#ಆನಂದಪುರಂನ_ಈ_ಶಿಲಾಶಾಸನ_ಸ್ಥಳಾಂತರಿಸಿ_ಸಂರಕ್ಷಿಸಬೇಕು
#ಅಂದಾಸುರದ_ಗೋನೇಶ್ವರ_ಸೂರ್ಯಮಾರ್ತಾಂಡೇಶ್ವರ_ದೇವಾಲಯ
#ನಿರ್ಮಿಸಿದ_ವಿಶ್ವಕರ್ಮಿ_ಚಿಕ್ಕನಿಗೆ_ಸಾಮಂತ_ಗೋರರಸ
#ನೀಡಿದ_ಬೂದಾನದ_ಶಿಲಾಶಾಸನ
#ಈಗ_ಅಂದಾಸುರದಲ್ಲಿ_ಈ_ದೇವಾಲಯ_ನಶಿಸಿ_ಹೋಗಿದೆ.
#Anandapuram #shivamoga #ShivamoggaNews #NationalHighway69 #NationalNews #shivamoggadistrictadminisration #karnataka #archeologicalsurveyofindia
983 ವರ್ಷದ ಹಿಂದೆ ಈ ಶಿಲಾ ಶಾಸನ ನಿರ್ಮಿಸಲಾಗಿದೆ ಈ ಶಿಲಾ ಶಾಸನ ಇರುವ ರಸ್ತೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಮ್ಮೂರು ಆನಂದಪುರಂ ಸಮೀಪವಿದೆ.
ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮತ್ತು ಫ್ಲೈ ಓವರ್ DPR ಆಗಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.
ಈ ಕಾಮಗಾರಿ ಪ್ರಾರಂಭವಾದರೆ ಈ ಶಿಲಾ ಶಾಸನ ರಾಷ್ಟ್ರೀಯ ಹೆದ್ದಾರಿ 69 ರ ಮಧ್ಯ ಭಾಗಕ್ಕೆ ಬರುತ್ತದೆ.
ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ವಿಶ್ವಕರ್ಮಿಗೆ ಭೂದಾನ ಮಾಡಿದ ಶಾಸನ ಇದು.
ಈಗ ಅಂದಾಸುರದಲ್ಲಿ ಈ ಶಾಸನದಲ್ಲಿ ತಿಳಿಸಿದ ದೇವಾಲಯಗಳು ಯಾವುದೂ ಇಲ್ಲ.
ಗೋನೇಶ್ವರ ಮತ್ತು ಸೂರ್ಯಮಾರ್ತಾಂಡೇಶ್ವರ ಎಂಬ ದೇವಾಲಯಗಳು ಈ ಒಂದು ಸಾವಿರ ವಷ೯ದಲ್ಲಿ ನಶಿಸಿ ಹೋಗಿರಬೇಕು.
ಈ ಶಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದು ವಾಹನ ಸಂಚಾರ ದಟ್ಟಣೆಯಿಂದ ಯಾವುದೇ ಅವಘಡ ಸಂಭವಿಸಿದರೆ ಈ ಪ್ರಾಚಿನ ಶಾಸನ ಕಳೆದುಕೊಳ್ಳುವ ಅಪಾಯ ಇದೆ.
ಆನಂದಪುರಂನಿಂದ ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ಆಚಾಪುರ ಸಮೀಪದಲ್ಲಿ ಎಡಭಾಗದಲ್ಲಿ ರಸ್ತೆ ಪಕ್ಕದಲ್ಲಿದೆ.
ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮತ್ತು ಫ್ಲೈ ಓವರ್ DPR ಆಗಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಈ ಕಾಮಗಾರಿ ಪ್ರಾರಂಭವಾದರೆ ಈ ಶಿಲಾ ಶಾಸನ ರಾಷ್ಟ್ರೀಯ ಹೆದ್ದಾರಿ 69 ರ ಮಧ್ಯ ಭಾಗಕ್ಕೆ ಬರುತ್ತದೆ.
ಆದ್ದರಿಂದ ಈ ಶಿಲಾ ಶಾಸನ ಯಾವ ಕಾರಣಕ್ಕೂ ಹಾಳಾಗದಂತೆ ಸಂರಕ್ಷಿಸಿ ಇದೇ ರಸ್ತೆ ಅಂಚಿನಲ್ಲೇ ಸೂಕ್ತ ಜಾಗದಲ್ಲಿ ಅಳವಡಿಸಬೇಕಾಗಿದೆ.
ಈ ಬಗ್ಗೆ ಇತಿಹಾಸ ಆಸಕ್ತರು ಆಸಕ್ತಿ ವಹಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ಲೈಒವರ್ ಕಾಮಗಾರಿ ಸಂದರ್ಭದಲ್ಲಿ ಈ ಶಿಲಾ ಶಾಸನ ಮಣ್ಣಿನಲ್ಲಿ ಮುಚ್ಚಿ ಹೋಗುವ ಸಂಭವ ಹೆಚ್ಚಾಗಿದೆ.
ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಒಂದು ಮಹತ್ವದ ಮೈಲಿಗಲ್ಲಿನ ಶಾಸನವಾಗಿದೆ.
ಇದು ನಿರ್ಮಿಸಿದ ಕಾಲ, ದಾನ ಪಡೆದವರು ಎಲ್ಲರೂ ಮುಖ್ಯವಾಗುತ್ತಾರೆ.
ಆನಂದಪುರಂ ಸುತ್ತಮುತ್ತಲಿನ ಶಿಲಾಶಾಸನ ಮತ್ತು ತಾಮ್ರಪತ್ರಗಳ ದಾಖಲೆಯಲ್ಲಿ ಈ ರೀತಿ ದಾಖಲಿಸಿದ್ದಾರೆ.
4) ಎಪಿಗ್ರಾಫಿಯ ಕ್ರ.ಸಂ. 109. ಕ್ರಿಶ 1042 AD.
ಆಚಾಪುರ ರಾ.ಹೆ. 69ರಲ್ಲಿ 8 ಅಡಿ ಎತ್ತರ X 4 ಅಡಿ ಅಗಲದ ಬೃಹತ್ ಶಿಲಾ ಶಾಸನ ಇದಾಗಿದೆ.
ಆನಂದಪುರಂನಿಂದ ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ಆಚಾಪುರ ಸಮೀಪದಲ್ಲಿ ಎಡಭಾಗದಲ್ಲಿ ರಸ್ತೆ ಪಕ್ಕದಲ್ಲಿ ಕ್ರಿಶ. 1042 ರಲ್ಲಿ ಸಮೀಪದ ಅಂದಾಸುರದಲ್ಲಿ ಗೋನೇಶ್ವರ ಮತ್ತು ಸೂರ್ಯಮಾರ್ತಾಂಡ ದೇವಾಲಯ ನಿಮಿ೯ಸಿದ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸ ಅಂದಾಸುರದ ಎರೆಡು ದೇವಾಲಯ ನಿರ್ಮಿಸಿದ ಕಮ್ಮಾರ ಚಿಕ್ಕನಿಗೆ ಭೂದಾನ ನೀಡಿದ ಶಿಲಾ ಶಾಸನ ಇದಾಗಿದೆ.
Comments
Post a Comment