#ಶಿವಮೊಗ್ಗ_ಜಿಲ್ಲೆಯ_ಮಾಸ್ತಿಕಟ್ಟೆಯ_ನಿಡುಗೋಡಿನ
#ದಟ್ಟ_ಅರಣ್ಯದಲ್ಲಿ_ಕುಂಚಿಕಲ್_ಪಾಲ್ಸ್_ನೋಡಿದವರೆಂದು_ಕೆಲವರು_ಪ್ರತಿಕ್ರಿಯಿಸಿದ್ದಾರೆ
#ಅದರ_ನಿಖರ_ಎತ್ತರದ_ಅಳತೆ_ಇನ್ನೊಮ್ಮೆ_ಆಗದೇ_ಇದನ್ನು_ದೇಶದ
#ಅತಿ_ಎತ್ತರದ_ಜಲಪಾತ_ಎಂದು_ನಂಬಲು_ಸಾಧ್ಯವೇ?
#ವರಾಹಿ_ನದಿಯು_ಕುಂಚಿಕಲ್_ಪಾಲ್ಸ್_ಅಳತೆ_ಮಾಡುವವರು_ಯಾರು?
#ಈ_ಕ್ಷೇತ್ರದ_ಶಾಸಕರಾಗಿರುವ_ಮಾಜಿ_ಗೃಹಮಂತ್ರಿ_ಆರಗ_ಜ್ಞಾನೇಂದ್ರ
#ರಾಜ್ಯ_ಸರ್ಕಾರದ_ಜೊತೆ_ಪತ್ರಿಸಿ_ಈ_ಜಲಪಾತದ_ಅಳತೆಗೆ_ಚಾಲನೆ_ನೀಡಬಹುದಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಜಂಕ್ಷನ್ ಈಗ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ದಾಖಲೆ ಪಡೆದಿದೆ ಇಲ್ಲಿಗೆ ಸಮೀಪದ ನಿಡುಗೋಡಿ ಗ್ರಾಮದ ದಟ್ಟ ಅರಣ್ಯದಲ್ಲಿ ವರಾಹಿ ನದಿಯ ಕವಲು ಪಶ್ಚಿಮ ಘಟ್ಟದ ಅಂಚಿನಲ್ಲಿ 1440 ಅಡಿ ಎತ್ತರದ ಜಲಪಾತವಾಗಿ ಹರಿಯುತ್ತಿದೆ ಎಂಬ ಸುದ್ದಿ ಮತ್ತು ಇಷ್ಟು ಎತ್ತರದ ಜಲಪಾತವಾಗಿದ್ದಲ್ಲಿ ಇದು ಹಾಲಿ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ಸರ್ಕಾರ ದಾಖಲೆ ಮಾಡಬೇಕಾಗಿದೆ.
ಈಗ ಗೂಗಲ್ ವಿಕಿಪಿಡಿಯಾಗಳಲ್ಲಿ ಓದುಗರು ಭಾರತದ ಅತ್ಯಂತ ಎತ್ತರದ ಜಲಪಾತ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ನಿಡುಗೋಡು ಗ್ರಾಮದ ಕುಂಚಿಕಲ್ ಪಾಲ್ಸ್ ಎಂದು ನಮೂದಿಸಿದ್ದಾರೆ ಜೊತೆಗೆ ಜಲಪಾತದ ಚಿತ್ರ ಕೂಡ ಹಾಕಿದ್ದಾರೆ.ಆದರೆ ಇದು ಓದುಗರು ಕಾಲ ಕಾಲಕ್ಕೆ ಅಪ್ಡೇಟ್ ಮಾಡಲು ಅವಕಾಶ ಇರುವ ಸಾಮಾಜಿಕ ಜಾಲತಾಣದ ಮಾಹಿತಿ ಕೇಂದ್ರಗಳಾಗಿರುವುದರಿಂದ ಸ್ಥಳೀಯ ಸರ್ಕಾರಿ ಸಂಸ್ಥೆ ದೃಡೀಕರಿಸದೇ ಈ ರೀತಿಯ ಸುದ್ದಿಯನ್ನು ಅಧಿಕೃತ ಅಳತೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ವಿಕಿಪಿಡಿಯಾದಲ್ಲಿ ಕುಂಚಿಕಲ್ ಪಾಲ್ಸ್ ನ ಚಿತ್ರ ಹೊಸದಾಗಿ ಸೇರ್ಪಡೆ ಯಾರೊ ಮಾಡಿದ್ದಾರೆ ಅದು ನಿಜವಾಗಿಯೂ ಕುಂಚಿಕಲ್ ಪಾಲ್ಸ್ ಪೋಟೋನಾ?... ಅಂತ 1974ರಲ್ಲಿ ಕುಂಚಿಕಲ್ ಪಾಲ್ಸ್ ವೀಕ್ಷಣೆ ಮಾಡಿದ್ದೇವೆಂದು ತಿಳಿಸಿದವರಿಗೆ ತೋರಿಸಿದಾಗ ಅವರು ಬಹುತೇಕ ಈ ಪೋಟೋ ಕುಂಚಿಕಲ್ ಪಾಲ್ಸ್ ಸಾಮ್ಯತೆ ಇದೆ ಆದರೆ ಈ ರೀತಿ ಒಂದೇ ನೋಟದಿಂದ ಪೂರ್ತಿ ಜಲಪಾತ ಕಾಣುವುದಿಲ್ಲ ಅದು ಕೆಲ ಹಂತವಾಗಿ ಬೀಳುತ್ತದೆ ಅನ್ನುತ್ತಾರೆ.
ಈ ಪಾಲ್ಸ್ ವೀಕ್ಷಣೆ ಮಾಡಿದವರಾರು ಪೋಟೋ ಚಿತ್ರಿಸಿಲ್ಲ ಆ ಕಾಲದಲ್ಲಿ ಕ್ಯಾಮೇರಾ ಅನ್ನುವುದು ಜನ ಸಾಮಾನ್ಯರ ಬಳಕೆಗೆ ಸಿಗದದ್ದಾಗಿತ್ತು.
ವರಾಹಿ ನದಿ ಮೂಲ ಸಮುದ್ರ ಮಟ್ಟದಿಂದ 2400 ಅಡಿ ಎತ್ತರದಲ್ಲಿರುವುದರಿಂದ ಈ ಜಲಪಾತ 1440 ಅಡಿ ಎತ್ತರ ಇರುವ ಸಾಧ್ಯತೆ ಹೆಚ್ಚಿದೆ.
ಪೂರ್ವ ಕರ್ನಾಟಕದ ನದಿಗಳಲ್ಲೊಂದಾದ ವಾರಾಹಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕುಂದಾಪುರದ ಬಸ್ರೂರು ಹಾಗೂ ಗಂಗೊಳ್ಳಿ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ. ಮುಂದೆ ಹರಿಯುತ್ತಾ ಸೌಪರ್ಣಿಕಾ , ಕೇದಕ, ಚಕ್ರ ಹಾಗೂ ಕುಬ್ಜ ನದಿಗಳನ್ನು ಸಂಗಮಿಸಿ, ಅರಬ್ಬಿ ಸಮುದ್ರವನ್ನು ಸೇರುತ್ತದೆ. ಯಡೂರರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಅಡ್ಡಲಾಗಿ ವಾರಾಹಿ ಅಣೆಕಟ್ಟನ್ನು ಕಟ್ಟಲಾಗಿದೆ.
ರಾಜ್ಯ ಸರ್ಕಾರ ಅಧಿಕೃತವಾಗಿ ಕುಂಚಿಕಲ್ ಜಲಪಾತದ ಎತ್ತರ ಅಳತೆ ಮಾಡಿ ಘೋಷಿಸುವ ತನಕ ಇಂತಹ ಅನೇಕ ವದಂತಿಗಳು ರೆಕ್ಕೆ ಪುಕ್ಕ ಹುಟ್ಟಿಕೊಂಡು ಸುದ್ದಿ ಆಗುತ್ತಲೇ ಇರುತ್ತದೆ.
ಈ ಕ್ಷೇತ್ರದ ಶಾಸಕರಾಗಿರುವ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಸರ್ಕಾರದ ಜೊತೆ ಪತ್ರಿಸಿ ಈ ಜಲಪಾತದ ಅಳತೆಗೆ ಚಾಲನೆ ನೀಡಬಹುದಾಗಿದೆ.
Comments
Post a Comment