#ಭಾಗ_1.
#ಕಾಗೋಡು_ಸತ್ಯಾಗ್ರಹದ_ಸುವರ್ಣ_ಮಹೋತ್ಸವ
#ಕಾಗೋಡಿನ_ಅರಳಿಕಟ್ಟೆಯಿಂದ_ಕಡಿದಾಳಿನ_ಮಂಜಪ್ಪಗೌಡರ_ಸಮಾದಿವರೆಗೆ
#ಕಾಗೋಡು_ಸತ್ಯಾಗ್ರಹದ_ಸುವರ್ಣ_ಜ್ಯೋತಿ_ಜಾಥಾ
#ಕಾಗೋಡು_ರೈತ_ಜ್ಯೋತಿ
#kagodusatyagraha #HGanapathiyappa #Rammanoharalohiya #kagaoduraithahorata #KGVodeyar
ಕಾಗೋಡು ಸತ್ಯಾಗ್ರಹ ಇಡೀ ದೇಶದ ಭೂ ಹೋರಾಟದ ಚರಿತ್ರೆಯಲ್ಲಿ ಅಳಿಸಲಾರದ ಅಧ್ಯಾಯ ಇದು ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ.
ಈ ಸತ್ಯಾಗ್ರಹದ ರೂವಾರಿ ಹೆಚ್. ಗಣಪತಿಯಪ್ಪನವರು, ಇಡೀ ಚಳವಳಿ ರೂಪುರೇಷೆ ಮಾಡಿದವರು ಶಾಂತವೇರಿ ಗೋಪಾಲಗೌಡರು.
ಈ ಚಳವಳಿ ಬೆಂಬಲಿಸಿ ಬಂದು ಬಂದನಕ್ಕೊಳಗಾದವರು ಆಗ ಜವಾಹರ ಲಾಲ್ ನೆಹರು ಸರ್ಕಾರದಲ್ಲಿ ಪ್ರಬಲ ವಿರೋದ ಪಕ್ಷ ಸಮಾಜವಾದಿ ಪಕ್ಷದ ಸಂಸದ #ರಾಮಮನೋಹರ_ಲೋಹಿಯಾ.
ಈ ಚಳವಳಿ ಬೆಂಬಲಿಸಿ ದೇಶದ ರಾಜದಾನಿ ದೆಹಲಿಯಿಂದ #ಜಯಪ್ರಕಾಶ್_ನಾರಾಯಣ್ , #ಮದುಲಿಮೆ #ಜಾರ್ಜ್_ಪರ್ನಾಂಡೀಸ್ ಮುಂತಾದ ಅತಿರಥ ಮಹಾರಥರು ಇದು ಇತಿಹಾಸ.
ಸಾಗರದ ಜೈಲಿನಲ್ಲಿದ್ದ ಗಣಪತಿಯಪ್ಪ ಮತ್ತವರ ಸಂಗಾತಿಗಳನ್ನ ಬೇಟಿ ಮಾಡಿ ಬೆಂಬಲಿಸಿ ಕಾಗೋಡಿಗೆ ಹೋಗಿ ಅಲ್ಲಿನ ಅರಳಿಕಟ್ಟೆ ಮೇಲೆ ಲೋಹಿಯ ಕಾಗೋಡು ಭೂಮಿ ಹೋರಾಟಗಾರರನ್ನ ಬೆಂಬಲಿಸಿ ಬಾಷಣ ಮಾಡಿ ರಾತ್ರಿ ಸಾಗರದ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದಾಗ ಅವರನ್ನ ಪೋಲಿಸರು ಬಂದಿಸುತ್ತಾರೆ.
ಕಾಗೋಡಿನ ಭೂಮಾಲಿಕರಾದ ನಂತರ ಸಂಸದರಾದ ಕಾಗೋಡಿನ #ಕೆ_ಜಿ_ಒಡೆಯರ್ ಸಹೋದರ ಗುರುವೇ ಗೌಡರು ನೀಡಿದ ಅತಿಕ್ರಮಣ ಪ್ರವೇಶದ ದೂರಿನನ್ವಯ ಪೋಲಿಸರು ಲೋಹಿಯಾರನ್ನು ಮತ್ತು ಅವರ ಜೊತೆ ಬೆಂಗಳೂರಿಂದ ಆಗಮಿಸಿದ್ದ ಸಮಾಜವಾದಿ ದುರೀಣ #ಎಂ_ಪಿ_ಈಶ್ವರಪ್ಪ ಮತ್ತು ಸಾಗರದ #ಜಿ_ಆರ್_ಜಿ_ನಗರ್ ಅವರನ್ನು ಕೂಡ ಬಂದಿಸಿ ಬೆಂಗಳೂರಿಗೆ ಒಯ್ಯುತ್ತಾರೆ.
ಅವತ್ತು ಲೋಹಿಯಾರವರು ಕಾಗೋಡಿನಲ್ಲಿ ಬಾಷಣ ಮಾಡಿದ ಅರಳಿಕಟ್ಟೆಯಿಂದ ತೀರ್ಥಹಳ್ಳಿ ತಾಲ್ಲೂಕಿನ ಕಡಿದಾಳಿನಲ್ಲಿರುವ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ಸಮಾದಿ ತನಕ #ಕಾಗೋಡು_ಸುವರ್ಣ_ಜ್ಯೋತಿ_ಜಾಥಾವನ್ನು ಹಮ್ಮಿಕೊಂಡಿದ್ದೆವು ಇದಕ್ಕೆ #ಕಾಗೋಡು_ರೈತ_ಜ್ಯೋತಿ ಎಂದು ಕರೆಯಲಾಯಿತು.
ಅವತ್ತು #ಪ್ರಜಾವಾಣಿ ದಿನಪತ್ರಿಕೆ ಮುಖಪುಟದಲ್ಲಿ ಈ ಐತಿಹಾಸಿಕ ಕಾರ್ಯಕ್ರಮದ ಉದ್ಘಾಟನೆಯ ಪೋಟೋ ಪ್ರಕಟಿಸಿತ್ತು ಅದನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ ನೋಡಿ.
#ನಾಳೆ: ಮುಂದಿನ ಭಾಗ.
Comments
Post a Comment