#ಹದಿನೆಂಟನೆ_ಲೋಕಸಭಾ_ಚುನಾವಣೆ
#ಜೆ_ಹೆಚ್_ಪಟೇಲ್_ಬಂಗಾರಪ್ಪ_ಯಡೂರಪ್ಪ_ಸಂಸದರಾಗಿ_ಆಯ್ಕೆ_ಆಗಿದ್ದ
#ಶಿವಮೊಗ್ಗ_ಲೋಕಸಬಾ_ಕ್ಷೇತ್ರದಿಂದ_ಈ_ಬಾರಿ_ಯಾರು_ಆಯ್ಕೆ_ಆಗಲಿದ್ದಾರೆ.
ದಿನಾಂಕ 7 ಮೇ 2024ರ ಮಂಗಳವಾರ ಶಿವಮೊಗ್ಗ ಲೋಕ ಸಭಾ ಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧೆ ಮಾಡಿದ್ದಾರೆ, ಯಡೂರಪ್ಪರ ಪುತ್ರ ಹಾಲಿ ಸಂಸದ ರಾಘವೇಂದ್ರ BJP ಯಿಂದ ಮತ್ತು ಬಂಗಾರಪ್ಪರ ಪುತ್ರಿ ವರನಟ ರಾಜಕುಮಾರ್ ಸೊಸೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೇಸನಿಂದ ಸ್ವರ್ದಿಸಿದ್ದಾರೆ ಇವರಿಬ್ಬರ ಮಧ್ಯದಲ್ಲಿ BJP ಬಂಡಾಯ ಅಭ್ಯರ್ಥಿ ಆಗಿ ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಪ್ರಧಾನಿ ಮೋದಿ ಭಾವಚಿತ್ರದೊಂದಿಗೆ ಪ್ರಚಾರದ ಮುಂಚೂಣಿಯಲ್ಲಿದ್ದಾರೆ.
2005ರಲ್ಲಿ ಸಮಾಜವಾದಿ ಪಕ್ಷದಿಂದ ಬಂಗಾರಪ್ಪನವರು ಕಾಂಗ್ರೇಸ್ ನಿಂದ ಸ್ಪರ್ದಿಸಿದ್ದ ಅಯನೂರು ಮಂಜುನಾಥರನ್ನ 16ಸಾವಿರದ ಆರುನೂರು ಮತಗಳಿಂದ ಸೋಲಿಸಿ ಸಂಸದರಾಗಿದ್ದರು ಆಗ BJP ಭಾನುಪ್ರಕಾಶ್ ಮೂರನೆ ಸ್ಥಾನ ಪಡೆದರು.
2009ರಲ್ಲಿ ಕಾಂಗ್ರೇಸಿನಿಂದ ಸ್ವರ್ಧಿಸಿದ್ದ ಬಂಗಾರಪ್ಪನವರು ಬಿಜೆಪಿಯಿಂದ ಸ್ಪರ್ದಿಸಿದ್ದ ಬಿ.ವೈ.ರಾಘವೇಂದ್ರರ ಎದರು 52 ಸಾವಿರದ 893 ಮತದಿಂದ ಸೋಲು ಅನುಭವಿಸಿದ್ದರು ಆಗ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಮತ್ತು ಹರತಾಳು ಹಾಲಪ್ಪ ಬಂಗಾರಪ್ಪರ ವಿರುದ್ದ ಪಾಳೆಯದಲ್ಲಿದ್ದರು.
2014ರಲ್ಲಿ ಬಿಜೆಪಿಗೆ ತಾವು ಕಟ್ಟಿದ ಕೆಜೆಪಿಯಿಂದ ವಾಪಾಸು ಬಂದ ಯಡೂರಪ್ಪ ಕಾಂಗ್ರೇಸಿನ ಮಂಜುನಾಥ ಭಂಡಾರಿ ವಿರುದ್ದ ದಾಖಲೆಯ 3 ಲಕ್ಷದ 63 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾದಿಸಿದರು ಆಗ JDSನಿಂದ ಸ್ಪರ್ದಿಸಿದ್ದ ಬಂಗಾರಪ್ಪರ ಪುತ್ರಿ ಗೀತಾ ಶಿವರಾಜ್ ಕುಮಾರ್ ಮೂರನೆ ಸ್ಥಾನಕ್ಕೆ ಹೋದರು.
2018ರಲ್ಲಿ ಉಪ ಚುನಾವಣೆ ನಡೆದಾಗ BJPಯ ರಾಘವೇಂದ್ರ JDS ಪಕ್ಷದಿಂದ (ಕಾಂಗ್ರೇಸ್ ಬೆಂಬಲದಲ್ಲಿ) ಸ್ಪರ್ದಿಸಿದ್ದ ಮದು ಬಂಗಾರಪ್ಪರ ಎದುರು ವಿಜಯಿ ಆದರು
2019ರ ಜನರಲ್ ಎಲೆಕನ್ ನಲ್ಲಿ JDS ಮತ್ತು ಕಾಂಗ್ರೇಸ್ ಸಮ್ಮಿಶ್ರ ಅಭ್ಯರ್ಥಿ ಮದುಬಂಗಾರಪ್ಪ BJPಯ ರಾಘವೇಂದ್ರರ ವಿರುದ್ದ ಸೋಲು ಕಂಡರು.
2024ರ 18ನೇ ಲೋಕಸಭೆಗೆ BJP ರಾಘವೇಂದ್ರರ ಎದರು ಬಂಗಾರಪ್ಪರ ಪುತ್ರಿ ಗೀತಾ ಶಿವರಾಜಕುಮಾರ್ ಕಾಂಗ್ರೇಸ್ ನಿಂದ ಸ್ಫರ್ದಿಸಿದ್ದಾರೆ.
BJP ಗೆ ಬಂಡಾಯವಾಗಿ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪರ ಸ್ಪರ್ದೆ ಶಿವಮೊಗ್ಗ ಲೋಕಸಭೆಯ ಚುನಾವಣೆಯ ಪಲಿತಾಂಶದ ಮೇಲೆ ಯಾವ ಪರಿಣಾಮ ಬೀಳಲಿದೆ ಎಂಬ ಕುತೂಹಲ ಮೂಡಿಸಿದೆ.
Comments
Post a Comment