#ತೀರ್ಥಹಳ್ಳಿ_ಕಿರಣ್_ಬೀಸು
#ಬಿಲಾಲಿ_ಬಿಲ್ಲಿ_ಅಭ್ಯಂಜನ
#ನನ್ನ_ಕಥಾ_ಸಂಕಲನ_ಓದಿ_ಬರೆದ_ವಿಮರ್ಶೆ
#ಸಾಹಿತ್ಯ_ರಾಜಕೀಯ_ಕೃಷಿ_ಕ್ಷೇತ್ರದಲ್ಲಿ_ವಿಶೇಷ_ಆಸಕ್ತಿ_ಹೊಂದಿದ_ಯುವಕರು.
#ಸೋಷಿಯಲ್_ಎಕ್ಸ್ಪೆರಿಮೆಂಟ್_ಇವರ_ಹವ್ಯಾಸ
#kiranbeesu #thirthahalli #Bilalibilliabyanjana
#patamakkirarnakar #besthararanichampaka
ಕಿರಣ್ ಬೀಸು ಸಾಹಿತ್ಯಾಸಕ್ತರು ಬಹುಶಃ ಕನ್ನಡದ ಬಹುತೇಕ ಪುಸ್ತಕ ಓದಿದ್ದಾರೆ ಬರಿ ಓದು ಅಲ್ಲ ಅದನ್ನು ಸಂದರ್ಭ ಬಂದಾಗ ನೆನಪಿನಿಂದ ಅದರ ಹೂರಣ ತೆಗೆದು ಹೊರಗಿಡುವ ಅಪಾರ ನೆನಪಿನ ಶಕ್ತಿ ಇವರದ್ದು.
ಸಮಾಜವಾದಿ ಹೊರಾಟಗಾರರನ್ನು ಬರಹಗಾರರನ್ನು ಪ್ರತ್ಯಕ್ಷ ಬೇಟಿ ಮಾಡಿದ್ದಾರೆ ಇನ್ನೊಂದು ವಿಶೇಷ ಅಂದರೆ ಇವರಿಗೆ ಇಷ್ಟವಾದ ವ್ಯಕ್ತಿ ಮತ್ತು ಸ್ಥಳಕ್ಕೆ ಎಷ್ಟೇ ದೂರ ಇದ್ದರು ಪ್ರಯಾಣ ಮಾಡಿ ಬೇಟಿ ಮಾಡುವ Social experiment ಇವರ ಹವ್ಯಾಸ.
ಇವರ ತಂದೆ ಮತ್ತು ತಾಯಿ ಕೂಡ ಕನ್ನಡ ಸಾಹಿತ್ಯದ ಓದುಗರು ಇವರು ಓದುವ ಪುಸ್ತಕ ಅವರೂ ಓದುತ್ತಾರೆ ಬಹುಶಃ ಅವರ ಓದಿನ ಆಸಕ್ತಿ ಮಗನಿಗೆ ಬಂದ ಬಳವಳಿ ಇರಬಹುದು.
ಖ್ಯಾತ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನೇರ ಸಂಪರ್ಕ ಇವರಿಗಿದೆ.
#ಕಿರಣ್_ಬೀಸು_ಬರೆದ_ವಿಮರ್ಶೆ_ಇಲ್ಲಿದೆ_ಓದಿ...
ದಿನ ಪತ್ರಿಕೆವೊಂದರಲ್ಲಿ ನಮ್ಮ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗತ ಶ್ರೀ #ಪಟಮಕ್ಕಿ_ರತ್ನಾಕರ್ ರವರ ಲೇಖನವೊಂದನ್ನ ಓದಿದ್ದೆ ಆ ಲೇಖನ ಬರೆದ ಲೇಖಕರ ಹೆಸರು ಆನಂದಪುರಂ #ಅರುಣ್_ಪ್ರಸಾದ್ ಎಂದಿತ್ತು.
ತೀರ್ಥಹಳ್ಳಿಯ ಮಾಜಿ ಶಾಸಕರಾದ ದಿವಂಗತ ಪಟಮಕ್ಕಿ ರತ್ನಾಕರ್ ರ ಅವರ ಊರಿನವನಾಗಿ, ಅವರ ಪರಿಚಯದವನಾಗಿ ಪಟಮಕ್ಕಿ ರತ್ನಾಕರ್ ಬಗ್ಗೆ ಆಪ್ತ ಲೇಖನ ಬರೆದ ಅರುಣಪ್ರಸಾದರನ್ನ ಒಮ್ಮೆ ಭೇಟಿ ಮಾಡಿ, ಈ ಲೇಖನ ಬರೆದಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಹೇಳಿಬರಲು ಅನಂದಪುರಂಗೆ ಹೋಗಿ ಭೇಟಿ ಮಾಡಿ ಪರಿಚಯ ಮಾಡಿಕೊಂಡೆ.
ನಾನು ಹೋದ ದಿನ ಅವರು ಬಿಡುವಿನಲ್ಲಿರಲಿಲ್ಲ ಅವರ ಊರಾದ ಆನಂದಪುರಂನ ಯಡೇಹಳ್ಳಿಯಲ್ಲಿ ಅವರೇ ನಿರ್ಮಿಸಿ ಊರಿಗೆ ಸಮರ್ಪಿಸಿದ #ಶ್ರೀವರಸಿದ್ಧಿವಿನಾಯಕ_ಸ್ವಾಮಿ ದೇವಾಲಯದ ಕಾರ್ಯವೊಂದರ ಪುನರಷ್ಟಬಂಧ ನಿಮಿತ್ತ ದೇವಸ್ಥಾನಕ್ಕೆ ಹೊರಟಿದ್ದರು.
ಮೂರ್ನಾಲ್ಕು ನಿಮಿಷಗಳಷ್ಟು ಸಮಯ ಮಾತ್ರ ಅವತ್ತು ಮಾತನಾಡಲು ಸಾಧ್ಯವಾಗಿತ್ತು, ಹೊರಡುವಾಗ ಅವರು ಬರೆದ ಎರಡು ಪುಸ್ತಕಗಳ ಗೌರವ ಪ್ರತಿಗಳನ್ನ ನನಗೆ ನೀಡಿದ್ದರು.
ಅವರು ಬರೆದ ಅವರ ಊರಿನ ಜನಪದ ಕಥೆ ಆಧರಿಸಿದ ಕಾದಂಬರಿ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ
#ಬೆಸ್ತರರಾಣಿ_ಚಂಪಕಾ ಮತ್ತು ಸಣ್ಣ ಕಥೆ ಸಂಕಲನ #ಭಟ್ಟರ_ಬೋಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ.
ನಾನು ಕೆಳದಿ ಇತಿಹಾಸದ ಆಸಕ್ತನಾಗಿದ್ದರಿಂದ ಚಂಪಕಾ ರಾಣಿಯ ಪುಸ್ತಕವನ್ನ ತಂದು ಮೂರ್ನಾಲ್ಕು ದಿನದಲ್ಲಿ ಓದಿ ಮುಗಿಸಿದೆ ಆದರೆ ಬಿಲಾಲಿ ಬಿಲ್ಲಿ ಪುಸ್ತಕದ ಮುಖಪುಟದ ಭಟ್ಟರ ಚಿತ್ರ ಮತ್ತು ಆ ಪುಸ್ತಕದ ಹೆಸರೇ ನನಗೆ ಇಷ್ಟವಾಗದ ಕಾರಣ ಪುಸ್ತಕದ ಪುಟ ತೆರೆಯಲೇ ಇಲ್ಲ.
ಸುಮಾರು ಎರಡು ತಿಂಗಳು ನನ್ನ ಟೇಬಲ್ ಮೇಲೆ ಆ ಪುಸ್ತಕ ಹಾಗೇ ಇತ್ತು .
ಅರುಣ್ ಪ್ರಸಾದರನ್ನ ನಾನು ಭೇಟಿಯಾದ ದಿನ ಅವರು ಗೌರವ ಪ್ರತಿಯನ್ನ ನನಗೆ ಕೊಟ್ಟು ಕೊನೆಯದಾಗಿ ಹೊರಡುವಾಗ ಅವರು ನನಗೆ ಹೇಳಿದ ಮಾತು ನೆನಪಾಯ್ತು "ನೀವು ಈ ಪುಸ್ತಕಗಳನ್ನ ಮತ್ತು ನನ್ನ ಬ್ಲಾಗ್‌ನಲ್ಲೂ ಸಾವಿರಾರುಪುಟಗಳಷ್ಟು ಲೇಖನ ಬರೆದಿದ್ದೀನಿ ಎಲ್ಲವನ್ನೂ ಓದಿ, ನನ್ನ ಲೇಖನ, ಬರಹಗಳಿಗೆ ಕಾಪಿ ರೈಟ್ಸ್ ಅಥವ ಹಕ್ಕುಗಳು ಅಂತಾ ಎನೂ ಇಲ್ಲಾ, ನೀವೇ ಆಗಲಿ ಯಾರೇ ಆಗಲೀ ನನ್ನ ಲೇಖನಗಳನ್ನ ಓದಿ ಅದನ್ನ ಅವರ ಹೆಸರಿನಲ್ಲಿ ಬೇಕಾದರೂ ಪ್ರಕಟಿಸಬಹುದು ಜನಕ್ಕೆ ಮಾಹಿತಿ ಸಿಗಬೇಕು , ಓದಬೇಕು ಅಷ್ಟೆ ಎಂದು ಔದಾರ್ಯದ ಮಾತನಾಡಿದ್ದರು.
ಈ ಮಾತು ಅವರ ಬಿಲಾಲಿ ಬಿಲ್ಲಿ ಪುಸ್ತಕದ ಪುಟವನ್ನು ನಾನು ತೆರೆಯುವಂತೆ ಮಾಡಿತು, ಈ ಪುಸ್ತಕ ಸುಮಾರು ಇಪ್ಪತೆಂಟು ಕಥೆಗಳ ಸಂಗ್ರಹವಾಗಿದ್ದರಿಂದ ಕ್ರಮಬದ್ದವಾಗಿ ನಾನು ಓದಲಿಲ್ಲ.
ಮೊದಲನೆಯದಾಗಿ ಓದಲು ಬಿಲಾಲಿ ಬಿಲ್ಲಿ ಕಥೆಯನ್ನೇ ಆರಿಸಿ ಕೊಂಡೆ ಆ ಕಥೆ ನನಗೆ ಇಷ್ಟ ವಾಗಲಿಲ್ಲ.
ನಂತರ ಕೊನೆಯ ಕಥೆ ಚನ್ನಾಗಿರಬಹುದು ಅಂತ ಓದಿದೆ ಅದೂ ಇಷ್ಟವಾಗ್ಲಿಲ್ಲ, ನನಗೆ ರುಚಿಸದಿದ್ದದ್ದು ಇತರರಿಗೂ ಇಷ್ಟವಾಗಬಾರದೆಂದಿಲ್ಲ ಡಿ. ವಿ. ಗುಂಡಪ್ಪ ನವರು ಹೇಳಿದ ಹಾಗೆ #ಅನುಭವದ_ಪರಿ_ನೂರ್ವರಿಗೆ_ನೂರು_ನೂರು_ಪರಿ ಎಂಬಂತೆ.
ಕೊನೆಯದಾಗಿ ಇನ್ನೊಂದು ಕಥೆ ಓದಿ ಅದೂ ಇಷ್ಟವಾಗದಿದ್ದರೆ ಈ ಪುಸ್ತಕದ ಓದಿಗೆ ವಿರಾಮಕೊಡುವುದಾಗಿ ಯೋಚನೆ ಮಾಡಿ ಈ ಬಾರಿ ಇಪ್ಪತ್ತೆರಡನೇ ಕಥೆ #ಚುನಾವಣೆ_ರಮ್ಜಾದ್_ಅಮ್ಮಳ_ಟಿ_ವಿ ಕಥೆ ಆರಿಸಿಕೊಂಡೆ ಕಥೆಯ ಹೆಸರಿನಲ್ಲಿ ಚುನಾವಣೆ ಅಂತ ಇದ್ದಿದ್ದರಿಂದ ಮತ್ತು ಅರುಣ್ ಪ್ರಸಾದರು ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರು , ವಿಧಾನ ಸಭಾ ಚುನಾವಣೆಗೂ ಒಮ್ಮೆ ಸ್ಪರ್ಧಿಸಿದ್ದರಿಂದ ಈ ಲೇಖನದಲ್ಲಿ ಎನಿರಬಹುದು ಅನ್ನುವ ಕುತೂಹಲದಿಂದ ಈ ಕಥೆ ಆರಿಸಿಕೊಂಡೆ.
ಈ ಕಥೆ ಆರಂಭದಿಂದಲೇ ಓದಿಸಿಕೊಂಡು ಹೋಯಿತು ರನ್ ವೇ ನಲ್ಲೇ ಓಡುತ್ತಿದ್ದ ವಿಮಾನವೊಂದು ಈ ಕಥೆಯಿಂದ ವೇಗ ಪಡೆದುಕೊಂಡು ಟೇಕ್ ಆಫ಼್ ಆದಂತಾಯಿತು.
ಇದಾದ ನಂತರ ಒಂದಾದ ಮೇಲೊಂದು ಕಥೆ ಓದುತ್ತಾ ಹೋದೆ ಎಲ್ಲಾ ಕಥೆಗಳು ಸ್ವಾರಸ್ಯಕರವಾಗಿವೆ.
ಬರಪೂರ ಹಾಸ್ಯ ಸನ್ನಿವೇಶಗಳಿವೆ, ಅಲ್ಲಲ್ಲಿ ಕಥೆಗಳಲ್ಲಿ ಅಪಬ್ರಂಶದ ಪದಗಳಿವೆಯಾದರೂ ಕಥೆಯ ಪಾತ್ರಗಳಿಗೆ ಆ ಪದಗಳು ಜೀವತುಂಬಿವೆ.
ಅರಣ್ ಪ್ರಸಾದರ ಕಥೆಗಳಲ್ಲಿ ಬಂದಿರುವ ಪಾತ್ರಗಳೆಲ್ಲವೂ ಅವರ ಊರಿನ ಮತ್ತು ಸುತ್ತಮುತ್ತಲಿನ ಉರಿನಲ್ಲಿ ನಡೆದ ನೈಜ ಘಟನೆಗಳು ಮತ್ತು ನೈಜ ಕಥೆಗಳ ಚಿತ್ರಣವೇ ಆಗಿದೆ.
ಈ ಪುಸ್ತಕದ ಕಥೆಗಳು ಲೇಖಕರ ಕಾಲಘಟ್ಟದ ಅವರ ಊರಿನ ಪ್ರಾದೇಶಿಕ ಭಾಷೆ ,ಜನಜೀವನ, ಮನಸ್ಥಿತಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಆನಂದಪುರಂನ ಮತ್ತು ಸುತ್ತಮುತ್ತಲಿನ ಊರುಗಳ ಆಗು ಹೋಗುಗಳ ದಾಖಲೆಯಾಗಿ ಉಳಿಯುತ್ತದೆ.
ಪುಸಕದಲ್ಲಿಯ ಒಂದು ಕಥೆ ಮನೆಗೆ ಬೆಂಕಿ ಹಚ್ಚುವ #ಕೊಳ್ಳಿದೆವ್ವ ಕಥೆಯ ಕೊನೆಯವರೆಗೂ ಕೂತೂಹಲ ಹುಟ್ಟಿಸುತ್ತದೆ.
#ವಿಲ್ಲಿ_ಭೂತವಾಗಿ ಕಥೆ ಮಧ್ಯರಾತ್ರಿ ಕೂತು ಪುಸ್ತಕ ಓದುವವರಿಗೆ ಆರಂಭದಲ್ಲಿ ಭಯಸಂಚಾರವಾಗುತ್ತದೆ,
ಕಥೆಯ ಕೊನೆಯಲ್ಲಿ ಭೂತದ ಅಸಲಿಯತ್ತನ್ನು ಲೇಖಕರು ಬಯಲು ಮಾಡಿದ್ದಾರೆ.
#ನಿಧಿ_ಶೋಧನೆಯಲ್ಲಿ_ಹಲ್ಲೆ_ಕಟ್ಟೊ_ಸಾಬರು, #ಮೂಕಿಹುಡುಗಿ ಕಥೆಗಳಲ್ಲಿ ಲೇಖಕರು ಜನರ ಮೌಢ್ಯದ ಬಗ್ಗೆ ಬರೆದಿದ್ದಾರೆ.
#ಸುಶೀಲಾಳ_ಅಂಗಡಿ ಮತ್ತು #ಮಂಜ_ಬ್ರಹ್ಮ_ರಾಕ್ಷಸನಾಗಿ_ಕಾಡಿದರೆ ಕಥೆಗಳನ್ನು ಅರುಣ್ ಪ್ರಸಾದರು ಹಾಸ್ಯದೊಂದಿಗೆ ವಿವರಿಸಿಸುತ್ತಾ ಬರೆದಿರುವ ವೈಚಾರಿಕ ಕಥೆಗಳು.
#ಇನಾಮುದಾರರ_ಮಂಚ , #ಬೇಳೂರು_ತಿಮ್ಮಣ್ಣ_ಭಟ್ಟರ_ವ್ಯಾಜ್ಯ, #ಸಿರಿಮತಿಯ_ಬಂಗಾರದ_ಸರ ಕಥೆಗಳಲ್ಲಿ ನಮ್ಮ ಬೇಜವಾಬ್ದಾರಿತನದಿಂದ ಕಳೆದು ಕೊಳ್ಳುವ ಬೆಲೆಬಾಳುವ ವಸ್ತುಗಳ ವಿಚಾರವಾಗಿ ವ್ಯವಹಾರಿಕವಾಗಿ ಅನುಭವಿಸುವ ನಷ್ಟಗಳು ಮತ್ತು ವ್ಯವಹಾರಿಕ ಮೋಸಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
#ಹಾವು_ಗೊಲ್ಲನ_ಕತ್ತೆ_ಪುರಾಣದಲ್ಲಿ ಮತ್ತು #ನಮ್ಮೂರ_ವಾಲಗದವರು ಕಥೆಗಳಲ್ಲಿ ಆ ಸಮುದಾಯದವರ ವೃತ್ತಿ ಬದುಕಿನ ಚಿತ್ರಣವನ್ನ ಹಾಸ್ಯ ಸನ್ನಿವೇಶಗಳೊಂದಿಗೆ ಚಿತ್ರಿಸಿದ್ದಾರೆ.
ಎಲ್ಲಾ ಕಥೆಗಳಿಗಿಂತ ವಿಶೇಷವಾದದ್ದು #ಬಿಕ್ಷುಕಿ_ಲಕ್ಷಮ್ಮನ ಕಥೆ ನಾವು ಬ್ಯಾಂಕರ್ ಮಾರ್ಗಯ್ಯ ಸಿನಿಮಾವನ್ನ ನೋಡಿದ್ದೇವೆ ಅಲ್ಲಿ ಮಾರ್ಗಯ್ಯನೆಂಬ ಲೇವಾದೇವಿದಾರ ಕೊನೆಯಲ್ಲಿ ಬರಿಗೈ ಕುಚೇಲನಾಗುವ ಕಥಾಹಂದರವಿದೆ ಇಲ್ಲಿ ಅರುಣ್ ಪ್ರಸಾದರು ಆ ಕಥೆಗೆ ತದ್ವಿರುದ್ಧವಾದ ಕಥೆಯೊಂದನ್ನ ಬರೆದ್ದಿದ್ದಾರೆ ಅವರ ಕಥೆಯ ಕಥಾನಾಯಕಿ ಬಿಕ್ಷುಕಿಯೇ ಬದಲಾದ ಸನ್ನಿವೇಶದಲ್ಲಿ ಇತರರ ಬದುಕಿಗೆ ಆರ್ಥಿಕವಾಗಿ ನೆರವಾಗುವ ಅಪರೂಪದ ಕಥೆ.
ಹೀಗೆ ಆರಂಭದಲ್ಲಿ ನೀರಸವೆನಿಸಿದ ಪುಸ್ತಕವೊಂದು ಪುಸ್ತಕ ಓದಿ ಮುಗಿಸಿದಾಗ ಪುಸ್ತಕ ಓದಿ ಮುಗಿದೇ ಹೊಯ್ತಲ್ಲ ಇನ್ನಷ್ಟು ಕಥೆಗಳಿರಬೇಕಿತೆನ್ನಿಸಿತು.
: - ಕಿರಣ್ ಬೀಸು
Comments
Post a Comment