Blog number 2117. ಅನೇಕ ವದಂತಿಗಳ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ವರಾಹಿ ನದಿಯ ನಿಗೂಡ ಎನ್ನಿಸಿದ್ದ ಕುಂಚಿಕಲ್ ಪಾಲ್ಸ್ ಮೊದಲ ವಿಡಿಯೋ ಚಿತ್ರೀಕರಿಸಿದವರು ಸಮಾಜ ಸೇವಕ ನಗರದ ನಾರಾಯಣ ಕಾಮತ್
#ನಿಗೂಡ_ಎನ್ನಿಸಿದ್ದ_ಕುಂಚಿಕಲ್_ಪಾಲ್ಸ್_ಮೊದಲ_ವಿಡಿಯೊ_ಮಾಡಿದ_ದಾಖಲೆ
#ಬಿದನೂರು_ನಗರದ_ಸಮಾಜ_ಸೇವಕ_ನಾರಾಯಣ_ಕಾಮತರದ್ದು
#2018ರ_ಆಗಸ್ಟ್_1ರಂದು_ಸುಬ್ರಮಣ್ಯಭಾಗವತರು_ಅನಂತಮೂರ್ತಿಶೆಣೈ_ಕಿರಣದಾಸ್
#ಮತ್ತು_ಮಾಸ್ತಿಕಟ್ಟೆಯ_ಆಟೋ_ರಿಕ್ಷಾ_ಡ್ರೈವರ್_ಜೊತೆ
#ಕುಂಚಿಕಲ್_ಪಾಲ್ಸ್_ತಲುಪಿದ್ದರು.
https://youtube.com/shorts/XQfS8Ep-Fdo?feature=shared.
ದೇಶದಲ್ಲೇ ಅತಿ ಎತ್ತರದ ಜಲಪಾತ ಎಂಬ ವದಂತಿಗಳಿರುವ ಕುಂಚಿಕಲ್ ಪಾಲ್ಸ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ದಟ್ಟ ಅರಣ್ಯದ ಮಧ್ಯ ವರಾಹಿ ನದಿಯ ನೀರು ಬೀಳುವ ಜಲಪಾತ ಆಗಿದೆ.
ಇದು ಸ್ಥಳೀಯರಿಗೆ ಮಾತ್ರ ಗೊತ್ತಿದ್ದ ಪಾಲ್ಸ್ ಆಗಿದ್ದರೂ ಇಲ್ಲಿಗೆ ತಲುಪಲು ರಸ್ತೆ ಇಲ್ಲ, ಕಡಿದಾದ ದುರ್ಗಮವಾದ ದಟ್ಟ ಅರಣ್ಯದಲ್ಲಿ ಈ ಸ್ಥಳ ತಲುಪ ಬಹುದಾದರೂ ವನ್ಯಪ್ರಾಣಿಗಳು, ಜಿಗಣೆಗಳಿಂದ ತಪ್ಪಿಸಿಕೊಂಡು ಹೋಗಬೇಕು, ಹೋದರೂ ಅಲ್ಲಿ ಸುರಕ್ಷಿತವಾಗಿ ನಿಂತು ವೀಕ್ಷಣೆಗೆ ಸರಿಯಾದ ಜಾಗವೂ ಇಲ್ಲ.
ಒಮ್ಮೆ ಕಷ್ಟಪಟ್ಟು ಹೋದವರು ಇನ್ನೊಮ್ಮೆ ಇಲ್ಲಿಗೆ ಹೋಗಲು ಮನಸ್ಸು ಮಾಡುವುದಿಲ್ಲ ಈಗ ಕರ್ನಾಟಕ ಪವರ್ ಕಾರ್ಪೊರೇಷನ್ ಮತ್ತು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅಲ್ಲಿಗೆ ಹೋಗಲು ಸಾಧ್ಯವೇ ಇಲ್ಲ.
ಇದು ನಕ್ಸಲ್ ಪೀಡಿತ ಪ್ರದೇಶವೂ ಆಗಿರುವುದರಿಂದ ಇದು ಪ್ರವಾಸ ಯೋಗ್ಯ ಸ್ಥಳವಲ್ಲ.
. ವರಾಹಿ ವಿದ್ಯುತ್ ಯೋಜನೆಗಾಗಿ ಈ ಪ್ರದೇಶ ಮುಳುಗಡೆ ಆದ್ದರಿಂದ ಸ್ಥಳಿಯರಾರು ಇಲ್ಲಿಲ್ಲ, ಉಳಿದ ಕೆಲವರಿಗೆ ಈ ಜಲಪಾತದ ಮಾಹಿತಿಯೂ ಇಲ್ಲ.
1995ರಲ್ಲಿ ಕುಂಚಿಕಲ್ ಜಲಪಾತಕ್ಕೆ ಹೋಗುವ ಒಂದು ವಿಫಲ ಪ್ರಯತ್ನ ನಾನು ಮತ್ತು ನನ್ನ ಗೆಳೆಯರು ನಡೆಸಿದ್ದರಿಂದ ಕಳೆದ 30 ವರ್ಷದಿಂದ ಈ ಜಲಪಾತ ನನ್ನನ್ನು ಕಾಡುತ್ತಿದೆ,ಆದ್ದರಿಂದ ನಾನು ಈ ಜಲಪಾತದ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದೆ ಅದನ್ನು ಓದಿದವರು ಕುಂಚಿಕಲ್ ಜಲಪಾತ ಇರುವುದೇ ಸುಳ್ಳು ಅಂತ, ಕೆಲವರು ನಾವು ನೋಡಿದ್ದೇವೆ ಅಂತ, ಇನ್ನೂ ಕೆಲವರು ನೋಡಿದ್ದೇವೆ ಪೋಟೋ ತೆಗೆದಿಲ್ಲ ಅಂತೆಲ್ಲ ಮಾಹಿತಿ ನೀಡಿದ್ದರು.
ಪರಿಸರದ ಕಾಳಜಿಯ ಗೆಳೆಯರು ಕುಂಚಿಕಲ್ ಪಾಲ್ಸ್ ಬಗ್ಗೆ ಏನೂ ಬರೆಯಬೇಡಿ ಇದರಿಂದ ಪ್ರವಾಸದ ಹೆಸರಲ್ಲಿ ಪರಿಸರ ಹಾಳು ಮಾಡುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕುಂಚಿಕಲ್ ಪಾಲ್ಸ್ ಪೋಟೋ ಅಂತ ಹರಿದಾಡುತ್ತಿದೆ ಅದು ಕುಂಚಿಕಲ್ ಪಾಲ್ಸ್ ಅಸಲಿ ಪೋಟೋ ಹೌದೋ ಅಲ್ಲವೊ ಎಂಬ ಅನುಮಾನ ಕೆಲವರು ವ್ಯಕ್ತಪಡಿಸಿದ್ದರು.
ಹಾಗಾದರೆ ಈವರೆಗೆ ಈ ಪಾಲ್ಸ್ ನ ಫೋಟೋ ವಿಡಿಯೋ ತೆಗೆದಿಲ್ಲ ಏಕೆ? ...ಈ ಜಲಪಾತದ ಅಳತೆಯ ಬಗ್ಗೆ ಅನೇಕ ವದಂತಿಗಳಿದೆ ಅದರಲ್ಲಿ ಈ ಜಲಪಾತದ ಎತ್ತರ 1440 ಅಡಿಗಿಂತ ಜಾಸ್ತಿ ಎಂಬ ಸುದ್ದಿ ಕೂಡ.
ಇಷ್ಟು ಎತ್ತರದ ಜಲಪಾತ ನಮ್ಮ ಭಾರತ ದೇಶದಲ್ಲಿ ಇನ್ನೊಂದಿಲ್ಲ ಹಾಗಾದರೆ ಕುಂಚಿಕಲ್ ಜಲಪಾತ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಎಂದು ಯಾಕೆ ದಾಖಲಾಗಿಲ್ಲ? ಇಂತಹ ನೂರಾರು ಪ್ರಶ್ನೆ ನನ್ನದು ಆದ್ದರಿಂದ ನಾನು ನನ್ನ ಅನೇಕ ಲೇಖನಗಳಲ್ಲಿ ಈ ಬಗ್ಗೆ ಪ್ರಸ್ತಾವಿಸುತ್ತಲೇ ಬಂದಿದ್ದೆ.
ನಿನ್ನೆ ಗೆಳೆಯರಾದ ನಗರದ ಸುದೀಂದ್ರ ಭಂಡಾರ್ಕರ್ (ಸಾಹಿತಿಗಳು ಅತ್ಯುತ್ತಮ ಛಾಯಾಗ್ರಾಹಕರು) ತಮ್ಮ ಊರಾದ ನಗರದ ನಾರಾಯಣ ಕಾಮತರು ಮತ್ತು ಸುಬ್ರಮಣ್ಯ ಭಟ್ಟರು ಕೆಲ ವರ್ಷದ ಹಿಂದೆ ಕಂಚಿಕಲ್ ಪಾಲ್ಸ್ ಗೆ ಹೋಗಿದ್ದರು ವಿಡಿಯೋ ಕೂಡ ಮಾಡಿ ಅವರ ಪೇಸ್ ಬುಕ್ ನಲ್ಲಿ ಹಾಕಿದ್ದರು ಅಂತ ಅವರ ಸೆಲ್ ಫೋನ್ ನಂಬರ್ ಶೇರ್ ಮಾಡಿದ್ದರು.
ಇವತ್ತು ನಗರದ ನಾರಾಯಣ ಕಾಮತ್ ರಿಗೆ ಫೋನ್ ಮಾಡಿದಾಗ ಅವರಿಗೆ ನನ್ನ ಪರಿಚಯ ಇರುವುದು ತಿಳಿದು ಸಂತೋಷವಾಯಿತು, ಇವರ ಅಜ್ಜ ನಗರದ ಸ್ವಾಮಿರಾಯರು ದೊಡ್ಡ ಜಮೀನ್ದಾರರು, ಇವರ ತಂದೆ ಅಪ್ಪೂರಾಯರ ಹೆಸರಲ್ಲಿ ನಾರಾಯಣ ಕಾಮತರು ನಗರ ಬಸ್ ನಿಲ್ದಾಣದ ಸಮೀಪ ಕಾಂಪ್ಲೆಕ್ಸ್ ಕಟ್ಟಿದ್ದಾರೆ.
ಎರಡು ಅವಧಿ ಮೂಡುಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದವರು, ಸಂಯುಕ್ತ ಕರ್ನಾಟಕ ಮತ್ತು ಹೊಸ ದಿಗಂತ ವರದಿಗಾರರು, ಹಾವು ಮನೆ ಒಳಗೆ ಬಂದರೆ ಹಿಡಿದು ಕಾಡಿಗೆ ಬಿಡುವ ಸಾಹಸಿ, ಆಪತ್ಕಾಲಕ್ಕೆ ವಾಹನ ಸೇವೆಯೂ ಇವರದ್ದಿದೆ.
ಮಾಜಿ ಶಾಸಕರಾದ ಬಿ.ಸ್ವಾಮಿರಾವ್ ಪ್ರೌಡ ಶಾಲೆ ವ್ಯಾಸಂಗಕ್ಕೆ ಹಾಸ್ಟೆಲ್ ಕೊಡಿಸಿದ್ದು ಇವರ ಅಜ್ಜನ ಆಸ್ತಿ ಹಿಸ್ಸೆಗೆ ಶಾಸಕರಾಗಿದ್ದ ಸ್ವಾಮಿರಾವ್ ಬಂದಿದ್ದು (ಇವರ ಅಜ್ಜನ ಹೆಸರೂ ಸ್ವಾಮಿ ರಾವ್) ನಂತರ ಹೋಟೆಲ್ ಕೆಲಸ, ಮೆಕ್ಯಾನಿಕ್ ಆಗಿದ್ದು, ವಾಜಪೇಯಿ ಅಭಿಮಾನಿ ಆಗಿದ್ದು, ಮಾಸ್ತಿಕಟ್ಟೆ ಸಮಾನ ಮನಸ್ಕರ ಆಂದೋಲನದಲ್ಲಿ ಹುಲಿಕಲ್ ರಸ್ತೆ ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸ ಈ ಗೆಳೆಯರು ಮಾಡಿದ್ದಾರೆ.
ಈ ಗೆಳೆಯರ ತಂಡ ದಕ್ಷಿಣ ಭಾರತದ ಪ್ರವಾಸ ಮಾಡಿದ ನಂತರ ಕೆಲ ವರ್ಷದ ಹಿಂದೆ ಒಮ್ಮೆ ಮೊದಲ ಬಾರಿಗೆ ಜನವರಿ ತಿಂಗಳಲ್ಲಿ ಕುಂಚಿಕಲ್ ಪಾಲ್ಸ್ ಗೆ ಚಾರಣ ಹೋಗಿದ್ದರು ಆದರೆ ಅವತ್ತಿನ ಕೆಲ ಪೋಟೋ ಇವರಲ್ಲಿ ಇಲ್ಲ, ಜನವರಿಯಲ್ಲೂ ನೀರಿನ ಹರಿವು ಚೆನ್ನಾಗಿತ್ತು ಎನ್ನುತ್ತಾರೆ.
ಡ್ಯಾಂ ನಿರ್ಮಿಸಿ ವರಾಹಿ ನದಿ ತಿರುವು ಮಾಡಿದ್ದರಿಂದ ಈ ಜಲಪಾತದಲ್ಲಿ ಮೊದಲಿನ ಬಾರೀ ಪ್ರಮಾಣದ ನೀರಿನ ಹರಿವು ಇಲ್ಲ.
2018ರ ಆಗಸ್ಟ್ 1ರಂದು ನಗರದ ನಾರಾಯಣ ಕಾಮತರು ತಮ್ಮ ಜೊತೆ ಸುಬ್ರಮಣ್ಯ ಭಾಗವತರು, ಅನಂತಮೂರ್ತಿ ಶೆಣೈ, ಕಿರಣದಾಸ್ ಮತ್ತು ಮಾಸ್ತಿಕಟ್ಟೆಯ ಆಟೋ ರಿಕ್ಷಾ ಡ್ರೈವರ್ (ಹೆಸರು ಮರೆತಿದ್ದಾರೆ) ಕರೆದು ಕೊಂಡು ಇಲಾಖೆಗಳ ಅನುಮತಿ ಪಡೆದು ಮಧ್ಯಾಹ್ನ 1.30 PM ಗೆ ವಾಹನ ಪಾರ್ಕ ಮಾಡಿ ಹೈದರ್ ಘಾಟ್ ತಲುಪಿ ಮುಂದೆ ಸಾಗಿ ಬಲಕ್ಕೆ ತಿರುಗಿ ಕಾಡಿನಲ್ಲಿ ದಾರಿ ಮಾಡಿಕೊಳ್ಳುತ್ತಾ ಕುಂಚಿಕಲ್ ಪಾಲ್ಸ್ ಮಧ್ಯಕ್ಕೆ ತಲುಪಿ ಪಾಲ್ಸ್ ನ ಮೇಲ್ಬಾಗ ಹತ್ತಿಹೋಗಿ ವಿಡಿಯೋ ಮಾಡಿದ್ದಾರೆ.
ಕುಂಚಿಕಲ್ ಪಾಲ್ಸ್ ನಿಂದ ಉಡುಪಿ ಜಿಲ್ಲೆ ಕಡೆ ಮುಖ ಮಾಡಿದರೆ ಎಡ ಭಾಗದಲ್ಲಿ ಬೇಕರವಾದ ಕಾಡಿದೆ, ವರಾಹಿ ನೀರು ಈ ಜಲಪಾತದಲ್ಲಿ ನಾಲ್ಕು ಹಂತವಾಗಿ ಪಶ್ಚಿಮ ಘಟ್ಟದ ತುದಿಯಿಂದ ದುಮುಕಿ ಉಡುಪಿ ಜಿಲ್ಲೆಯ ತಳಕ್ಕೆ ತಲುಪುತ್ತದೆ ಸಮುದ್ರ ಮಟ್ಟದ ಅಳತೆ ಲೆಕ್ಕಾಚಾರದಲ್ಲಿ ಈ ಜಲಪಾತ 1400 ಅಡಿಗಿಂತ ಎತ್ತರ ಇರುವ ಸಾಧ್ಯತೆ ಎಂದು ನಗರ ನಾರಾಯಣ ಕಾಮತ್ ಒಪ್ಪುತ್ತಾರೆ.
ಈ ಜಲಪಾತ ಮಧ್ಯದಿಂದ ಮೇಲಕ್ಕೆ ಹೋಗಬಹುದು ಆದರೆ ಅಲ್ಲಿಂದ ಕೆಳಗಿನ ತಳಕ್ಕೆ ಇಳಿಯಲು ಸಾಧ್ಯವಿಲ್ಲ, ಇವರು ಅಲ್ಲಿಗೆ ಹೋದ ಕಾಲ ಮಳೆಗಾಲ ಮತ್ತು ಮದ್ಯಾಹ್ನ 3ಕ್ಕೆ ಅಲ್ಲಿ ದಟ್ಟ ಮಂಜು ಮುಸುಕಿದ್ದರಿಂದ ದಾರಿ ಕಾಣುವುದಿಲ್ಲ, ಇಂಬುಳಗಳ ಕಾಟ ಇದರಿಂದ ಇವರನ್ನ ಕರೆದೊಯ್ದ ಸ್ಥಳೀಯ ಮಾರ್ಗದರ್ಶಿ ದಾರಿ ತಪ್ಪುತ್ತಾರೆ, ಅಲ್ಲಿ ಕಾಡುಕೋಣದ ಸಗಣಿಗಳಿಂದ ಸುತ್ತ ಮುತ್ತ ವನ್ಯಪ್ರಾಣಿಗಳು ಇರುವುದು ಇವರಿಗೆಲ್ಲ ಗೊತ್ತಾಗಿದೆ.
ಅಂತೂ ಇಂತೂ ಕಷ್ಟಪಟ್ಟು ವಾಪಾಸು ಬಂದಿದ್ದಾಗಿ ತಿಳಿಸಿದರು ಮತ್ತು ಇನ್ನೊಂದು ಮಾಹಿತಿ ನೀಡಿದ್ದಾರೆ ಅದೇನೆಂದರೆ ಹೊಸಂಗಡಿ ಪವರ್ ಹೌಸ್ ಮುಖ್ಯ ದ್ವಾರದಿಂದ ಈ ಜಲಪಾತದ ಅಸ್ಪಷ್ಟವಾಗಿ ಕಾಣುತ್ತದೆ ಮತ್ತು ಅಲ್ಲಿನ ತೊಂಬತ್ತು ಗ್ರಾಮದಿಂದ ಈ ಜಲಪಾತದ ಬುಡಕ್ಕೆ ಹೋಗುವ ಸಾಧ್ಯಾಸಾಧ್ಯತೆ ಇದೆ ಅನ್ನುತ್ತಾರೆ.
ಇದರಿಂದ ನಿಗೂಡವಾಗಿದ್ದ ಶಿವಮೊಗ್ಗ ಜಿಲ್ಲೆಯ ಕುಂಚಿಕಲ್ ಪಾಲ್ಸ್ ನಗರ ನಾರಾಯಣರ ಪ್ರಯತ್ನದಿಂದ ತೆಗೆದ ವಿಡಿಯೋದಿಂದ ಬಯಲಾಯಿತು ಮತ್ತು ಈ ಜಲಪಾತ ಅಧಿಕೃತ ಅಳತೆ ಮಾಡಿದರೆ ದೇಶದ ಅತಿ ಎತ್ತರದ ಜಲಪಾತ ಎನ್ನುವ ದಾಖಲೆ ಆಗುವ ಆಶಾ ಭಾವನೆ ನನಗಿದೆ.
ಕುಂಚಿಕಲ್ ಪಾಲ್ಸ್ ವಿಡಿಯೋ ಮೊದಲು ಮಾಡಿದ ದಾಖಲೆ ಸಮಾಜ ಸೇವಕ ನಗರದ ನಾರಾಯಣ ಕಾಮತ್ ರ ಹೆಸರಲ್ಲಿದೆ ಆ ವಿಡಿಯೋ ಇಲ್ಲಿದೆ ನೋಡಿ.
ಸಮಾಜ ಸೇವಕ ನಗರ ನಾರಾಯಣ ಕಾಮತ್ ರ ಸಾಹಸಕ್ಕೆ ಅಭಿನಂದನೆ ಸಲ್ಲಿಸಲು ಮತ್ತು ಕುಂಚಿಕಲ್ ಪಾಲ್ಸ್ ಮಾಹಿತಿಗೆ ಅವರ
ಪೋನ್ ನಂಬರ್ 94496 85877ಕ್ಕೆ ಸಂಪರ್ಕಿಸ ಬಹುದಾಗಿದೆ.
Comments
Post a Comment