#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ
#ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್
#ನವೆಂಬರ್_1974ರಲ್ಲಿ_ನಡೆದಿತ್ತು
#ಇಎಎಸ್_ಪ್ರಸನ್ನ_ನಾಯಕರು
#ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು.
#ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು
#ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು
#ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ
#Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar
ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.
ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.
TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್ಗದ ನೆಹರೂ ಸ್ಟೇಡಿಯಂ ನಲ್ಲಿ ಪ್ರತ್ಯಕ್ಷ ನೋಡುವ ಮತ್ತು ಅವರ ಆಟದ ರಂಜನೆ ಅನುಭವಿಸುವ ಅವಕಾಶ ಈ ರಣಜಿ ಪಂದ್ಯ ನೀಡಿತ್ತು.
ಕರ್ನಾಟಕ ಮತ್ತು ಆಂಧ್ರ ಪ್ರದೇಶದ ತಂಡಗಳ ಈ ಪಂದ್ಯ ನಡೆದಿದ್ದು ಶಿವಮೊಗ್ಗದ #ನೆಹರೂ_ಸ್ಟೇಡಿಯಂ ನಲ್ಲಿ.
ನನಗೆ ಆಗ ಹತ್ತು ವರ್ಷದ ಪ್ರಾಯ ಕ್ರಿಕೆಟ್ ರೇಡಿಯೋದಲ್ಲಿ ಕಾಮೆಂಟರಿ ಮಾತ್ರ ಕೇಳುವ ಅವಕಾಶದ ಆ ದಿನಗಳಲ್ಲಿ ಖ್ಯಾತ ಕ್ರಿಕೆಟ್ ತಾರೆಗಳಾದ ಪ್ರಸನ್ನ, ಚಂದ್ರಶೇಖರ್, ವಿಶ್ವನಾಥ್, ಕಿರ್ಮಾನಿ, ಬ್ರಿಜೆಶ್ ಪಟೇಲ್, ಬಿನ್ನಿ ಇವರನ್ನೆಲ್ಲ ಪ್ರತ್ಯಕ್ಷ ನೋಡುವ ಅವಕಾಶ ನನಗೆ ಸಿಕ್ಕಿತ್ತು.
ಆ ಕಾಲದ ಆನಂದಪುರಂನ ಖ್ಯಾತ ಸುಭಾಷ್ ಕಬ್ಬಡಿ ತಂಡದ ಕ್ಯಾಪ್ಟನ್ ನನ್ನ ಹಿರಿಯ ಮಿತ್ರರಾದ ಕ್ಲೈಮೆಂಟ್ ರೆಬೆಲೋ ನನಗೆ ಶಿವಮೊಗ್ಗದ ನೆಹರು ಸ್ಟೇಡಿಯಂಗೆ ಈ ರಣಜಿ ಪಂದ್ಯ ತೋರಿಸಲು ಕರೆದೊಯ್ದಿದ್ದರು.
ಮೂರು ದಿನ ಈ ರಣಜಿ ಪಂದ್ಯ ನೋಡಿದ್ದೆ ಬೌಂಡರಿ ಗೆರೆ ಸಮೀಪದ ನೆಲದ ಮೇಲೆ ಕುಳಿತು ಕ್ರಿಕೆಟ್ ಆಸ್ವಾದಿಸಿದ್ದೆ,ಈ ಪಂದ್ಯಕ್ಕೆ ಪ್ರವೇಶ ಶುಲ್ಕವಿತ್ತು ಮತ್ತು ಸೀಮಿತ ಸಂಖ್ಯೆಯ ಗ್ಯಾಲರಿ ಆಗ ಇತ್ತಷ್ಟೇ ಆದ್ದರಿಂದ ಕ್ರಿಕೆಟ ಅಭಿಮಾನಿಗಳಿಗೆ ವಿಶೇಷ ಸೌಲಭ್ಯ ಬೇಕೆನ್ನಿಸಿರಲಿಲ್ಲ.
ಹತ್ತಿರದಿಂದಲೇ ಈ ಕ್ರಿಕೆಟ್ ಅತಿರಥ ಮಹಾರಥರನ್ನ ನೋಡಿದ್ದೆ, ಈ ಪಂದ್ಯ ನೋಡಲು ಇಡೀ ಸ್ಟೇಡಿಯಂ ತುಂಬಿ ತುಳುಕಿತ್ತು.
ಆಗ ರಾಜಕುಮಾರ್ ಮತ್ತು ಜಯಮಾಲ ಜೋಡಿಯ #ಗಿರಿಕನ್ಯೆ ಸಿನಿಮಾ ಸೂಪರ್ ಹಿಟ್ ಸಿನಿಮಾ ಆಗಿತ್ತು.
ಈ ರಣಜಿ ಪಂದ್ಯದ ಮಧ್ಯ ನಟಿ ಜಯಮಾಲ ಸ್ಟೇಡಿಯಂ ಗೆ ಬಂದು ಒಂದು ಸುತ್ತು ಕೈ ಬೀಸುತ್ತಾ ಸುತ್ತಿದರು ಅವರನ್ನ ನೋಡಿ ಇಡೀ ಸ್ಟೇಡಿಯಂ ಪ್ರೇಕ್ಷಕರು ರೋಮಾಂಚಿತರಾಗಿ ಕರತಾಡನೆ ಘೋಷಣೆಗಳಿಂದ ಕ್ರಿಕೆಟ್ ಪಂದ್ಯ ಕೆಲ ಕ್ಷಣ ನಿಂತಿತ್ತು.
ಬಹುಶಃ ಇದೆಲ್ಲ ಹೆಚ್ಚು ಕ್ರಿಕೆಟ್ ಪ್ರೇಕ್ಷಕರ ಆಕರ್ಷಿಸುವ ಮಾರ್ಕೆಟ್ ತಂತ್ರ ಅಂತ ಆಗ ಗೊತ್ತಿರಲಿಲ್ಲ.
ಆ ವರ್ಷ ಪ್ರಸನ್ನರ ನಾಯಕತ್ವದಲ್ಲಿ ರಾಜಸ್ಥಾನದ ಜೈಪುರದಲ್ಲಿ ರಣಜಿ ಟ್ರೋಪಿ ಕರ್ನಾಟಕ ಗೆದ್ದಿತ್ತು.
ಟ್ರೋಪಿ ಜೊತೆಗೆ ಕರ್ನಾಟಕ ಕ್ರಿಕೆಟ್ ತಂಡ ರೈಲಿನ ಎರಡನೆ ದರ್ಜೆ ಡಬ್ಬಿಯಲ್ಲಿ ಬೆಂಗಳೂರಿಗೆ ಬಂದು ಸೇರಿದ್ದು ನನಗೆ ಬುದ್ಧಿ ಬಂದಮೇಲೆ ಓದಿದ್ದು ಆಗ ಕ್ರಿಕೆಟ್ ನಿಜವಾದ ಕ್ರೀಡಾ ಸ್ಪೂರ್ತಿಯ ಶ್ರೀಮಂತಿಗೆ ಹೊಂದಿದ್ದು ಆದರೆ ಹಣಕಾಸಿನ ಬಡತನ ಕ್ರಿಕೆಟ್ ಮಂಡಳಿಗಿತ್ತು.
ಈಗ ಕಾಲ ಬದಲಾಗಿದೆ ಅದು ವಿಶ್ವದ ಶ್ರೀಮಂತ ಕ್ರೀಡೆ ಆಗಿದೆ ಇದೆಲ್ಲ ಇವತ್ತು ಶಿವಮೊಗ್ಗದಲ್ಲಿ ನಡೆಯುವ ರಣಜಿ ಕ್ರಿಕೆಟ್ ಮ್ಯಾಚ್ ನಿಂದ ನೆನಪಾಯಿತು.
Nice articles and your information valuable and good articles thank for the sharing information vaccination drive for stray dogs
ReplyDelete