#ಪೇಸ್_ಬುಕ್_ಕಮಾಲ್!!
#ಖ್ಯಾತ_ಕಲಾವಿದ_ಜಿ_ಎಮ್_ಬೊಮ್ನಳ್ಳಿ_ಪರಿಚಯಿಸಿತು
#ಆವಂತಿಕಾ_ರಾಷ್ಟ್ರೀಯ_ಪುರಸ್ಕೃತರು
#ಅನಾನಸ್_ಕಿಂಗ್_ಬನವಾಸಿ_ರಾವೂಪ್_ಸಾಹೇಬರ_ಕ್ಯಾರಿಕೇಚರ್_ಬರೆದವರು.
#ಅವರ_ತಾಲ್ಲೂಕಿನ_ಸಾದಕರಿಗೆ_ಈ_ರೀತಿ_ನುಡಿ_ನಮನ_ಸಲ್ಲಿಸುತ್ತಾರೆ.
#ಗೆರೆನಮನ_ಶಿರ್ಷಿಕೆಯಲ್ಲಿ_ಪ್ರಕಟಿಸುತ್ತಾರೆ.
#GMBommanalli #caricature #sirsi #banavasi #ananasking #rawufsaheb
ಡಾ.ರಾವೂಪ್ ಸಾಹೇಬರು ಬನವಾಸಿ ಅವರ ಪುಣ್ಯತಿಥಿ ಬಗ್ಗೆ ಬರೆದ ಲೇಖನ ಅನೇಕರ ಗಮನ ಸೆಳೆಯಿತು.
ಸಾಸ್ತಾನದ ಗುಂಡ್ಮಿ ಅನಂತ ಪದ್ಮನಾಭ ಅವರು ರಾವೂಪ್ ಸಾಹೇಬರ ಕ್ಯಾರಿಕೇಚರ್ ಕಳಿಸಿದ್ದರು.
ಆ ಸಂದರ ಸಾಂದರ್ಭಿಕ ಕ್ಯಾರಿಕೇಚರ್ ನಲ್ಲಿ GM ಎಂದು ಕಲಾವಿದರ ಕಾವ್ಯನಾಮ ಇತ್ತು ಆದರೆ ಪರಿಚಯ ಇರಲಿಲ್ಲ ಮತ್ತು ಇದು ಬರೆದ ಸಂದರ್ಭ ಗೊತ್ತಿರಲಿಲ್ಲ.
ನಂತರ G.M. ಬೊಮ್ನಳ್ಳಿ ಸಿರ್ಸಿ ಎಂಬ ಕಲಾವಿದರು ಈ ಚಿತ್ರ ಬರೆದದ್ದು ತಾವೇ ಎಂದು ಪೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದಾಗ ಗೊತ್ತಾಯಿತು.
ಅವರು ತಮ್ಮ ತಾಲ್ಲೂಕಿನ ಸಾದಕರು ಇಹಲೋಕ ತ್ಯಜಿಸಿದಾಗ ಅವರಿಗೆ #ಗೆರೆನಮನ ಎಂಬ ಶಿರ್ಷಿಕೆಯಲ್ಲಿ ಈ ರೀತಿ ಚಿತ್ರಿಸಿ ಅಂತಿಮ ನಮನ ಸಲ್ಲಿಸುತ್ತಾರೆಂದು ತಿಳಿಯಿತು.
ಇಂತಹ ಸಂದರ್ಭದಲ್ಲಿಯೇ ಡಾಕ್ಟರ್ ರಾವೂಪ್ ಸಾಹೇಬರಿಗೆ ಸಲ್ಲಿಸಿದ ಗೆರೆ ನಮನ ಇದು.
ಜಿ.ಎಂ. ಬೊಮ್ನಳ್ಳಿ ಅವರು ಕನ್ನಡ ವ್ಯಂಗ್ಯಚಿತ್ರಕಾರರಾಗಿದ್ದು, ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಅಂಕುರ' ಎಂಬ ರಾಜಕೀಯ ವ್ಯಂಗ್ಯಚಿತ್ರ ಸರಣಿಯ ಮೂಲಕ ಪ್ರಸಿದ್ಧರಾಗಿದ್ದಾರೆ.
ಅವರು 'ಅವಂತಿಕಾ' ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಇವರು 'ಸುಧಾ' ಪತ್ರಿಕೆ ಸೇರಿದಂತೆ ಇತರ ಪ್ರಕಟಣೆಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಈ ರೀತಿ ಪೇಸ್ ಬುಕ್ ಅನೇಕ ಸಮಾನ ಮನಸ್ಕರನ್ನ ಜೋಡಿಸುವುದು ಒಂದು ರೀತಿ ಹಿತವಾಗಿದೆ.
Comments
Post a Comment