#ಇವತ್ತು_ಕಾರ್ಲ್_ಮಾರ್ಕ್ಸ್_ಹುಟ್ಟಿದ_ದಿನ #ಮ್ಯಾಕ್ಸಿಂ_ಗಾರ್ಕಿ_ಬರೆದ_ಪುಸ್ತಕ_ತಾಯಿ_ನನಗೆ_ಪ್ರಭಾವ_ಬೀರಿದ_ಪುಸ್ತಕ #ನಮ್ಮ_ಸಂಸ್ಥೆಯಲ್ಲಿ_14_ವರ್ಷ_ಸೇವೆ_ಸಲ್ಲಿಸಿದ #ಮಹಿಳಾ_ಕಾರ್ಮಿಕಳಿಗೆ_ಅಸಿಸ್ಟಂಟ್_ಮ್ಯಾನೇಜರ್_ಪ್ರಮೋಷನ್ #ನಮ್ಮ_ಸಂಸ್ಥೆಯಲ್ಲಿ_ಅರ್ಹತೆಗೆ_ಹೆಚ್ಚಿನ_ಪ್ರಾಶಸ್ತ್ಯ ಇವತ್ತು ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ,ನನಗೆ ಕಾರ್ಲ್ಸ್ ಮಾರ್ಕ್ಸ್ ಹೆಚ್ಚು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಅದನ್ನು ಓದುವಾಗ ಸಣ್ಣ ವಯಸ್ಸಲ್ಲಿ ಅಂತಹ ಪ್ರೌಡಿಮೆ ಇರಲಿಲ್ಲ ಆದರೂ ನನಗೆ ಅರ್ಥವಾಗಿದ್ದು ಸಾಮಾಜಿಕ ವಿಜ್ಞಾನಕ್ಕೆ ಅವರು ನೀಡಿದ ದೊಡ್ಡ ಕೊಡುಗೆ "ಸಾಮಾಜಿಕ ಸಂಘಟನೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ". 18 ನೆ ವಯಸ್ಸಲ್ಲಿ ಶಿವಮೊಗ್ಗದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪರ ಒಡನಾಡಿ #ಪ್ರೋ_ರಾಚಪ್ಪ ಪರಿಚಯಿಸಿದ ಕೋಲಾರದ #ಕಾಮ್ರೇಡ್_ನಾರಾಯಣ_ಸ್ವಾಮಿ ನನಗೆ ಅನೇಕ ವಿಚಾರಗಳಿಗೆ ಪ್ರೇರಣೆ ಆದರು ಅವರು ನನಗೆ ನೀಡಿದ ಪುಸ್ತಕ ಮಾಕ್ಸಿಂಗಾರ್ಕಿ ಬರೆದ #ತಾಯಿ (ಕನ್ನಡಕ್ಕೆ ಭಾಷಾಂತರವಾಗಿದ್ದ) ಪುಸ್ತಕ. 1906 ರಲ್ಲಿ ಗಾರ್ಕಿ ಅಮೇರಿಕಾ ಪ್ರವಾಸದಲ್ಲಿ ಬರೆದ ಪುಸ್ತಕ (ರಷ್ಯಾ ಕ್ರಾಂತಿ 1905 ರಲ್ಲಿ ವಿಫಲವಾದ ಸಂದರ್ಭದಲ್ಲಿ) ರಷ್ಯಾದ ಕಾರ್ಖಾನೆಗಳಲ್ಲಿ ಬರಿಕೈಯಲ್ಲಿ ಕೆಲಸ ಮಾಡುವ ಬಡತನ ಹಸಿವಿನ ವಿರುದ್ಧ ಹೋ...