#ದೀಪಾವಳಿ
#ದೀಪಾವಳಿ_ಹಬ್ಬದ_ಪೌರಾಣಿಕ_ಕಥೆ_ಕೇಳಿ
#ಇದು_ಮಹಾವಿಷ್ಣುಭಕ್ತ_ದಾನಶೂರ_ದೈತ್ಯರಾಜ_ಬಲಿಚಕ್ರವರ್ತಿಯನ್ನು
#ವಿಷ್ಣು_ವಾಮನ_ರೂಪದಲ್ಲಿ_ಮೂರು_ಹೆಜ್ಜೆ_ಭೂಮಿ_ದಾನ_ಕೇಳಿ
#ನಂತರ_ವಿಷ್ಣು_ತನ್ನ_ವಿರಾಟ_ರೂಪದ_ಎರೆಡು_ಹೆಜ್ಜೆಯಿಂದ_ಬಲಿಚಕ್ರವರ್ತೀಯ_ಸಂಪೂರ್ಣ_ರಾಜ್ಯ_ಅಕ್ರಮಿಸಿ
#ಮೂರನೆ_ಹೆಜ್ಜೆ_ಬಲಿಚಕ್ರವರ್ತಿಯ_ತಲೆ_ಮೇಲೆ_ಇಟ್ಟು_ಪಾತಾತಕ್ಕೆ_ಕಳಿಸಿದ_ಕಥೆ
#ಪ್ರತಿ_ವರ್ಷ_ಬಲಿಚಕ್ರವರ್ತಿ_ದೀಪಾವಳಿಯ_ಮೂರು_ದಿನ_ಭೂಮಿಗೆ_ಬಂದು_ಪ್ರಜೆಗಳ_ವೀಕ್ಷಿಸುತ್ತಾರೆಂಬ_ನಂಬಿಕೆ.
#Deepavali #vishnu #shrivastav #balichakravarthi #Karthika #gopuja #LaxmiPuja
ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ.
ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ.
ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.
ದೇವತೆಗಳಿಗೆ ಅಭಯನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ.
ವಾಮನ ಅವತಾರವು ಭಗವಾನ್ ವಿಷ್ಣುವಿನ ಐದನೇ ಅವತಾರವಾಗಿದ್ದು, ಈತ ಕುಬ್ಜ ಬ್ರಾಹ್ಮಣನ ರೂಪದಲ್ಲಿ ಮಹಾಬಲಿ ಎಂಬ ಅಹಂಕಾರಿ ಅಸುರ ರಾಜನನ್ನು ಸೋಲಿಸುತ್ತಾನೆ.
ವಾಮನನು ತನ್ನ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೇಳಿ, ಮೊದಲ ಹೆಜ್ಜೆಯಿಂದ ಭೂಮಿಯನ್ನೂ, ಎರಡನೆಯ ಹೆಜ್ಜೆಯಿಂದ ಸ್ವರ್ಗವನ್ನೂ ಆವರಿಸಿ, ಮೂರನೆಯ ಹೆಜ್ಜೆಯನ್ನು ಮಹಾಬಲಿಯ ತಲೆಯ ಮೇಲೆ ಇಟ್ಟು, ಅವನನ್ನು ಪಾತಾಳಕ್ಕೆ ಕಳುಹಿಸುತ್ತಾನೆ.
ಈ ಅವತಾರವು ಅಹಂಕಾರದ ಮೇಲೆ ವಿನಯ ಹೇಗೆ ಗೆಲ್ಲುತ್ತದೆ ಎಂಬುದನ್ನು ತಿಳಿಸುತ್ತದೆ.
ವಾಮನ ಮಹಾರಾಜನ ಬಳಿ ”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬೇಹುದೇ?” ಎಂದು ಕೇಳುತ್ತಾನೆ.
ಚಿಕ್ಕ ಬಾಲಕ ವಾಮನನ ಮೂರು ಹೆಜ್ಜೆ ಭೂದಾನ ನೀಡಲು ಬಲಿ ಚಕ್ರವರ್ತಿ ಸುಲಭವಾಗಿ ಒಪ್ಪಿ ಬಿಡುತ್ತಾನೆ.
ಭೂಧಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ.
ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ.
ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ.
ತನ್ನ ತಲೆ ಮೇಲೆ ವಾಮನ ರೂಪದ ವಿಷ್ಣು ಕಾಲನ್ನು ಇಡುವ ಮುನ್ನ ಬಲಿ ಚಕ್ರವರ್ತಿ ವಿಷ್ಣುವಿಗೆ ಒಂದು ಪ್ರಾರ್ಥನೆ ಮಾಡುತ್ತಾನೆ.
ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ ಹೀಗಾಗಿ ನನ್ನ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ.
ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.
ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ.
ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು.
ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ.
ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ.
ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ.
ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.
Comments
Post a Comment