Blog number 2128. ಭಾಗ -6.ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕ ಸರಣಿ ಲೇಖನಗಳು. ಕದಂಬರ ಇತಿಹಾಸ ಸಂಶೋಧನೆ ಮತ್ತು ಸಂರಕ್ಷಣೆಗೆ ಪಣ ತೊಟ್ಟಿರುವ ಶಿರಾಳಕೊಪ್ಪದ ಕನ್ನಡ ಸಂಶೋದನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ (ರಿ) ಅಧ್ಯಕ್ಷ ಎಂ.ನವೀನ್ ಕುಮಾರ್ ಸಾಧನೆಗಳು
#ಸ್ವಂತ_ಹಣ_ಖರ್ಚು_ಮಾಡಿ_ಕದಂಬ_ಇತಿಹಾಸ_ಪ್ರಚಾರ_ಮಾಡುವ
#ಈ_ಅಪ್ರತಿಮ_ಯುವಕನ_ಸಾಧನೆ_ನೋಡಿ
#ತಾಳಗುಂದ_ಉತ್ಸವದ_ನಂತರ_ಇವರು_ದೂರದರ್ಶನದಲ್ಲಿ
#ಕದಂಬ_ಅಕ್ಷರ_ವೀರ_ಕಾರ್ಯಕ್ರಮ_ನಡೆಸಿದರು
#ಈ_ಕಾಯ೯ಕ್ರಮದಲ್ಲಿ_20_ಜಿಲ್ಲೆಗಳ_ಎರೆಡು_ಸಾವಿರಕ್ಕೂ_ಹೆಚ್ಚು_ವಿದ್ಯಾರ್ಥಿಗಳು_ಭಾಗಿ_ಆಗಿದ್ದರು
#ಲಕ್ಷಾಂತರ_ನಗದು_ಬಹುಮಾನದ_ಸ್ಪರ್ದೆ_ಶಿಕಾರಿಪುರದಲ್ಲೇ_ದೂರದರ್ಶನ_ಚಿತ್ರಿಕರಣ
#ಹೀಗೆ_ಸಾಗಿದೆ_ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರಾದ
#ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರರ_ಕದಂಬ_ಸಾಮ್ರಾಜ್ಯದ
#ಅಭಿಮಾನ.
ಕನ್ನಡದ ಮೊದಲ ರಾಜರಾದ ಕದಂಬ ಸಾಮ್ರಾಜ್ಯದ ಮಯೂರ ಶರ್ಮ ಹವ್ಯಕ ಬ್ರಾಹ್ಮಣ ಇದೆಲ್ಲವೂ ಶಾಸನಗಳಲ್ಲಿ ದಾಖಲಾಗಿದೆ ಇವರು ಸ್ಥಾಪಿಸಿದ ತಾಳಗುಂದದ ವಿಶ್ವವಿದ್ಯಾಲಯ ನಳಂದ ವಿಶ್ವವಿದ್ಯಾಲಯದಂತೆ ಪ್ರಸಿದ್ದಿ ಪಡೆದಿತ್ತು ಮತ್ತು ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ಅಲ್ಲ ತಾಳಗುಂದದ ಕದಂಬರ ಶಾಸನವೇ ಕನ್ನಡದ ಮೊದಲ ಶಾಸನ ಎಂಬುದು ಪುರಾತತ್ವ ಇಲಾಖೆಯ ಉತ್ಕನದಲ್ಲಿ ಸಾಬೀತಾಗಿದೆ.
ಈ ತಾಳಗುಂದದ ಕದಂಬ ಶಾಸನಗಳ ಸಂರಕ್ಷಣೆಗಾಗಿ ಸಂಶೋದನೆಗಾಗಿ ಅತಿ ಹೆಚ್ಚು ಶ್ರಮಿಸುತ್ತಿರುವ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಮತ್ತು ಅವರ ಗೆಳೆಯರ ಬಳಗವನ್ನು ಅಭಿನಂದಿಸುತ್ತೇನೆ.
ಇತ್ತೀಚಿನ ದಿನಗಳಲ್ಲಿ ಇತಿಹಾಸ ಸಂಶೋಧನೆಗಾಗಿ ಸರ್ಕಾರದ ಅನುದಾನ ಪಡೆದು ನಿಷ್ಪ್ರಯೋಜಕರಾಗಿರುವ ಅನೇಕ ಇತಿಹಾಸಕಾರರಿದ್ದಾರೆ ಅವರ ಮಧ್ಯದಲ್ಲಿ ತಮ್ಮ ಊರಿನ ಇತಿಹಾಸದ ಸಂರಕ್ಷಣೆ ಸಂಶೋಧನೆಗಾಗಿ ತಮ್ಮ ಸ್ವಂತ ಜೇಬಿನಿಂದ ತಮ್ಮ ದುಡಿಮೆಯ ಹಣ ವಿನಿಯೋಗಿಸುವ ಅಪರೂಪದಲ್ಲಿ ಅಪರೂಪವಾದ ಈ ಯುವಕರ ಕಾಳಜಿಗೆ ಎಷ್ಟು ಹೊಗಳಿದರೂ ಸಾಲದು.
ಇವರ ಸಂಪರ್ಕ ಸಂಖ್ಯೆ 98444 91854.
Comments
Post a Comment