Blog number 2132. ಇವತ್ತಿನಿಂದ (21-ಮೇ- 2024) ಕೆಳದಿ ರಾಜರ ಇತಿಹಾಸದ ಕಂತುಗಳು ಡಿಜಿಟಲ್ ಮಾಧ್ಯಮದಲ್ಲಿ ಪ್ರಾರಂಭ, ಇತಿಹಾಸ ತಜ್ಞ ಡಾ.ಗುರುರಾಜ ಕಲ್ಲಾಪುರ ಕೆಳದಿ ಇತಿಹಾಸ ಹೇಳಲಿದ್ದಾರೆ
#ಬಹು_ನಿರೀಕ್ಷಿತ_ಕೆಳದಿ_ಇತಿಹಾಸ
#ಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ಇವತ್ತಿನಿಂದ_ಪ್ರಾರಂಭ
#ನಿವೃತ್ತ_ಕೆಳದಿ_ಮ್ಯೂಸಿಯಂ_ಕ್ಯೂರೇಟರ್_ಗುರುರಾಜಕಲ್ಲಾಪುರ_ಜೊತೆ
#ಶ್ರೀಮತಿ_ನಂದಿನಿ_ಮತ್ತು_ಆಕರ್ಷಹರಳಕಟ್ಟೆ
#ತಪ್ಪದೇ_ವೀಕ್ಷಿಸಿ_ಇದು_ಸಾಗರ_ತಾಲ್ಲೂಕಿನ_ವರದಾನದಿ_ದಂಡೆಯ_ಪ್ರಭುತ್ವದ_ಇತಿಹಾಸ
#ಸಾಗರ_ಪಟ್ಟಣ_ಮಾರಿಕಾಂಬಾ_ಗದ್ದುಗೆ_ಗಣಪತಿ_ದೇವಸ್ಥಾನ_ನಿರ್ಮಿಸಿದ
#ಕೆಳದಿ_ರಾಜ_ವೆಂಕಟಪ್ಪನಾಯಕರ_ಮನೆತನದ_ಕಥೆ.
ನಿನ್ನೆಯ ತನಕ 50 ಕಂತುಗಳಲ್ಲಿ ನಮ್ಮ ಜಿಲ್ಲೆಯ ಶರಾವತಿ ನದಿ ದಂಡೆಯ ಸಾಗರ ತಾಲೂಕಿನ ಅರ್ದ ಭಾಗ ಸೇರಿದ ಗೇರುಸೊಪ್ಪೆ ಸಾಮ್ರಾಜ್ಯದ ಇತಿಹಾಸದ ಕಥೆ ಇತಿಹಾಸ ಸಂಶೋದಕ ಲೋಕರಾಜ ಜೈನರಿಂದ ಡಿಜಿಟಲ್ ಮಾಧ್ಯಮದಲ್ಲಿ ನೋಡಿದ್ದೀರಿ.
ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ ಇತಿಹಾಸದ ಇನ್ನೊಂದು ಭಾಗ ಮುಂದಿನ ದಿನಗಳಲ್ಲಿ ವೀಕ್ಷಕರಿಗೆ ಡಿಜಿಟಲ್ ಮಾಧ್ಯಮ ತಲುಪಿಸಲಿದೆ ಆಗ ಪುನಃ ಲೋಕರಾಜ ಜೈನರ ಆಕರ್ಷಕವಾದ ಇತಿಹಾಸದ ಕಥೆ ಕೇಳಲು ಕಾತುರರಾಗಿದ್ದೇವೆ.
ಒಂದು ವಿಶೇಷ ಅಂದರೆ 5 ಲಕ್ಷ ವೀಕ್ಷಕರಿದ್ದ ಡಿಜಿಟಲ್ ಮಾಧ್ಯಮ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ, ಕದಂಬರು ತಾಳಗುಂದದ ಮೊದಲ ಕನ್ನಡ ಶಾಸನ, ಖಂಡೋಬರಾವ್ ಮ್ಯೂಸಿಯಂ, ಈಸೂರು ಸ್ವಾತಂತ್ರ್ಯ ಹೋರಾಟ, ನೀನಾಸಂ, ಕಡಿದಾಳು ಮಂಜಪ್ಪ, ಸಿಂಹದಾಮ ಮತ್ತು ಸಕ್ಕರೆಬೈಲು ಆನೆ ಕ್ಯಾಂಪ್ ಗಳ ಪ್ರಸರಣದಿಂದ 8 ಲಕ್ಷ ತಲುಪಿದೆ ಅಂದರೆ ನಮ್ಮ ಶಿವಮೊಗ್ಗ ಜಿಲ್ಲೆಯ ಇತಿಹಾಸದ ಮಾಹಿತಿಗೆ ಅಷ್ಟು ಪ್ರಾಮುಖ್ಯವಿದೆ ಎಂಬುದು ಸಾಬೀತಾಗಿದೆ.
ಇವತ್ತಿಂದ ಸಾಗರ ಪೇಟೆಯ ಕೆಳದಿ ಸಮೀಪದ ಹಳ್ಳಿಬೈಲಿನಿಂದ ಚೌಡಪ್ಪನಾಯಕ ಭದ್ರಪ್ಪನಾಯಕ ಎಡಮುರಾರಿ ಬಲಮುರಾರಿ ಎಂಬ ಅವರ ಮನೆಯ ನಿಷ್ಟಾವಂತ ಆಳುಗಳ ಬಲಿದಾನದಿಂದ ಕೆಳದಿ ಇತಿಹಾಸದ ಕಥೆ ಡಿಜಿಟಲ್ ಮಾಧ್ಯಮದಲ್ಲಿ ಪ್ರಾರಂಭವಾಗಿದೆ.
ಕೆಳದಿ ಇತಿಹಾಸ ನಮಗೆ ಹೇಳಲಿದ್ದಾರೆ ತಮ್ಮ ಉದ್ಯೋಗಾವದಿ ಪೂರ್ತಿ ಕೆಳದಿ ಮ್ಯೂಸಿಯಂ ಕ್ಯೂರೇಟರ್ ಆಗಿ ಇತ್ತೀಚಿಗೆ ನಿವೃತ್ತರಾದ ಗುರುರಾಜ ಕಲ್ಲಾಪುರ ಇವರು ಕೆಳದಿ ಇತಿಹಾಸದ ಸಂಶೋದನೆಗಾಗಿ PHD ಪಡೆದವರು ಮತ್ತು ಕೆಳದಿ ಇತಿಹಾಸದ ಬಗ್ಗೆ ಪುಸ್ತಕಗಳ ಬರೆದು ಪ್ರಕಟಿಸಿದ್ದಾರೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಇವತ್ತಿನ ಪ್ರಾರಂಭದ ಕೆಳದಿ ರಾಜರ ಇತಿಹಾಸದ ಡಿಜಿಟಲ್ ಮಾಧ್ಯಮದ ಎಪಿಸೋಡು ವೀಕ್ಷಿಸಬಹುದು
https://youtu.be/ILRfRvYJsTw?feature=shared
ಇನ್ನೊಂದು ವಿಶೇಷ ಅಂದರೆ ಕೆಳದಿ ಮ್ಯೂಸಿಯಂ ಪ್ರಾರ೦ಬಿಸಲು ಮುಖ್ಯ ಕಾರಣ ಅಂದಿನ ಇಲಾಖಾ ಮುಖ್ಯಸ್ಥರಾದ ಮುಳುಗಿದ ದ್ವಾರಕಾ ನಗರ ಸಂಶೋಧಿಸಿದ ಎಸ್.ಆರ್.ರಾವ್.
ಕೆಳದಿ ರಾಜರ ಇತಿಹಾಸ ಮುಗಿಯುವುದರ ಒಳಗೆ #ಡಿಜಿಟಲ್_ಮಾಧ್ಯಮದ ವೀಕ್ಷಕರ ಸಂಖ್ಯೆ 10 ಲಕ್ಷ ದಾಟಲಿ ಎಂದು ಹಾರೈಸುತ್ತೇನೆ.
Comments
Post a Comment