟ್ಟಕ್ಕೆ ಬೆಳೆದಿದ್ದನ್ನ ಸ್ವತಃ ಅವರೇ ಅವರು 1972 ರಲ್ಲಿ ಖರೀದಿಸಿದ ಹಳ್ಳಿ ಕೊಪ್ಪದ ತೋಟದಲ್ಲಿ ವಿವರಿಸಿದ್ದರು.
ಅವತ್ತು ನಮಗೆಲ್ಲ ಅವರ ತೋಟದ ಎಳನೀರು ಕುಡಿಸಿ, ತಿನ್ನಲು ಅನಾನಾಸ್ ಕೊಟ್ಟು ಜೊತೆಗೆ ಸಂಸ್ಕರಿಸಿದ ಅನಾನಸ್ ಟಿನ್ ಗಳನ್ನ ಕೊಟ್ಟಿದ್ದರು.
16 ಅಕ್ಟೋಬರ್ 2020 ರಂದು ಡಾಕ್ಟರ್ ರೋವೂಪ್ ಸಾಹೇಬರು ಇಹ ಲೋಕ ತ್ಯಜಿಸಿದರು.
ಇವರ ಹತ್ತಿರ ಅವತ್ತು ದಾಸ್ತಾನಿದ್ದ ಕಾಳು ಮೆಣಸು ಒ0ದು ಸಾವಿರ ಕ್ವಿಂಟಾಲ್ ಗೂ ಹೆಚ್ಚು.
ಕೃಷಿ ಒಂದನ್ನ ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು. ಸಾಧನೆಯ ಕೈಪಿಡಿ ಆಗಿದೆ.
ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.
Comments
Post a Comment