#ಇವತ್ತು_ಕಾರ್ಲ್_ಮಾರ್ಕ್ಸ್_ಹುಟ್ಟಿದ_ದಿನ
#ಮ್ಯಾಕ್ಸಿಂ_ಗಾರ್ಕಿ_ಬರೆದ_ಪುಸ್ತಕ_ತಾಯಿ_ನನಗೆ_ಪ್ರಭಾವ_ಬೀರಿದ_ಪುಸ್ತಕ
#ನಮ್ಮ_ಸಂಸ್ಥೆಯಲ್ಲಿ_14_ವರ್ಷ_ಸೇವೆ_ಸಲ್ಲಿಸಿದ
#ಮಹಿಳಾ_ಕಾರ್ಮಿಕಳಿಗೆ_ಅಸಿಸ್ಟಂಟ್_ಮ್ಯಾನೇಜರ್_ಪ್ರಮೋಷನ್
#ನಮ್ಮ_ಸಂಸ್ಥೆಯಲ್ಲಿ_ಅರ್ಹತೆಗೆ_ಹೆಚ್ಚಿನ_ಪ್ರಾಶಸ್ತ್ಯ
ಇವತ್ತು ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ,ನನಗೆ ಕಾರ್ಲ್ಸ್ ಮಾರ್ಕ್ಸ್ ಹೆಚ್ಚು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಅದನ್ನು ಓದುವಾಗ ಸಣ್ಣ ವಯಸ್ಸಲ್ಲಿ ಅಂತಹ ಪ್ರೌಡಿಮೆ ಇರಲಿಲ್ಲ ಆದರೂ ನನಗೆ ಅರ್ಥವಾಗಿದ್ದು ಸಾಮಾಜಿಕ ವಿಜ್ಞಾನಕ್ಕೆ ಅವರು ನೀಡಿದ ದೊಡ್ಡ ಕೊಡುಗೆ "ಸಾಮಾಜಿಕ ಸಂಘಟನೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ".
18 ನೆ ವಯಸ್ಸಲ್ಲಿ ಶಿವಮೊಗ್ಗದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪರ ಒಡನಾಡಿ #ಪ್ರೋ_ರಾಚಪ್ಪ ಪರಿಚಯಿಸಿದ ಕೋಲಾರದ #ಕಾಮ್ರೇಡ್_ನಾರಾಯಣ_ಸ್ವಾಮಿ ನನಗೆ ಅನೇಕ ವಿಚಾರಗಳಿಗೆ ಪ್ರೇರಣೆ ಆದರು ಅವರು ನನಗೆ ನೀಡಿದ ಪುಸ್ತಕ ಮಾಕ್ಸಿಂಗಾರ್ಕಿ ಬರೆದ #ತಾಯಿ (ಕನ್ನಡಕ್ಕೆ ಭಾಷಾಂತರವಾಗಿದ್ದ) ಪುಸ್ತಕ.
1906 ರಲ್ಲಿ ಗಾರ್ಕಿ ಅಮೇರಿಕಾ ಪ್ರವಾಸದಲ್ಲಿ ಬರೆದ ಪುಸ್ತಕ (ರಷ್ಯಾ ಕ್ರಾಂತಿ 1905 ರಲ್ಲಿ ವಿಫಲವಾದ ಸಂದರ್ಭದಲ್ಲಿ) ರಷ್ಯಾದ ಕಾರ್ಖಾನೆಗಳಲ್ಲಿ ಬರಿಕೈಯಲ್ಲಿ ಕೆಲಸ ಮಾಡುವ ಬಡತನ ಹಸಿವಿನ ವಿರುದ್ಧ ಹೋರಾಡುವ ಮಹಿಳೆಯ ಜೀವನ ಚರಿತ್ರೆ ಆಗಿದೆ.
ಈ ಪುಸ್ತಕ ನನ್ನ ಮೇಲೆ ಬೀರಿದ ಪರಿಣಾಮ ಆಗಾದವಾದದ್ದು ಇದರಿಂದ ನಾನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಟ ಮೂಲಬೂತ ಸೌಲಭ್ಯಗಳಾದ ಪಿಲ್ಟರ್ ನೀರು - ಊಟ ಉಪಹಾರ - ದೂರದಿಂದ ಬರುವವರಿಗೆ ವಾಹನ ಸೌಲಭ್ಯ ಅಥವ ಬಸ್ ಛಾರ್ಜ್ - ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ - ಅವರ ಖಾಸಾಗಿ ವಸ್ತು ಇತ್ಯಾದಿ ಇಡಲು ಪ್ರತ್ಯೇಕ ಲಾಕರ್ - ಸಮವಸ್ತ್ರ-ಚಪ್ಪಲಿ-ಒವರ್ ಟೈಂ ಭತ್ಯೆ ಇತ್ಯಾದಿ ನಿರಂತರವಾಗಿ ಅವರಿಗೆ ಸಿಗುವಂತೆ ಮಾಡಿದ್ದೇನೆ ಆದರೂ ನನಗೆ ಇದು ತೃಪ್ತಿ ತಂದಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಓದಗಿಸುವ ಬಯಕೆ ಇದೆ.
ಇವತ್ತು ನಮ್ಮ ಸಂಸ್ಥೆಯಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿರುವ ಶ್ರೀಮತಿ ಮಂಜುಳಾ ಗಣಪತಿಗೆ ಇವತ್ತು ಅಸಿಸ್ಟೆಂಟ್ ಮ್ಯಾನೆಜರ್ ಹುದ್ದೆಗೆ ಪ್ರಮೋಷನ್ ನೀಡಿದ್ದೇವೆ ಅದಕ್ಕಾಗಿ ಅವರಿಗೆ ಸಹ ಸಿಬ್ಬಂದಿಗಳು ಸನ್ಮಾನಿಸಿದರು.
ಇಲ್ಲೊಂದು ವಿಶೇಷ ಮಂಜುಳಮ್ಮ ಎರಡನೆ ಕ್ಲಾಸಿಗಿಂತ ಜಾಸ್ತಿ ಓದಿಲ್ಲ ಆದರೆ ಜಾಸ್ತಿ ಓದಿದವರಿಗಿಂತ ಹೆಚ್ಚಿನ ಜವಾಬ್ದಾರಿ ಸಮಯ ಪಾಲನೆ ಅವರದ್ದು.
ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಈ #ಮಂಜುಳಮ್ಮ ನಿಜ ಪಾತ್ರದಾರಿ ಕೂಡ ಈ ಪುಸ್ತಕದ ಮುನ್ನುಡಿ ಬರೆದ ಖ್ಯಾತ ಬರಹಗಾರ #ಅರವಿಂದ_ಚೊಕ್ಕಾಡಿ ಅವರು ಮಂಜುಳಮ್ಮ ಸಾಕ್ಷಾತ್ ಗ್ರಾಮ ಭಾರತದ ದಶ೯ನ ಎಂದು ಬರೆದಿದ್ದಾರೆ.
ಮಂಜುಳಮ್ಮ ತನ್ನ ಕಷ್ಟದ ದುಡಿಮೆಯಲ್ಲಿ ಮಗಳನ್ನ ಇಂಜಿನಿಯರ್ ಓದಿಸುತ್ತಿದ್ದಾಳೆ ಹಾಗೂ ಮೌಲ್ಡಿಂಗ್ ಮನೆ ಕೂಡ ನಿರ್ಮಿಸಿದ್ದಾಳೆ ಅವಳಿಗೆ ವಿದ್ಯಾಭ್ಯಾಸ ದೊರೆತಿದ್ದರೆ ದೊಡ್ಡ ಉದ್ಯೋಗಸ್ಥಳಾಗುತ್ತಿದ್ದಳು ಎಂಬುದರಲ್ಲಿ ಅನುಮಾನ ಇಲ್ಲ, ನಮ್ಮ ಸಂಸ್ಥೆಯಲ್ಲಿ ಮಂಜುಳಮ್ಮನಿಗೆ ಎಲ್ಲಾ ಸಿಬ್ಬಂದಿಗಳೂ ಗೌರವಿಸುತ್ತಾರೆ.
ದುಡಿಯುವವನಿಗೆ ಸಂಬಳ ಕೊಡುವವನೆ ಮಾಲಿಕ ಆದರೆ ಸಂಬಳ ಕೊಡುವ ಮಟ್ಟಕ್ಕೆ ಅವನನ್ನು ಬೆಳೆಸಿದವನೆ ಕಾರ್ಮಿಕ ಎಂಬುದು ವಾಸ್ತವ.
Comments
Post a Comment