Blog number 2131. ಅಡಿಕೆ 10 ನೇ ಶತಮಾನದಲ್ಲಿನ ಉಲ್ಲೇಖಗಳನ್ನ ದಾಖಲಿಸಿರುವ ಶಿವಮೊಗ್ಗದ ಉದೋಯೋನ್ಮುಖ ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರ್
#ಹತ್ತನೆ_ಶತಮಾನದಲ್ಲಿ
#ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ
#ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ
#ಸಂಶೋದಕರಾದ_ರಮೇಶ್_ಹಿರೇಜಂಬೂರ್
#ಹನ್ನೆರಡನೆ_ಶತಮಾನದಲ್ಲಿ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ.
#ಈಗಿನ_ಇರುವಕ್ಕಿ_ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯದ_ಸಂಶೋದನೆ.
#ತೀರ್ಥಹಳ್ಳಿ_ತಾಲ್ಲೂಕಿನ_ಅಡಿಕೆ_ಉತ್ಕೃಷ್ಟ_ಎಂದು_ವರದಿಯಾಗಿದೆ.
ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ.
ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.
ಅವರು 10ನೇ ಶತಮಾನದಲ್ಲಿ ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ ನಮ್ಮ ಜಿಲ್ಲೆಯ ಇತಿಹಾಸ ಸಂಶೋಧಕರಾದ ರಮೇಶ್ ಹಿರೇಜಂಬೂರ್ ಎರೆಡು ವರ್ಷದ ಹಿಂದೆ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು ಆ ಲೇಖನ ಇಲ್ಲಿ ಮಾಹಿತಿಗಾಗಿ ಇನ್ನೊಮ್ಮೆ ಓದಿ.
#12ನೇ_ಶತಮಾನದ_ಶಾಸನದಲ್ಲಿ_ಗೋಟು_ಅಡಿಕೆಯ_ಉಲ್ಲೇಖ (ಲೇ: #ರಮೇಶ್_ಹಿರೇಜಂಬೂರ್).
ಅಡಿಕೆ ಕೃಷಿ ಈಗ ವಾಣಿಜ್ಯ ಬೆಳೆಯಾಗಿ ರೈತರ ವರವಾಗಿ ಪರಿಣಮಿಸಿದೆ. ಇತಿಹಾಸ ಪುಟಗಳಲ್ಲಿ ಸಾವಿರಾರು ವರುಷಗಳಿಂದ ಈ ಭಾಗದಲ್ಲಿ ಅಡಿಕೆ ಮರಗಳ ಉಲ್ಲೇಖವಿದೆ.
#ಪೊನ್ನನ_ಶಾಂತಿನಾಥ_ಪುರಾಣದಲ್ಲಿಯೂ ಅಡಿಕೆಯ ಉಲ್ಲೇಖವಿದೆ ಅದರಲ್ಲೂ ನೆಲವತ್ತಿ ಮತ್ತು ಕಪ್ಪರ ಹಳ್ಳಿಯ ಅಡಿಕೆ ಉತ್ತಮ ಗುಣದ ಅಡಿಕೆ ಎಂದು ಉಲ್ಲೇಖಿಸಿದ್ದಾನೆ. ಈ ನೆಲವತ್ತಿ ಮತ್ತು ಕಪ್ಪರ ಹಳ್ಳಿಯ ಅಡಿಕೆಗಳು 10 ನೇ ಶತಮಾನದಲ್ಲಿ ನಾಡಲ್ಲಿ ಹೆಚ್ಚು ಬೇಡಿಕೆ ಇದ್ದ ಅಡಿಕೆಯಾಗಿದ್ದವು.
ಈಗಿನ #ನ್ಯಾಮತಿ ಮತ್ತು ಶಿಕಾರಿಪುರ ತಾಲೂಕಿನ #ಕಪ್ಪನಹಳ್ಳಿಗಳೇ ನೆಲವತ್ತಿ ಮತ್ತು ಕಪ್ಪರಹಳ್ಳಿಗಳು ಎಂದು ಅಲ್ಲಿನ ಶಾಸನಗಳಿಂದ ಸ್ಪಷ್ಟವಾಗುತ್ತದೆ.
ಅಂದರೆ ಹತ್ತನೇ ಶತಮಾನದ ವೇಳೆಗೆ ಈ ಭಾಗದಲ್ಲಿ ಅಡಿಕೆಯ ಕೃಷಿ ಜೋರಾಗಿತ್ತು ಮತ್ತು ಅದರ ಮಾರಕಟ್ಟೆಯೂ ವಿಶಾಲವಾಗಿತ್ತು ಎನ್ನಬಹುದು.
#ತಾಳಗುಂದದ_12ನೇ_ಶತಮಾನದ ಶಾಸನದಲ್ಲಿಯೂ ಅಡಿಕೆ ತೋಟದ ಉಲ್ಲೇಖವಿದೆ. ಕ್ರಿ.ಶ. 1203ರಲ್ಲಿ ಬಂದಳಿಕೆಯ ಶಾಸನವೊಂದರಲ್ಲಿ ಶಾಂತಿನಾಥ ದೇವರಿಗೆ 500 ಅಡಿಕೆಮರವುಳ್ಳ ತೋಟವನ್ನು ದಾನ ಮಾಡಿದ ಉಲ್ಲೇಖವಿದೆ.
#ಬಳ್ಳಿಗಾವಿಯ_ಕ್ರಿ_ಶ_1156ರ_ಅವಧಿಯ_ಶಾಸನವೊಂದರಲ್ಲಿ ಶ್ರೀ ಕೇದಾರೇಶ್ವರ ದೇವರ ತೋಟದಲ್ಲಿ ಬೆಳೆಯುವ ಗೋಟು ಅಡಿಕೆಯ ಮೇಲಿನ ಕಂದಾಯವನ್ನು ದೇವರ ಆರಾಧನೆಗಾಗಿ ದಾನವಾಗಿ ನೀಡಲಾಗಿದೆ.
ಇಲ್ಲಿ ಗೋಟು ಅಡಿಕೆಯ ಮೇಲೆ ಅಂದೇ tax ಹಾಕುತ್ತಿದ್ದುದು ವಿಶೇಷ. ಅದರಲ್ಲೂ ದೇವಾಲಯದ ತೋಟದ ಅಡಿಕೆಯಾದರೂ ಸಹ ಅದಕ್ಕೆ ಕಂದಾಯ ಕಟ್ಟಬೇಕಾಗಿತ್ತು.
#ಇದು_ಮಲೆನಾಡಿನ_ಅಡಿಕೆಯ_ಬಗ್ಗೆ_ಉಪಯುಕ್ತ_ಮಾಹಿತಿ_ಆಗಿದೆ.
Comments
Post a Comment