Blog number 2134. ಜೇನು ತುಪ್ಪದ ಜಾಡಿಯಲ್ಲಿ ಸಂಸ್ಕರಿಸಿದ ಹಣ್ಣುಗಳು ವರ್ಷಗಟ್ಟಲೆ ತಮ್ಮ ತಾಜಾತನ ಕಾಪಾಡಿಕೊಳ್ಳುವ ಗುಣ ಹೊಂದಿದೆ ಇದು ಪ್ರಾಚೀನ ಕಾಲದಲ್ಲಿ ಆಚರಣೆ ಇದ್ದಿದ್ದ ಹಣ್ಣಿನ ಸಂಸ್ಕರಣೆ ಮತ್ತು ನೈಸರ್ಗಿಕ ಶೆಲ್ಫ್ ಲೈಪ್ ಹೆಚ್ಚಿಸುವ ದೇಶಿ ಆಹಾರ ತಂತ್ರಜ್ಞಾನ,
#ಜೇನು_ತುಪ್ಪದ_ವಿಶೇಷ_ಗುಣಗಳು.
#ಈ_ವರ್ಷದ_ಮಾವಿನಹಣ್ಣು_ಜಾಡಿಯಲ್ಲಿ_ಜೇನುತುಪ್ಪದಲ್ಲಿ_ಅದ್ದಿಟ್ಟರೆ
#ಮುಂದಿನ_ವರ್ಷದಲ್ಲಿ_ತೆಗೆದು_ತಿಂದರೆ_ಅದೇ_ತಾಜಾತನ_ಇರುತ್ತದಂತೆ.
#ಈ_ವರ್ಷ_ನಾನು_ಇದನ್ನು_ಪ್ರಯೋಗ_ಮಾಡಿ_ನೋಡಲಿದ್ದೇನೆ.
https://youtube.com/shorts/r7wvbQDxlgs?feature=shared
ಪೈನಾಪಲ್ / ಅನಾನಸ್ ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಆದರೆ ಕೇಂದ್ರ ಸರ್ಕಾರ #ಶಿವಮೊಗ್ಗ ಜಿಲ್ಲೆಯನ್ನು #ಪೈನಾಪಲ್ ಮುಖ್ಯ ಬೆಳೆ ಎಂದು ಘೋಷಿಸಿದೆ ಇದರಿಂದ ಪೈನಾಪಲ್ ಬೆಳೆ ಮೌಲ್ಯವರ್ದನೆ ಎಷ್ಟಾಗಿದೆ ಗೊತ್ತಿಲ್ಲ.
ಜೇನುತುಪ್ಪ ನೈಸರ್ಗಿಕ ಪ್ರಿಸರ್ವೇಟಿವ್ ಅದರಲ್ಲಿ ಯಾವುದೇ ಹಣ್ಣು ಹಾಕಿಟ್ಟರೆ ಆ ಹಣ್ಣು ವರ್ಷಾನುಗಟ್ಟಲೆ ತಾಜಾತನ ಉಳಿಸಿಕೊಳ್ಳುತ್ತದಂತೆ.
ಹಿಂದಿನ ಕಾಲದಲ್ಲಿ ಅಪರೂಪದ ಹಣ್ಣುಗಳನ್ನು ಜೇನು ತುಪ್ಪದ ಜಾರುಗಳಲ್ಲಿ ಹಾಕಿಟ್ಟು ಬೇಕಾದಾಗ ಬಳಸುವ ಸಂಪ್ರದಾಯ ಇತ್ತು ಎನ್ನುತ್ತಾರೆ.
ಬಾಲ್ಯದಲ್ಲಿ ಮಾವ ಹೇಳುತ್ತಿದ್ದ ಕಥೆಗಳಲ್ಲಿ ಕರಡಿ ಹಲಸಿನ ಹಣ್ಣಿನ ತೊಳೆ ಬಿಡಿಸಿ ಒಯ್ದು ರಹಸ್ಯವಾದ ಮರದ ಪೊಟರೆಯಲ್ಲಿ ಜೇನುಗೂಡಿನಿಂದ ಕಿತ್ತು ತಂದ ಜೇನುತುಪ್ಪದಲ್ಲಿ ಅದ್ದಿಡುತ್ತದೆ ಹಲಸಿನ ಹಣ್ಣಿನ ಕಾಲ ಮುಗಿದ ಮೇಲೆ ಕರಡಿ ತಾನೂ ತನ್ನ ಮರಿಗಳಿಗೆ ಒಂದೊಂದು ಜೇನುತುಪ್ಪದ ಹಲಸಿನ ಹಣ್ಣು ತಿನ್ನಿಸುತ್ತದೆ ಎನ್ನುವ ಕಥೆ ನಮಗೆ ಅಪ್ಯಾಯಮಾನವಾಗಿರುತ್ತಿತ್ತು.
ಮಾವ.. ಮಾವಾ.. ಕರಡಿಗೆ ಜೇನು ಕಚ್ಚುವುದಿಲ್ಲವಾ ಅಂದರೆ ಮಾವ ಅದರ ದೇಹ ಉದ್ದ ಕೂದಲ ಕಂಬಳಿ ಇದ್ದಂತೆ, ಕಂಬಳಿ ಹೊದ್ದುಕೊಂಡರೆ ಜೇನು ಕಚ್ಚುತ್ತಾ? ಅಂತ ಮರು ಪ್ರಶ್ನೆ ಮಾಡುತ್ತಿದ್ದರು.
ಮರುಬೆಳಿಗ್ಗೆ ನಗರದ ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಜಗಲಿಯಲ್ಲಿ ಮಾವ ಹಲಸಿನ ಹಣ್ಣು ಕೊಯ್ಯುವಾಗ ನಾನು ಜೇನುತುಪ್ಪದ ಬೇಡಿಕೆ ಇಡುತ್ತಿದ್ದೆ ಆಗ ದೊಡ್ಡಮ್ಮ ನಗುತ್ತಾ ಜೇನುತುಪ್ಪ ಹಾಕಿದ ಸಣ್ಣ ಹಿತ್ತಾಳೆ ಬೋಗುಣಿಯಲ್ಲಿ ಹಲಸಿನ ಹಣ್ಣು ಸಣ್ಣದಾಗಿ ಕತ್ತರಿಸಿ ಚಮಚ ಹಾಕಿ ಕೊಡುತ್ತಿದ್ದರು ಅವರೂ ಕೂಡ ರಾತ್ರಿ ಮಾವ (ಅವರ ಅಣ್ಣ) ಹೇಳಿದ ಕಥೆ ಕೇಳಿರುತ್ತಿದ್ದರು.
ನಾನಂತು ರಾತ್ರಿ ಕೇಳಿದ ಕಥೆಯ ಕರಡಿ ಆಗಿ ಜೇನಿನ ಪರಿಮಳ - ಸಿಹಿ ಮತ್ತು ಹಲಸಿನ ಪರಿಮಳ - ಸಿಹಿಯ ಹೊಸರುಚಿಯ ಸವಿಯುತ್ತಿದ್ದೆ.
ಅಕಾಲದಲ್ಲೂ ನಮಗೆ ಅಪ್ಯಾಯಮಾನವಾದ ಹಣ್ಣು ಜೇನು ತುಪ್ಪದಲ್ಲಿ ಇಟ್ಟಿದ್ದನ್ನ ಸೇವಿಸುವ ನೈಸರ್ಗಿಕ ತಂತ್ರಜ್ಞಾನ ಮರೆಯುತ್ತಿದ್ದೇವೆ ಮಾತ್ರವಲ್ಲ ಮರೆತೇ ಬಿಟ್ಟಿದ್ದೇವೆ.
ಆದ್ದರಿಂದ ಈ ವರ್ಷ ಮಾವಿನ ಹಣ್ಣು, ಹಲಸಿನ ಹಣ್ಣು ಮತ್ತು ಪೈನಾಪಲ್ ಹಣ್ಣುಗಳನ್ನು ಜೇನು ತುಪ್ಪದ ಜಾಡಿಗಳಲ್ಲಿ ಇಟ್ಟು ನೋಡುವ ಪ್ರಯೋಗ ಮಾಡಲಿಕ್ಕಾಗಿ ಸುಮಾರು 30 ಕಿಲೊ ಜೇನುತುಪ್ಪ ತೆಗೆದಿರಿಸಿದ್ದೇನೆ.
Comments
Post a Comment