Blog number 2114. ಶಿವಮೊಗ್ಗ ಜಿಲ್ಲೆಯ ಸಾತ್ವಿಕ ರಾಜಕಾರಣಿ ಹೋರಟಗಾರ ಮಾಜಿ ಶಾಸಕ ಬಿ.ಸ್ಪಾಮಿರಾವ್ ಅವರ 94 ನೇ ಹುಟ್ಟು ಹಬ್ಬಕ್ಕೆ ಅವರ ಸಮಗ್ರ ಆತ್ಮ ವೃತ್ತಾಂತ ಬರೆದು ಪ್ರಕಟಿಸಿ ಜಿಲ್ಲೆಯ ರಾಜಕಾರಣದ ಇತಿಹಾಸ ಮುಂದಿನ ತಲೆಮಾರಿಗೆ ತಲುಪಿಸಿರುವ ಪತ್ರಕರ್ತ ಶ್ರೀಕಂಠ ಹೆಚ್ .ಆರ್. ಅಭಿನಂದನಾರ್ಹರು.
#ಸಂಪಾದಕ_ಶ್ರೀಕಂಠರು_ತಮ್ಮ_ಹೊಸನಗರ_ವಿಧಾನ_ಸಭಾ_ಕ್ಷೇತ್ರದ_ಶಾಸಕರಾದ
#ಬಿ_ಸ್ವಾಮಿರಾವ್_ಅವರ_ಸಂಪೂರ್ಣ_ಜೀವನ_ವೃತ್ತಾಂತ_ವರ್ಷಗಟ್ಟಲೆ_ದಾಖಲಿಸಿ
#ನಾನು_ಹೇಳುವುದೆಲ್ಲ_ಸತ್ಯ_ಎಂಬ_ಪುಸ್ತಕ_ಸ್ವಾಮಿರಾವ್_94ನೇ_ಹುಟ್ಟು_ಹಬ್ಬದ_ದಿನ
#ಅವರಿಗೆ_ಉಡುಗೊರೆಯಾಗಿ_ನೀಡಿದ್ದಾರೆ
#ಈ_ಪ್ರಸ್ತಕ_ಬೇಕಾದವರು_ಶ್ರೀಕಂಠರ_ಫೋನ್_ನಂಬರ್_9483016851_ಫೋನ್_ಮಾಡಿ
#ತರಿಸಿಕೊಳ್ಳಿ_ಕೆಲವೇ_ಪುಸ್ತಕ_ಉಳಿದಿದೆ.
https://youtu.be/3u1bf6nAGO0?feature=shared
. ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಅವರಿಂದ ಹೊಸನಗರದ ಪತ್ರಕರ್ತ ಶ್ರೀಕಂಠ ಮೊದಲ ಪರಿಚಯ, ನಂತರ ಯೌತ್ ಹಾಸ್ಟೆಲ್ ಆಪ್ ಇಂಡಿಯಾ ಉಪಾಧ್ಯಕ್ಷ ಆ. ನ. ವಿಜೇಂದ್ರರ ಮೂಲಕ ಐತಿಹಾಸಿಕ ಆನಂದಪುರಂನ ತಾವರೆ ಕೆರೆ ಅಂದರೆ ಅದರ ನೀರು ಅರಬ್ಬಿ ಸಮುದ್ರ ಮತ್ತು ಬಂಗಾಲಕೊಲ್ಲಿ ಎರಡು ಸಮುದ್ರ ಸೇರುವ ಕೆರೆ ಸ್ವಚ್ಛ ಮಾಡಿ ನಮ್ಮ ಪುರ ದೈವ ಶ್ರೀ ರವರಸಿದ್ದಿ ವಿನಾಯಕ ದೇವರ ತೆಪ್ಪೋತ್ಸವದ ದಿನ ಶ್ರೀಕಂಠ ನಮ್ಮ ಜೊತೆ ಭಾಗವಹಿಸಿದ್ದು ನಾನು ಮರೆಯಲಾರೆ.
ಅವರು ಹೊಸನಗರ ತಾಲೂಕಿನ ಇತಿಹಾಸ ದಾಖಲೆ ಮಾಡುವ ಕೆಲಸದಲ್ಲಿ ಅವರು ಹೊಸನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿರಾವ್ ಅವರ ಜೀವನ ವೃತ್ತಾಂತ ಅವರ 94 ನೇ ವಯಸ್ಸಲ್ಲಿ ಅಥವ 94 ನೇ ಹುಟ್ಟುಹಬ್ಬದಂದು ಪ್ರಕಟಿಸಿ ಬಿಡುಗಡೆ ಮಾಡಿ ದಾಖಲೆ ಮಾಡಿದಾರೆ.
ಪ್ರಕಟಿಸಿದ ಸಾವಿರ ಪ್ರತಿ ಬಿಸಿ ದೋಸೆಯಂತೆ ಖಾಲಿ ಆಗಿದೆ, ಉಳಿದಿರುವ ಕೆಲವೇ ಪ್ರತಿ ಬೇಕಾದವರು ಹೊಸನಗರದ ಪತ್ರಕರ್ತರಾದ ಶ್ರೀಕಂಠರ ಫೋನ್ ನಂಬರ್
94830 16851ರಲ್ಲಿ ಸಂಪರ್ಕಿಸಿ ಪಡೆಯಬಹುದು.
ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮುಖವಾಡ ಬಯಲು ಮಾಡಿರುವ ಬಿ.ಸ್ವಾಮಿ ರಾವ್ ಶಾಶ್ವತವಾಗಿ ಈ ಪುಸ್ತಕದಿಂದ ಅಜರಾಮರ ಆಗಿದ್ದಾರೆ.
ಈ ಪುಸ್ತಕದ ಮುಂದಿನ ಭಾಗ ಕೂಡ ಶ್ರೀಕಂಠ ಹೊರತರುವ ಪ್ರಯತ್ನದಲ್ಲಿದ್ದಾರೆ.
Comments
Post a Comment