#ಗಾಂಧಿ_ಜಯಂತಿ
#ಮಹಾತ್ಮ_ಗಾಂಧಿ_ಮತ್ತು_ಶಿವಮೊಗ್ಗ_ಜಿಲ್ಲೆ_ನಂಟಿಗೆ_98_ವರ್ಷ.
#ಶಿವಮೊಗ್ಗದ_ನ್ಯಾಷನಲ್_ಲಾಡ್ಜ್_ಶಿವಮೊಗ್ಗದ_ಕೇಂದ್ರ_ಅ0ಚೆ_ಕಛೇರಿ_ಎದರು
#ನಂತರ_ಅದು_ಬೃಂದಾವನ_ಹೋಟೆಲ್_ಆಗಿತ್ತು
#ಅಲ್ಲಿ_ಒಂದು_ವಾರ_ಗಾಂದೀಜಿ_ಮತ್ತು_ಕಸ್ತೂರಬಾ_ದಂಪತಿಗಳು_ತಂಗುತ್ತಾರೆ.
#ಶಿವಮೊಗ್ಗದಲ್ಲಿ_ದಿನಾಂಕ_14_ಆಗಸ್ಟ್_1927ರಲ್ಲಿ_ಸಾವ೯ಜನಿಕ_ಸಭೆ_ನಡೆಸುತ್ತಾರೆ.
#ಈ_ದಿನಾಂಕಕ್ಕೆ_ಸರಿಯಾಗಿ_20_ವರ್ಷದ_ನಂತರ_ದೇಶ_ಸ್ವಾತಂತ್ರ_ಪಡೆಯಿತು.
#ಗಾಂಧೀಜಿ_ಶಿವಮೊಗ್ಗ_ಜಿಲ್ಲೆಗೆ_ಕರೆತಂದವರು_ಖ್ಯಾತ_ವಕೀಲರಾದ_ವೆಂಕಟಸುಬ್ಬ_ಶಾಸ್ತ್ರಿಗಳು
#ಗಾಂಧೀಜಿ_ಸಾರ್ವಜನಿಕ_ಸಭೆ_ನಡೆಸಿದ_ಸ್ಥಳ_ಗಾಂಧೀ_ಪಾರ್ಕ್_ಆಗಿದೆ.
#ಗಾಂಧೀಜಿ_ಶಿವಮೊಗ್ಗ_ಬೇಟಿ_ಸ್ಮರಣೆಗಾಗಿ_ಪುರ_ಪ್ರಮುಖರು
#ಮುಖ್ಯ_ವ್ಯಾಪಾರಿ_ಕೇಂದ್ರಕ್ಕೆ_ಗಾಂಧೀಬಜಾರ್_ಎಂದು_ನಾಮಕರಣ_ಮಾಡುತ್ತಾರೆ
#ಗಾಂಧೀ_ದಂಪತಿ_ತಂಗಿದ್ದ_ನ್ಯಾಷನಲ್_ಲಾಡ್ಜ್_ಎದುರು_ಎರೆಡು_ತೆಂಗಿನ_ಸಸಿ_ಗಾಂದೀಜಿ_ಮತ್ತು_ಕಸ್ತೂರಬಾ_ನೆಡುತ್ತಾರೆ.
#ಭದ್ರಾವತಿಯಲ್ಲಿ_ಲಂಬಾಣಿ_ಮಹಿಳಾ_ಸಮಾವೇಶ_ನಡೆಸುತ್ತಾರೆ.
#ಆನಂದಪುರಂ_ಸಾಗರ_ಬಿದನೂರುನಗರ_ತೀರ್ಥಹಳ್ಳಿಗಳಿಗೂ_ಬೇಟಿ_ನೀಡುತ್ತಾರೆ..
#ಜಿಲ್ಲೆಯ_ಈಗಿನ_ತಲೆಮಾರಿಗೆ_ಗಾಂಧೀಜಿ_ಶಿವಮೊಗ್ಗ_ಜಿಲ್ಲಾ_ಪ್ರವಾಸದ_ಮಾಹಿತಿ.
#mahatmaghandhi #shivamogga #lambanimahilasamavesha
#sagar #Anandapuram #bidanurunagara #thirthhalli
#Badravathi.
ಶಿವಮೊಗ್ಗದ ಖ್ಯಾತ ವಕೀಲರಾದ ವೆಂಕಟ ಸುಬ್ಬಾಶಾಸ್ತ್ರಿಗಳು 1924ರ ಬೆಳಗಾವಿ ಅಧಿವೇಷನದಲ್ಲಿ ಗಾಂಧೀ ಅವರ ಪ್ರಭಾವದಿಂದ ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆ ತರುವ ಸತತ ಪ್ರಯತ್ನ 1927 ರಲ್ಲಿ ಈಡೇರುತ್ತದೆ.
ಶಿವಮೊಗ್ಗದ ನ್ಯಾಷನಲ್ ಲಾಡ್ಜ್ (ಶಿವಮೊಗ್ಗದ ಕೇಂದ್ರ ಅ0ಚೆ ಇಲಾಖೆ ಎದರು ನಂತರ ಅದು ಬೃಂದಾವನ ಹೋಟೆಲ್ ಆಗಿತ್ತು) ನಲ್ಲಿ ಒಂದು ವಾರ ಗಾಂದೀಜಿ ಮತ್ತು ಕಸ್ತೂರ ಬಾ ದಂಪತಿಗಳು ತಂಗುತ್ತಾರೆ.
ವೆಂಕಟಸುಬ್ಬಾ ಶಾಸ್ತ್ರೀಗಳ ಕಾರಿನಲ್ಲಿ ಗಾಂಧೀ ದಂಪತಿಗಳು ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡುತ್ತಾರೆ.
14 ಆಗಸ್ಟ್ 1927 ರಲ್ಲಿ ಶಿವಮೊಗ್ಗದ ಉದ್ಯಾನವನದಲ್ಲಿ ಸ್ವಾತಂತ್ರ್ಯದ ಮಹತ್ವ ತಿಳಿಸುವ ಗಾಂಧೀಜಿಯವರ ಸಾರ್ವಜನಿಕ ಸಭೆ ನಡೆಯುತ್ತದೆ ಇದರ ಸ್ಮರಣೆಗಾಗಿ ಈ ಉದ್ಯಾನ ವನಕ್ಕೆ #ಗಾಂಧೀ_ಪಾರ್ಕ್ ಎ೦ಬ ಹೆಸರು ಇಡಲಾಗುತ್ತದೆ.
ಈ ಅವಧಿಯಲ್ಲಿ ದಿನಾಂಕ 16- ಆಗಸ್ಟ್ - 1927ರಂದು
ಆನಂದಪುರಂ - ಸಾಗರ - ನಗರ - ತೀರ್ಥಹಳ್ಳಿ - ಭದ್ರಾವತಿ ಪ್ರವಾಸ ಮಾಡುತ್ತಾರೆ ಇದೇ ದಿನ ಸಂಜೆ ಭದ್ರಾವತಿಯಲ್ಲಿ ಲಂಬಾಣಿ ಮಹಿಳೆಯರ ಸಮಾವೇಶದಲ್ಲಿ ಪಾಲ್ಗೊಂಡು ಹಿತವಚನ ಬೋದಿಸುತ್ತಾರೆ.
ಗಾಂಧೀಜಿ ಶಿವಮೊಗ್ಗಕ್ಕೆ ಬಂದ ನೆನಪಿಗಾಗಿ ಪ್ರಮುಖ ವ್ಯಾಪಾರಿ ಕೇಂದ್ರಕ್ಕೆ #ಗಾಂಧೀ_ಬಜಾರ್ ಎಂದು ನಾಮಕರಣ ಮಾಡಲಾಗಿದೆ.
ಗಾಂಧೀಜಿ ತಂಗಿದ್ದ ನೆನಪಿಗಾಗಿ ನ್ಯಾಷನಲ್ ಲಾಡ್ಜ್ ಮಾಲಿಕರು ಲಾಡ್ಜ್ ಎದರು ಎರೆಡು ತೆಂಗಿನ ಸಸಿ ಗಾಂದೀಜಿ ಮತ್ತು ಕಸ್ತೂರ ಬಾ ರಿಂದ ನೆಡೆಸಿದ್ದರು.
1990 ನೇ ಇಸವಿ ತನಕ ಬೃಂದಾವನ ಲಾಡ್ಜ್ ಮತ್ತು ಆ ಎರೆಡು ತೆಂಗಿನ ಮರ ಇತ್ತು ಈಗ ಅವರೆಡೂ ಇಲ್ಲ ಅಲ್ಲಿ ಈಗ ಆದುನಿಕ ವಾಣಿಜ್ಯ ಕಟ್ಟಡ ನಿರ್ಮಾಣವಾಗಿದೆ.
ಗಾಂಧೀಜಿ ಶಿವಮೊಗ್ಗದಲ್ಲಿ ಗಾಂಧೀ ಪಾರ್ಕಿನಲ್ಲಿ 14 - ಆಗಸ್ಟ್ - 1927 ರ ಸಭೆ ನಡೆಸಿದ ಇಪ್ಪತ್ತು ವರ್ಷಕ್ಕೆ ಸರಿಯಾಗಿ ಅಂದರೆ 14- ಆಗಸ್ಟ್ - 1947 ರ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.
2 - ಅಕ್ಟೋಬರ್ - 1869 ಗಾಂಧಿ ಜನ್ಮದಿನ ಆದ್ದರಿಂದ ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಲಾಗುತ್ತದೆ ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿ ದಿನಚರಿ ಪುಸ್ತಕದಲ್ಲಿ ದಾಖಲಾಗಿರುವ ಶಿವಮೊಗ್ಗ ಪ್ರವಾಸ ಶಿವಮೊಗ್ಗ ಜಿಲ್ಲೆಯ ನಮಗೆಲ್ಲ ಹೆಮ್ಮೆಯ ವಿಷಯ.
ಗಾಂಧೀಜಿ ದಂಪತಿಗಳು ಶಿವಮೊಗ್ಗ ಜಿಲ್ಲಾ ಪ್ರವಾಸಕ್ಕೆ 98 ವರ್ಷ ಆಯಿತು.
Comments
Post a Comment