#ಕಾಗೋಡು_ಸತ್ಯಾಗ್ರಹ
#ರೂವಾರಿ_ಹೆಚ್_ಗಣಪತಿಯಪ್ಪರ_ಹನ್ನೊಂದನೆ_ಪುಣ್ಯಸ್ಮರಣೆ_ಇವತ್ತು
#ಜನನ_3_ಆಗಸ್ಟ್_1924
#ಮರಣ_30_ಸೆಪ್ಟೆಂಬರ್_2014.
#ನಮ್ಮೂರು_ಕೆಂಜಿಗಾಪುರದಿಂದ_ಮು೦ಡುಗೋಡಿಗೆ_ಟಿಬೆಟಿಯನ್_ಕ್ಯಾಂಪ್_ವರ್ಗಾಯಿಸಿದವರು
#ಈ_ಸ್ಮರಣಾರ್ಥ_ನಮ್ಮ_ಊರಿನ_ಕೆಂಜಿಗಾಪುರ_ರಸ್ತೆಯ_ಸರ್ಕಾರಿ_ಶಾಲೆಯಲ್ಲಿ
#ಗಣಪತಿಯಪ್ಪ_ರಂಗಮಂದಿರ_ನಿರ್ಮಾಣ_ಮಾಡಿಸಿದ್ದು
#ಅವರ_ಆತ್ಮಚರಿತ್ರೆ_ಬರೆಸಿದ್ದು
#ಕಾಗೋಡಿನಿಂದ_ಕಡಿದಾಳಿಗೆ_ಕಾಗೋಡು_ಸುವರ್ಣಜ್ಯೋತಿ_ಒಯ್ದಿದ್ದು_ನನಗೆ_ಬಂದ_ಭಾಗ್ಯ
#Ganapathiyappa #kagaoduraithahorata #vadnala #shanthaverigopalagowda #ramamanoharalohiya #jayaprakashnarayan #KGVadeyar
ಕಾಗೋಡು ಸತ್ಯಾಗ್ರಹದ ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪ ಭಾರತ ದೇಶದ ಭೂ ಹೋರಾಟದಲ್ಲಿ ಅಚ್ಚಳಿಯ ಶಾಶ್ವತ ಹೆಸರು.
ಅವರ ಜನನ 3- ಆಗಸ್ಟ್-1924:ಮರಣ 30 - ಸೆಪ್ಟೆಂಬರ್ -2014 .
ಇವತ್ತು ಅವರ 11 ನೇ ಪುಣ್ಯತಿಥಿಯ ಸ್ಮರಣೆಯ ದಿನ.
ಗಣಪತಿಯಪ್ಪರು ಬದುಕಿದ್ದಾಗ ಅವರಿಗೆ ಅವಮಾನ ಮಾಡಿದವರು, ಗೇಲಿ ಮಾಡಿದವರು, ವಿನಾಃ ತೊಂದರೆ ಕೊಟ್ಟವರು ನೂರಾರು ಮಂದಿ ಮತ್ತು ಅಂತಹ ನೂರಾರು ಘಟನೆ ನನ್ನ ಕಣ್ಣೆದುರು ಇದೆ.
ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ 2002 ರಲ್ಲಿ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರೆಸಿ ಪ್ರಕಟಿಸಿದ್ದೆ.
ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನದಲ್ಲಿದಾಗ ಆ ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಮತ್ತು ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನಗಳು ನಡೆದಿತ್ತು.
ಪುಸ್ತಕ ಬಿಡುಗಡೆ ನಂತರ ಗಣಪತಿಯಪ್ಪರ ಆತ್ಮ ಚರಿತ್ರೆ ಬಗ್ಗೆ ಕೆಟ್ಟ ವಿಮಶೆ೯ ಬರೆದ ವಿಮರ್ಶಕರು ನಮ್ಮ ಜಿಲ್ಲೆಯವರೆ.
ಕಾಗೋಡಿನಲ್ಲಿ #ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ ತೀರ್ಥಹಳ್ಳಿ ತಾಲೂಕಿನ ಕಡಿದಾಳಿನ #ಕಡಿದಾಳುಮಂಜಪ್ಪರ ಸಮಾದಿವರೆಗೆ ಒಯ್ದ #ಕಾಗೋಡು_ಸುವಣ೯_ಜ್ಯೋತಿ_ಜಾಥಾ ರಿಸರ್ವ ಪೋಲಿಸ್ ವ್ಯಾನ್ ರಕ್ಷಣೆಯಲ್ಲಿ ಕಾಗೋಡಿನಲ್ಲಿ ಹಿರಿಯ ಸಮಾಜವಾದಿ ಎಂ.ಪಿ.ಈಶ್ವರಪ್ಪ ಅವರಿಂದ ಉದ್ಘಾಟಿಸಲಾಯಿತು ಇದು ಗಣಪತಿಯಪ್ಪರಿಗೆ ಅಪಾರ ನೋವು ತರಿಸಿತ್ತು.
ನಂತರ ಜ್ಯೋತಿ ತಾಳಗುಪ್ಪ - ಸಾಗರ - ಆನಂದಪುರಂ ತಲುಪಿ ಸುವರ್ಣ ಕಾಗೋಡು ಜ್ಯೋತಿ ನಮ್ಮೂರ ಐತಿಹಾಸಿಕ #ಕೆಂಜಿಗಾಪುರದ_ವೀರಭದ್ರ ದೇವಾಲಯದಲ್ಲಿ ಇರಿಸಿದ್ದೆವು.
ಕಾಗೋಡು ಹೋರಾಟದ ರೂವಾರಿ #ಗಣಪತಿಯಪ್ಪ, ಇವರ ಆತ್ಮಚರಿತ್ರೆ ಬರೆದ ಸಮಾಜವಾದಿ ಲೇಖಕ #ಕೋಣಂದೂರುವೆಂಕಪ್ಪ ಗೌಡರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಿವಮೊಗ್ಗದ #ಮಾದಪ್ಪನವರು
ಆ ದಿನ ರಾತ್ರಿ ನಮ್ಮ ಮನೆಯಲ್ಲೇ ತಂಗಿದ್ದರು.
ಹೀಗೆ ಮರೆತು ಹೋದ ಅನೇಕ ನೆನಪುಗಳು ನೆನಪಾಯಿತು ಇದರಲ್ಲಿ ಈ ಮೂರು ಘಟನೆಗಳು ಕಾಗೋಡು ಸತ್ಯಾಗ್ರಹದ ನೇತಾರರಿಗೆ ನಾನು ಸಲ್ಲಿಸಿದ ವಿಶೇಷ ಗೌರವವಾಗಿ ನನ್ನ ನೆನಪಿನಲ್ಲಿ ಉಳಿದಿದೆ.
1924 ರ ಆಗಸ್ಟ್ 3 ರಂದು ಸಿದ್ಧಾಪುರ ತಾಲ್ಲೂಕಿನ ಹೊಸೂರಿನಲ್ಲಿ ಕುರುವತ್ತಿ ಕನ್ನಪ್ಪ ಮತ್ತು ಕನ್ನಮ್ಮ ದಂಪತಿಗಳ ಕಿರಿಮಗನಾಗಿ ಜನಿಸಿದವರು ಗಣಪತಿಯಪ್ಪ ಮುಂದೆ ಇಡೀ ಭಾರತ ದೇಶದಲ್ಲಿ ಚರಿತ್ರೆಯಾದ ಭೂಮಿ ಹೋರಾಟವಾದ ಕಾಗೋಡು ಭೂಹೋರಾಟದ ನೇತಾರರಾದರು.
ಲೋಹಿಯಾ -ಜೇಪಿ - ಮದುಲಿಮೆ ಮುಂತಾದ ಮಹಾನ್ ನಾಯಕರ ಪಾದ ಸ್ಪರ್ಶದಿಂದ ಈ ಭೂಮಿ ಪಾವನ ಆಯಿತು, ಈ ಹೋರಾಟದ ಮೂಸೆಯಿಂದ ಹೊರಬಂದ ಶಾಂತವೇರಿ ಗೋಪಾಲಗೌಡರು ಸ್ವಾತಂತ್ರ್ಯ ಭಾರತದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆ 1952 ರಲ್ಲಿ ನಡೆದಾಗ ಸಾಗರ ತಾಲ್ಲೂಕಿನ ಮೊದಲ ಶಾಸಕರಾಗಿ ಆಯ್ಕೆ ಆದರು.
ಅವರ ಹೋರಾಟದ ಪ್ರಭಾವದಿಂದ ಬಂಗಾರಪ್ಪ, ಜೆ.ಹೆಚ್.ಪಟೇಲರು, ಕಾಗೋಡು ತಿಮ್ಮಪ್ಪ ಪ್ರಸಕ್ತ ರಾಜಕಾರಣದಲ್ಲಿ ಮೇರು ಪರ್ವತಗಳಾದರು.
ಗಣಪತಿಯಪ್ಪರ ಸಹೋದರ #ಕುರುವತ್ತಿ_ತಿಮ್ಮಪ್ಪರಿಗೆ ತಮಗೆ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರು ಮಂಜೂರು ಮಾಡಿದ್ದ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತನ ಕೆಂಜಿಗಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಮೀನಿನ ಕೆಳಗಿನ ನೀರಾವರಿ ಜಮೀನು ಬಿಟ್ಟು ಕೊಟ್ಟು ಅವರ ಕುಟುಂಬ ಇಲ್ಲಿ ನೆಲೆಸಲು ಕಾರಣರಾದರು.
ಈ ಜಮೀನು ಮಂಜೂರು ಆಗಲು ಒಂದು ಕಾರಣವಿದೆ ಏನೆಂದರೆ ಆಗ ಸರ್ಕಾರ ಟಿಬೆಟ್ ಸಂತ್ರಸ್ಥರ ಪುನರ್ವಸತಿಗಾಗಿ ಆನಂದಪುರ೦ ಹೋಬಳಿ ಕೆಂಜಿಗಾಪುರ ಕೇಂದ್ರವಾಗಿಸಿ ಸುಮಾರು 8 ಸಾವಿರ ಎಕರೆ ಪ್ರದೇಶ ಗುರುತಿಸಿತ್ತು.
ಆಗಲೇ ಸ್ಥಳಿಯ ಶರಾವತಿ ಹಿರೇ ಬಾಸ್ಕರ ಆಣೆಕಟ್ಟು ಮುಳುಗಡೆ ಆಗಿ ಅನೇಕ ಸಂತ್ರಸ್ಥರು ಈ ಊರಿಗೆ ಬಂದು ನೆಲೆಸಿದ್ದರು.
ಅವರ ಪರವಾಗಿ ಲಿಂಗನಮಕ್ಕಿ ಆಣೆಕಟ್ಟು ವಿರೋಧಿಸಿ ಗಣಪತಿಯಪ್ಪನವರು ತಮ್ಮ ರೈತ ಸಂಘದ ಮೂಲಕ ಹೋರಾಟ ಮಾಡಿದ್ದರು ಆ ಪರಿಚಯದಿಂದ ರೈತರೆಲ್ಲ ಗಣಪತಿಯಪ್ಪರಿಗೆ ಮನವಿ ಮಾಡಿ ನಿಮ್ಮ ಗೆಳೆಯರಾದ ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ ಅವರಿಗೆ ಈ ಊರಿನಲ್ಲಿ ಟಿಬೇಟಿಯನ್ ಕ್ಯಾಂಪ್ ಮಾಡದಂತೆ ಮಾಡಿಸಿ ಇದರಿಂದ ನಾವೆಲ್ಲ ಇಲ್ಲಿಂದ ಇನ್ನೊಂದು ಸಾರಿ ಸಂತ್ರಸ್ತರಾಗಿ ಇನ್ನೆಲ್ಲಿಗೋ ಸ್ಥಳಾಂತರವಾಗುವುದರಿಂದ ತಪ್ಪಿಸಿ ಎಂದು ವಿನಂತಿಸುತ್ತಾರೆ.
ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರು ಅವರ ಗೆಳೆಯ ಗಣಪತಿಯಪ್ಪರ ಮನವಿ ಪುರಸ್ಕರಿಸಿ ಟಿಬೇಟಿಯನ್ ಕ್ಯಾಂಪಿಗೆ ಮುಂಡುಗೋಡಿನಲ್ಲಿ ಜಮೀನು ಮಂಜೂರು ಮಾಡಿಸಿದರು ಸರ್ಕಾರದ ಯೋಜನೆಯಿಂದ ತಮ್ಮ ಜನರಿಗೆ ತೊಂದರೆ ಆಗುವುದನ್ನು ಈ ರೀತಿ ತಪ್ಪಿಸಿದ ಕೀರ್ತಿ ಗಣಪತಿಯಪ್ಪನವರದ್ದು.
ಆ ಸಂದರ್ಭದಲ್ಲೇ ಕಡಿದಾಳರು ಸ್ಥಳದಲ್ಲೇ ಸಾಗರ ತಾಲೂಕಿನ 12 ಜನ ಭೂರಹಿತ ಸ್ವಾತಂತ್ರ ಹೋರಾಟಗಾರರಿಗೆ ತಲಾ ಎರೆಡು ಎಕರೆ ಕೆಂಜಿಗಾಪುರದಲ್ಲಿ ಜಮೀನು ಕೂಡ ಮಂಜೂರು ಮಾಡಿದ್ದರು.
ಈ ಎಲ್ಲಾ ಗಣಪತಿಯಪ್ಪರ ಹೋರಾಟದ ಸ್ಮರಣಾರ್ಥವಾಗಿ ನಮ್ಮ ಊರು ಕೆಂಜಿಗಾಪುರ ರಸ್ತೆಯ ಯಡೇಹಳ್ಳಿ ಸರ್ಕಾರಿ ಶಾಲಾ ಅವರಣದಲ್ಲಿ ರಂಗ ಮಂದಿರ ನಿರ್ಮಿಸಿ ಅದಕ್ಕೆ #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪ_ರಂಗಮಂದಿರ ಎಂದು ನಾಮಕರಣ ಮಾಡಿ ಗಣಪತಿಯಪ್ಪ ದಂಪತಿಗಳಿಂದಲೇ ಉದ್ಘಾಟನೆ ಮಾಡಿಸಿದ್ದೆ ಇದು ನನ್ನ ಸಾರ್ಥಕ ಸ್ಮರಣೆಯಾಗಿ ದಾಖಲಾಗಿದೆ.
ಗಣಪತಿಯಪ್ಪರ ಸಹೋದರಿ ಕುಟುಂಬ ಸಿದ್ದಾಪುರದ ಬೇಡಕಣಿಯ ಶ್ರೀಮಂತ ಮನೆತನ, ಮಹಾತ್ಮಾ ಗಾಂಧೀಜಿ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆಸಿದ ಸಭೆಯಲ್ಲಿ ಗಾಂಧೀಜಿ ನೆರೆದ ಜನರಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಈ ಆಂದೋಲನಕ್ಕೆ ಆರ್ಥಿಕ ಸಹಾಯ ಯಾಚಿಸಿದಾಗ ಇವರ ಸಹೋದರಿ ಧರಿಸಿದ್ದ ಬಂಗಾರದ ಒಡವೆಯೆಲ್ಲ ತೆಗೆದು ಗಾಂಧೀಜಿಗೆ ಅರ್ಪಿಸಿದ್ದನ್ನು ಗಣಪತಿಯಪ್ಪನವರು ಅನೇಕ ಬಾರಿ ನೆನಪಿಸಿಕೊಂಡಿದ್ದರು.
ಗಣಪತಿಯಪ್ಪರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರೆಸಿ ಪ್ರಕಟಿಸಿದ್ದೆ.
ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನದಲ್ಲಿದಾಗ ಆ ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನಗಳು ನಡೆದಿತ್ತು.
ಪುಸ್ತಕ ಬಿಡುಗಡೆ ನಂತರ ಗಣಪತಿಯಪ್ಪರ ಆತ್ಮ ಚರಿತ್ರೆ ಬಗ್ಗೆ ಕೆಟ್ಟ ವಿಮಶೆ೯ ಬರೆದ ವಿಮರ್ಶಕರು ನಮ್ಮ ಜಿಲ್ಲೆಯವರೆ.
ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ ತೀರ್ಥಹಳ್ಳಿ ತಾಲೂಕಿನ ಕಡಿದಾಳಿನ ಕಡಿದಾಳು ಮಂಜಪ್ಪರ ಸಮಾದಿವರೆಗೆ ಒಯ್ದ #ಕಾಗೋಡು_ಸುವಣ೯_ಜ್ಯೋತಿ_ಜಾಥಾ ರಿಸರ್ವ ಪೋಲಿಸ್ ವ್ಯಾನ್ ರಕ್ಷಣೆಯಲ್ಲಿ ಮಾಜಿ ಶಾಸಕ ಎಲ್.ಟಿ.ಹೆಗಡೆ ಅವರಿಂದ ಉದ್ಘಾಟಿಸಿ ತಾಳಗುಪ್ಪ - ಸಾಗರ - ಆನಂದಪುರಂ ತಲುಪಿ ಸುವರ್ಣ ಕಾಗೋಡು ಜ್ಯೋತಿ ನಮ್ಮೂರ ಐತಿಹಾಸಿಕ #ಕೆಂಜಿಗಾಪುರದ_ವೀರಭದ್ರ ದೇವಾಲಯದಲ್ಲಿ ಇರಿಸಿದ್ದೆವು.
ಕಾಗೋಡು ಹೋರಾಟದ ರೂವಾರಿ #ಗಣಪತಿಯಪ್ಪ, ಇವರ ಆತ್ಮಚರಿತ್ರೆ ಬರೆದ ಸಮಾಜವಾದಿ ಲೇಖಕ #ಕೋಣಂದೂರುವೆಂಕಪ್ಪ ಗೌಡರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಿವಮೊಗ್ಗದ #ಮಾದಪ್ಪನವರು
ಆ ದಿನ ರಾತ್ರಿ ನಮ್ಮ ಮನೆಯಲ್ಲೇ ತಂಗಿದ್ದರು.
ಹೀಗೆ ಮರೆತು ಹೋದ ಅನೇಕ ನೆನಪುಗಳು ನೆನಪಾಯಿತು ಇದರಲ್ಲಿ ಈ ಮೂರು ಘಟನೆಗಳು ಕಾಗೋಡು ಸತ್ಯಾಗ್ರಹದ ನೇತಾರರಿಗೆ ನಾನು ಸಲ್ಲಿಸಿದ ವಿಶೇಷ ಗೌರವವಾಗಿ ನನ್ನ ನೆನಪಿನಲ್ಲಿ ಉಳಿದಿದೆ.
Comments
Post a Comment