#ನಲವತ್ತೊಂಬತ್ತು_ಲಕ್ಷ
#ನನ್ನ_ಪೇಸ್_ಬುಕ್_ವೀಕ್ಷಣೆ
#ಅಂದರೆ_ಪ್ರಾದೇಶಿಕ_ಬಾಷೆಗೆ_ಗೂಗಲ್_ನೀಡುತ್ತಿರುವ_ಪ್ರಾಮುಖ್ಯತೆ
#ಕನ್ನಡದಲ್ಲಿ_ಎಲ್ಲ_ಮಾಹಿತಿ_ಗೂಗಲ್_ನೀಡುತ್ತದೆ
#google #meta #facebook #whatsapp #youtube #kannada #veiws
ನನ್ನ ಪೇಸ್ ಬುಕ್ ಬರಹ ಕನ್ನಡದಲ್ಲಿ ಬರೆಯುವುದು.
ಒಂದು ಕಾಲದಲ್ಲಿ google ಇಂಗ್ಲಿಷಿನಲ್ಲಿ ಮಾತ್ರ ಲಭ್ಯವಿತ್ತು ಈಗ ಪ್ರಪಂಚದ 250 ಭಾಷೆಗಳಲ್ಲಿ ಲಭ್ಯವಿದೆ.
ನನ್ನ ಕನ್ನಡದ ಪೇಸ್ ಬುಕ್ ವೀಕ್ಷಣೆ 4.9 ಮಿಲಿಯನ್ಸ್ ಅಂದರೆ 49 ಲಕ್ಷ ತಲುಪಿರುವುದು ಈ ಕಾರಣದಿಂದಲೇ.
ನಾನು ವೀಕ್ಷಕರ ಸಂಖ್ಯೆಗಾಗಿಯೇ ಬರೆಯುವುದಿಲ್ಲ, ನನ್ನ ಆಸಕ್ತಿಯ ವಿಷಯ ಮಾತ್ರ ಬರೆಯುತ್ತಾ ಹೋಗುವುದು ಅದರಲ್ಲಿಯೂ ಇಷ್ಟವಾದ ಬರಹ ಮಾತ್ರ ಬ್ಲಾಗ್ ನಲ್ಲಿ Upload ಮಾಡುತ್ತೇನೆ.
google ಪ್ರಾದೇಶಿಕ ಬಾಷೆಗಳಲ್ಲಿ ಲಭ್ಯವಾಗುತ್ತಿರುವುದು ಆಯಾ ಭಾಷಾ ಶ್ರೀಮಂತಿಕೆಗೆ ಕಾರಣ ಆಗುತ್ತಿದೆ.
ಸೆಲ್ ಫೋನ್ ಗಳು ಕೈಯಲ್ಲಿದ್ದರೆ ವಿಶ್ವ ಕೋಶ - ಗ್ರಂಥಾಲಯವೇ ನಿಮ್ಮ ಬೆರಳ ತುದಿಯಲ್ಲಿದ್ದಂತೆ.
ಭಾರತವು ಗೂಗಲ್‌ಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಅದರ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾದ ಭಾಷಾ ಬೆಂಬಲವಿದೆ.
ಮಾರ್ಚ್ 2024 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಗೂಗಲ್ ಇಂಡಿಯಾದ ಒಟ್ಟು ಆದಾಯ 7 ಸಾವಿರದ 97 ಕೋಟಿ ಅಂತೆ.
ಗೂಗಲ್‌ನ ಆದಾಯವು ಪ್ರಾಥಮಿಕವಾಗಿ ಜಾಹೀರಾತುಗಳಿಂದ, ಐಟಿ-ಸಕ್ರಿಯಗೊಳಿಸಿದ ಸೇವೆಗಳು ಮತ್ತು ಎಂಟರ್‌ಪ್ರೈಸ್ ಉತ್ಪನ್ನಗಳಿಂದ ಉತ್ಪತ್ತಿಯಾಗುತ್ತದೆ.
ಪ್ರತ್ಯೇಕವಾಗಿ, ಗೂಗಲ್ ಪ್ಲೇ ಮತ್ತು ಆಂಡ್ರಾಯ್ಡ್ ಪರಿಸರ ವ್ಯವಸ್ಥೆಯು 2024 ರಲ್ಲಿ ಭಾರತೀಯ ಅಪ್ಲಿಕೇಶನ್ ಪ್ರಕಾಶಕರಿಗೆ ಸುಮಾರು ₹4 ಲಕ್ಷ ಕೋಟಿ ಆದಾಯವನ್ನು ಗಳಿಸಿದೆ.
ಇದೆಲ್ಲದರಿಂದ ಕನ್ನಡದ ಬರಹಗಾರರು ಬರೆಯುವ ಕನ್ನಡದ ಪೇಸ್ ಬುಕ್ ಬರಹಗಳು ಲಕ್ಷಾಂತರ ಜನರನ್ನ ತಲುಪುತ್ತದೆ ಎಂಬುದು ಖಾತರಿ ಆಗಿದೆ.
ಮೊದಲೆಲ್ಲ ಇಂಗ್ಲೀಷನಲ್ಲಿ ಬರೆದರೆ ಮಾತ್ರ ಹೆಚ್ಚು ಜನರಿಗೆ ತಲುಪುತ್ತದೆಂಬ ಸುದ್ದಿ ಬದಲಾಗಿದೆ ಭಾರತೀಯ ಪ್ರಾದೇಶಿಕ ಬಾಷೆಗಳಿಂದಲೇ ಗೂಗಲ್ ಗೆ ಅತಿ ಹೆಚ್ಚು ಆದಾಯವೂ ಬರುತ್ತಿದೆ.
Comments
Post a Comment