#ಶಿವಮೊಗ್ಗ_ಜಿಲ್ಲೆಯ_ಈ_ರಾಷ್ಟ್ರೀಯ_ಪ್ರಶಸ್ತಿ
#ಪ್ರತಿ_ವರ್ಷ_ನವರಾತ್ರಿಯಲ್ಲಿ
#ಒಂದು_ಲಕ್ಷ_ನಗದು_ಮತ್ತು_ಪಾರಿತೋಷಕ
#ಶಿವಮೊಗ್ಗದ_ಪತ್ರಕರ್ತ_ಸಿದ್ದಪ್ಪರ_ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್_ನಿಂದ.
#ಮೂರನೇ_ವರ್ಷದ_ಪ್ರಶಸ್ತಿ_ಮಧ್ಯಪ್ರದೇಶದ_ಡಾಕ್ಟರ್_ಶಂಕರ್_ಲಾಲ್_ಗರ್ಗ್_ಅವರಿಗೆ.
#ಈ_ಪ್ರಶಸ್ತಿ_ಆಯ್ಕೆ_ಸಮಿತಿ_ಅಧ್ಯಕ್ಷರು_ಸುಂದರ್_ರಾಜ್
#ಇವರಿಬ್ಬರೂ_ನನ್ನ_ಅತಿಥಿಗಳು
#shivamogga #siddappa #press #doddammacharitabletrust #nationalaward #sunderraj #karnatakasanga #Drshankarlalgarge #idore #MP
ಪ್ರತಿ ವರ್ಷ ಶಿವಮೊಗ್ಗದ #ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಕಳೆದ ಮೂರು ವರ್ಷದಿಂದ ನೀಡುತ್ತಿದೆ.
ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಇರುತ್ತದೆ.
ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪ್ರತಿಭಾವಂತರ ಸಮಿತಿ ಇದೆ ಈ ಆಯ್ಕೆ ಸಮಿತಿ ಅಧ್ಯಕ್ಷರು #ಎಂ_ಎನ್_ಸುಂದರ್_ರಾಜ್ ಇವರು ಶಿವಮೊಗ್ಗದ ಪ್ರತಿಷ್ಠಿತ #ಕರ್ನಾಟಕ_ಸಂಘದ ಮಾಜಿ ಅಧ್ಯಕ್ಷರು ಮತ್ತು ಸಾಹಿತಿಗಳು.
ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಮಧ್ಯಪ್ರದೇಶದ ಇಂದೋರಿನ ಡಾಕ್ಟರ್ #ಶಂಕರ್_ಲಾಲ್_ಗರ್ಗೆ ಅವರನ್ನ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ.
ಇವರು ಇಂದೋರ್ ಸಮೀಪದ #ಕೇಶರ್_ಪರ್ವತ ಪ್ರದೇಶದಲ್ಲಿ 22 ಎಕರೆ ಬಂಜರು ಭೂಮಿಯಲ್ಲಿ ಕಳೆದ ಒಂಬತು ವರ್ಷದಲ್ಲಿ 5000 ಸಸ್ಯಗಳನ್ನ ಬೆಳೆಸಿ ಅರಣ್ಯ ಮಾಡಿದ್ದಾರೆ.
ತಮ್ಮ ಉದ್ಯೋಗದಲ್ಲಿ ಗಳಿಸಿದ ಪೂರ್ಣ ಹಣ ಇದಕ್ಕಾಗಿ ವಿನಿಯೋಗಿಸಿದ್ದಾರೆ.
ಅಲ್ಲಿ ನೀಲ್ ಗಾಯಿ ಸೇರಿದಂತೆ ಅನೇಕ ವನ್ಯಜೀವಿಗಳು, ಪಕ್ಷಿಗಳು ಇವರ ಅರಣ್ಯದಲ್ಲಿ ಓಡಾಡುತ್ತದೆ ಇದೇ ಇವರಿಗೆ ಸಂತೋಷದ ವಿಷಯ.
ಶಿವಮೊಗ್ಗದ #ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್_ಸ್ಥಾಪಿಸಿದವರು ಶಿವಮೊಗ್ಗದ ಪತ್ರಕರ್ತರಾದ #ಸಿದ್ದಪ್ಪನವರು ಇವರು ಶಿವಮೊಗ್ಗದ ಪ್ರೆಸ್ ಕಾಲೋನಿ ನಿವಾಸಿಗಳು, ವಿಜಯಕರ್ನಾಟಕ ಪತ್ರಿಕೆಯ ಸಬ್ ಎಡಿಟರ್ ಆಗಿದ್ದವರು.
ಇವರು ನೀಡುವ ಈ ರಾಷ್ಟ್ರೀಯ ಮೊದಲ ಪ್ರಶಸ್ತಿ 2023ರಲ್ಲಿ ಪಡೆದವರು #ಹನುಮಂತ_ದೇವನೂರು ನಮ್ಮ ರಾಜ್ಯದ ಕಲ್ಬುರ್ಗಿಯವರು, ಇವರು ಕುಷ್ಟರೋಗಿಗಳ ಸೇವೆಗಾಗಿ ಜೀವನ ಮುಡುಪಾಗಿಟ್ಟ ರಿಕ್ಷಾ ಚಾಲಕ ವೃತ್ತಿಯವರು.
2024 ರಲ್ಲಿ ಎರಡನೆ ರಾಷ್ಟ್ರೀಯ ಪ್ರಶಸ್ತಿ ಪಡೆದವರು ಮದುರೈನ #ನಾರಾಯಣ್_ಕೃಷ್ಣನ್ ಇವರು ಐನೂರಕ್ಕೂ ಹೆಚ್ಚು ಅನಾಥರ ಸೇವೆ ಮಾಡುತ್ತಿದ್ದಾರೆ.
ನಿಜವಾದ ಸಮಾಜ ಸೇವಕರನ್ನ ಇವರೇ ಹುಡುಕಿ ಅವರ ಹಿನ್ನೆಲೆ ಪರೀಕ್ಷಿಸಿ ನಂತರ ಪ್ರತಿ ವರ್ಷದ ನವರಾತ್ರಿಯಲ್ಲಿ ಅವರನ್ನ ಟ್ರಸ್ಟ್ ಹಣದಲ್ಲೇ ಶಿವಮೊಗ್ಗಕ್ಕೆ ಕರೆತಂದು ಅವರಿಗೆ ಗೌರವ ಸಮರ್ಪಣೆ ಮಾಡಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಅರ್ಪಿಸುತ್ತಾರೆ.
ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟನ ಪತ್ರಕರ್ತ ಸಿದ್ದಪ್ಪರ ಈ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
ಈ ವರ್ಷದ ಪ್ರಶಸ್ತಿ ವಿಜೇತ ಡಾ.ಶಂಕರ್ ಲಾಲ್ ಗಾರ್ಗೆ ಅವರ ಸಾದನೆ ಲಿಂಕ್ ಕಾಮೆಂಟ್ ಲ್ಲಿದೆ ನೋಡಿ.
Comments
Post a Comment