Skip to main content

3527. ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ

#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು.

#ದಿನಾಂಕ_20_ಸೆಪ್ಟೆಂಬರ್_2003ರಲ್ಲಿ_ಬರೆದ_ಲೇಖನ

#ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ.

#ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ

#ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ.

#ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ.

#ಅವರನ್ನು_ಗುರುತಿಸುವ_ಕೆಲಸ_ಆಗಬೇಕು.

#ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ.

#ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ.

#ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?.


#gerusoppe #jainqueen #sharavathi #river #avinahalli #chennabyradevitomb.

     ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಈಗಲೂ ಇದ್ದಾರೆ.

  ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್ರಕಟವಾಗಬೇಕು.

  ಸಾಗರ ತಾಲೂಕಿನ ಜೋಗ್ ಜಲಪಾತದ ಪಕ್ಕದಲ್ಲಿನ ದಟ್ಟ ಅರಣ್ಯದಲ್ಲಿ  ಕಾನೂರಿನ ಕೋಟೆ ಇದೆ ಇದು ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಇನ್ನೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

  ಜೋಗ ಜಲಪಾತದಿಂದ ರಭಸದಿಂದ ದುಮುಕಿದ ಶರಾವತಿ ನದಿ ಶಾಂತವಾಗಿ ಹರಿಯುವ ಶರಾವತಿ ಕಣಿವೆ ಗೇರುಸೊಪ್ಪೆ ರಾಣಿ ಚೆನ್ನಾ ಬೈರಾದೇವಿಯ ರಾಜ್ಯದ ಕೇಂದ್ರ ಸ್ಥಳ.

    400 ವರ್ಷದ ಹಿಂದೆ ದೇಶ ವಿದೇಶಗಳ ಹಡಗು ಹೊನ್ನಾವರದ ಅರಬ್ಬಿ ಸಮುದ್ರದಿಂದ ಇದೇ ಶರಾವತಿ ನದಿ ಮೂಲಕ ಗೇರುಸೊಪ್ಪೆಗೆ ಬಂದು ಕಾಳು ಮೆಣಸು ತುಂಬಿಸಿ ಕೊಂಡು ಯೂರೋಪಿಗೆ ಹೋಗುತ್ತಿತ್ತು.

    ಈ ಬಗ್ಗೆ ಇತ್ತೀಚಿಗೆ ಖ್ಯಾತ ಪಿಕ್ಷನ್ ಕಾದಂಬರಿಕಾರ ಗಣೇಶಯ್ಯ ಇಲ್ಲಿನ ಸ್ಥಳಿಯ ಇತಿಹಾಸಕಾರರು ಅಂತಾರಾಷ್ಟ್ರೀಯ ಮಾಫಿಯಾದ ನಿದಿ ಜೋರರಿಗೆ ಮಾಹಿತಿ ನೀಡಿ ಗೇರುಸೊಪ್ರೆಯ ಕಾಳು ಮೆಣಸಿನ ರಾಣಿಯ ಈವರೆಗೂ ಸಿಗದ ಗುಪ್ತ ನಿದಿ ಅಪಹರಣದ ವಿಫಲ ಯೋಜನೆಯ ಸತ್ಯ ಕಥೆಯ ಎಳೆಯ ಮೇಲೆ ಬರೆದ #ಬಳ್ಳಿ_ಕಾಳ_ಬೆಳ್ಳಿ ಕಾದಂಬರಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಸಂಸ್ಥಾನದ ಕಾದಂಬರಿ ಪ್ರಸಿದ್ಧಿ ಆಗಿದೆ.

 ನಮ್ಮ ತಾಲ್ಲೂಕಿನವರೇ ಆದ ಗಜಾನನ ಶರ್ಮರು ಬರೆದ ಬೃಹತ್ ಕಾದಂಬರಿ ರಾಣಿ ಚೆನ್ನಾ ಬೈರಾದೇವಿಯ ಹೆಸರು ಇತಿಹಾಸದ ಮೇಲೆ ಹೊಸ ಹೊಳಪು ನೀಡಿದೆ.

     ಈ ಎರಡೂ ಪುಸ್ತಕಗಳಿಂದ ರಾಣಿ ಚೆನ್ನ ಬೈರಾದೇವಿ ವಿಚಾರಗಳು ಚಚೆ೯ಯ ಮನ್ನಲೆಗೆ ಬಂದಿದೆ.

     ಮಹಾಯುದ್ಧದ ಸಮಯದಲ್ಲಿ ಗೇರುಸೊಪ್ಪೆ ಹೆಸರಿನ ಸಂಪೂರ್ಣ ಬೆಳ್ಳಿ ತುಂಬಿದ ಹಡಗು ಹಿಂದೂ ಮಹಾಸಾಗರದಲ್ಲಿ ಮುಳುಗಿದೆ ಆ ಹಡಗಿನಲ್ಲಿ ತುಂಬಿದ ಬೆಳ್ಳಿ ರಾಣಿ ಚೆನ್ನಾ ಬೈರಾದೇವಿಗೆ ಸೇರಿದ ಭಂಡಾರದ ನಿಧಿ ಎಂಬ ಸುದ್ದಿ ಇದೆ.

   ಇಂತಹ ಪ್ರಖ್ಯಾತ ಶ್ರೀಮಂತ ರಾಣಿಯನ್ನು ಸೋಲಿಸಿ  ಅವಳ ರಾಜ್ಯ ವಶ ಪಡೆದು ರಾಣಿಯನ್ನು ಇಕ್ಕೇರಿಯ ಕೋಟೆಯಲ್ಲಿ ಜೀವನ ಪೂರ್ತಿ ಸೆರೆಮನೆಯಲ್ಲಿ ಬಂದಿಸಿಟ್ಟಿದ್ದು ಕೆಳದಿ ರಾಜ ವೆಂಕಟಪ್ಪ ನಾಯಕ.

   ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಆವಿನಹಳ್ಳಿಯಲ್ಲಿದೆ, ಈ ಸಮಾದಿಯನ್ನ ಸ್ಥಳಿಯರು ದೇವಾಲಯ ಮಾಡಿಕೊಂಡಿದ್ದಾರೆ ಇದು ಇತಿಹಾಸಕ್ಕೆ ಸಂಬಂಧಪಟ್ಟ ಅಪೂರ್ವ ದಾಖಲೆ ಆಗಿದ್ದು ಇದನ್ನು ಶಿವಮೊಗ್ಗ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಸಂರಕ್ಷಿಸಬೇಕಾಗಿದೆ.

  ಜೈನ ಧರ್ಮದ ಹುಂಚಾದ ಮಠ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ರಾಣಿ ಚೆನ್ನಾಭೈರಾದೇವಿ ಸುಮಾದಿ ಸಂರಕ್ಷಣೆಗೆ ಮತ್ತು ಅರಣ್ಯ ಇಲಾಖೆಯಲ್ಲಿರುವ ಕಾನೂರು ಕೋಟೆ ಪುರಾತತ್ವ ಇಲಾಖೆಗೆ ವರ್ಗಾಯಿಸಲು ಪ್ರಯತ್ನಿಸಬೇಕಾಗಿದೆ.

    ಜೈನರ ರಾಣಿ ಚೆನ್ನಾಭೈರಾದೇವಿಯ ವಂಶಸ್ಥರು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ (AB site) ಹೆನ್ನೆ ಗ್ರಾಮದಲ್ಲಿ ಈಗಲೂ ಇದ್ದಾರೆ.

   ಅವರಲ್ಲಿ ಲೋಕರಾಜ ಜೈನ್ ಸಾಳ್ವಕುಲಜ ನಗಿರೆಸುತರು ತುಮರಿಯ ಬ್ಯಾಕೋಡು ಪ್ರೌಢಶಾಲೆಯಲ್ಲಿ ಉಪನ್ಯಾಸಕರಾಗಿದ್ದರು ಈಗ ಶಿರವಂತೆ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

   ಇವರು ರಾಣಿ ಚೆನ್ನಾ ಬೈರಾದೇವಿಯ ಬಗ್ಗೆ ಅನೇಕ ಅಪ್ರಕಟಿತ ದಾಖಲೆಗಳ ಸಂಗ್ರಹಿಸಿದ್ದಾರೆ ಅವುಗಳನ್ನು ಪುಸ್ತಕ ಮಾಡಿ ಪ್ರಕಟಿಸುವ ಆಸಕ್ತಿ ಅವರಿಗಿದೆ.

  ರಾಣಿಯ ಅನೇಕ ವಿಚಾರಗಳು ಇವರ ಅನೇಕ ತಲೆಮಾರುಗಳಿಂದ ಇವರಿಗೆ ಹರಿದು ಬಂದಿದೆ.

       ಇಲ್ಲಿ ಪೋಸ್ಟ್ ಮಾಡಿರುವ ತೈಲ ಚಿತ್ರ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸಿಂಹಗದ್ದೆಯ ಜೈನ ಮಠದ ಲಕ್ಷ್ಮೀ ಸೇನಾ ಭಟ್ಟಾರಕರ ಪ್ರವಚನ ಮಂದಿರದ ಗೋಡೆಯ ಮೇಲೆ ತೂಗು ಹಾಕಲಾಗಿರುವ ಗೇರುಸೊಪ್ಪೆಯ ರಾಣಿ ಚೆನ್ನಾ ಬೈರಾದೇವಿಯ ತೈಲ ಚಿತ್ರ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...