Blog number 2137. ಕುಂಚಿಕಲ್ ಪಾಲ್ಸ್ ಬಗ್ಗೆ ಪಾಲ್ಸ್ ಸಮೀಪದಲ್ಲೇ ಬಾಲ್ಯಕಳೆದ ಖ್ಯಾತ ಬರಹಗಾರ ಮುಷ್ತಾಕ್ ಹೆನ್ನಾಬೈಲು ಬರೆದ ಪ್ರತಿಕ್ರಿಯೆ ನೋಡಿ
#ಮುಷ್ತಾಕ್_ಹೆನ್ನಾಬೈಲು_ನಾನು_ಇಷ್ಟಪಡುವ_ಹೊಸತಲೆಮಾರಿನ_ಲೇಖಕರು
#ಇವರ_ಊರು_ಹೆನ್ನಾಬೈಲು_ಹೊಸಂಗಡಿ_ಮತ್ತು_ಸಿದ್ದಾಪುರ_ಮಧ್ಯದಲ್ಲಿದೆ.
#ಇವರ_ತಂದೆ_ಅರಣ್ಯ_ಇಲಾಖೆಯಲ್ಲಿದ್ದವರು
#ಅವರಿಗೆ_ಕುಂಚಿಕಲ್_ಜಲಪಾತದ_ಬಗ್ಗೆ_ಹೆಚ್ಚಿನ_ಮಾಹಿತಿ_ಇದ್ದವರು
#ಮಗ_ಮುಷ್ತಾಕ್_ಮತ್ತು_ಗೆಳೆಯರು_ಈ_ಜಲಪಾತ_ನೋಡಲು
#ಅಲ್ಲಿನ_ಅಪಾಯಕಾರಿ_ಮಾಗ೯ದಲ್ಲಿ_ಹೋಗುತ್ತಾರೆಂಬ_ಆತಂಕ_ಇತ್ತವರಿಗೆ
#ಕುಂಚಿಕಲ್_ಪಾಲ್ಸ್_ಲೇಖನಕ್ಕೆ_ಅವರು_ಪ್ರತಿಕ್ರಿಯೆ_ದಾಖಲಿಸಿದ್ದಾರೆ.
https://youtu.be/p3W5GfY7v_Q?feature=shared
ಮುಷ್ತಾಕ್ ಹೆನ್ನಾಬೈಲು ನನ್ನ ಇಷ್ಟದ ಲೇಖಕರು ಹೊಸ ತಲೆಮಾರಿನ ಲೇಖಕರಲ್ಲಿ ಇವರು ಪ್ರಮುಖರು.
ಇವರು ವರಾಹಿ ಜಲ ವಿದ್ಯುತ್ ಸ್ಥಾವರಕ್ಕೆ ಸಮೀಪದ ಹೊಸಂಗಡಿ ಮತ್ತು ಸಿದ್ದಾಪುರದ ಮಧ್ಯದ ಹೆನ್ನಾಬೈಲು ಊರಿನವರು.
ಇವರ ತಂದೆ ಅರಣ್ಯ ಇಲಾಖೆಯಲ್ಲಿ ಸ್ಥಳಿಯವಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೆ ಕುಂಚಿಕಲ್ ಪಾಲ್ಸ್ ಚೆನ್ನಾಗಿ ತಿಳಿದವರು ಆದ್ದರಿಂದಲೇ ಆ ಪಾಲ್ಸ್ ಗೆ ಹೋಗುವ ಮಾರ್ಗ ಅಪಾಯಕಾರಿ ಎಂದಿದ್ದಾರೆ ಅಷ್ಟೆ ಅಲ್ಲ ಮಗ ಮುಷ್ತಾಕ್ ಮತ್ತವರ ಗೆಳೆಯರು ಈ ಜಲಪಾತ ವೀಕ್ಷಣೆಗೆ ಹೋಗ ಬಹುದೆಂಬ ಆತಂಕ ಇತ್ತಂತೆ.
ಕುಂಚಿಕಲ್ ಪಾಲ್ಸ್ ಬಗ್ಗೆ ಅವರ ಪ್ರತಿಕ್ರಿಯೆ ಸ್ಥಳಿಯರಲ್ಲಿ ಈ ಜಲಪಾತದ ಬಗ್ಗೆ ಇರುವ ಅಭಿಪ್ರಾಯವೇ ಆಗಿದೆ....
#ArunPrasad ನನ್ನ ಊರಿನಿಂದ ಹೊಸಂಗಡಿ 5 ಕಿಲೋಮೀಟರ್ ಇದೆ, ಅಲ್ಲಿಂದ ಎರಡು ಕಿಲೋಮೀಟರ್ ಮುಂದೆ ಹೋದರೆ ವಾರಾಹಿ ಭೂಗರ್ಭ ವಿದ್ಯುದಾಗಾರಕ್ಕೆ ಹೋಗುವ ದಾರಿಯಲ್ಲಿ ಈ ಜಲಪಾತ ದೂರದಿಂದ ಕಾಣುತ್ತದೆ.
ನನ್ನ ತಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು, ತಂದೆ ಯಾವತ್ತೂ ಈ ಜಲಪಾತದ ಬಗ್ಗೆ ಹೇಳುತ್ತಿದ್ದರು "ಆದರೆ ಅಲ್ಲಿಗೆ ತಲುಪೋದು ಮಾತ್ರ ಬಹಳ ಕಷ್ಟ, ಇಬ್ಬರಾಗಲಿ ಮೂವರಾಗಲಿ ಹೋಗುವಂತ ಸ್ಥಳ ಅದಲ್ಲ, ಎಲ್ಲ ವಿಧದಲ್ಲೂ ಅಪಾಯಕಾರಿ" ಅಂತ ಹೇಳುತ್ತಿದ್ದರು.
ಅವರಿಗೆ ಆ ಜಲಪಾತಕ್ಕೆ ನಾನು ಮತ್ತು ನನ್ನ ಮಿತ್ರರು ಹೋಗುವ ಹವಣಿಕೆಯಲ್ಲಿದ್ದಾರೆ ಎನ್ನುವ ಆತಂಕವಿತ್ತು, ಹಾಗಾಗಿ ನನಗೆ ನಿತ್ಯವೂ ಎಚ್ಚರಿಸುತ್ತಿದ್ದರು.
ಬಹಳಷ್ಟು ಜನ ಹಿರಿಯರು, ಅಲ್ಲಿ ಯಾವತ್ತೂ ಕೊಳೆತ ವಾಸನೆ ಹೆಚ್ಚು ಬರುತ್ತದೆ, ವಿಚಿತ್ರ ಶಬ್ದ ಎಲ್ಲ ಬರುತ್ತದೆ ಅಂತ ಹೇಳುವುದನ್ನು ಕೂಡ ಕೇಳಿದ್ದೇನೆ... ಆದರೆ ನನಗೆ ಇದು ಭಾರತದ ಅತಿ ಎತ್ತರದ ಜಲಪಾತ ಎಂದು ಗೊತ್ತಿರಲಿಲ್ಲ.
. ನನ್ನ ಊರಿನಲ್ಲಿದ್ದ ಅರಣ್ಯ ರಕ್ಷಕರು ಒಬ್ಬರು ನಾಲ್ಕೈದು ವರ್ಷಗಳ ಹಿಂದೆ ಹೀಗೆ ಮಾತನಾಡುವಾಗ ಅದು ಭಾರತದ ಅತಿ ಎತ್ತರದ ಜಲಪಾತ ಎಂದು ಹೇಳಿದ್ದರು, ಆದರೆ ನಾನು ಸುಮ್ಮನೆ ವೈಭವಿಕರಿಸುತ್ತಿದ್ದಾರೆ ಎಂದು ಭಾವಿಸಿದ್ದೆ.
ಕಳೆದ ವರ್ಷ ಯಾರೋ ಅಲ್ಲಿಗೆ ಹೋಗಿ ಚಿತ್ರೀಕರಣ ಮಾಡಿ ಅದನ್ನು ಸತ್ಯವೆಂದು ಹೇಳಿದ್ದರು, ಈಗ ಅನಿಸುತ್ತಿದೆ ಇದ್ದರೂ ಇರಬಹುದು ಅಂತ.
ಹೆಚ್ಚು ಕಡಿಮೆ ಐದು ಕಿಲೋಮೀಟರ್ ದೂರದಿಂದಲೇ ಕಾಣುತ್ತದೆ,ಗ್ರಾಮೀಣ ಜನರು ಈ ಕಾಣುವ ಅಂತರವನ್ನು 5 km ಅಂತಾರೆ, ನನ್ನ ಪ್ರಕಾರ ಅದಕ್ಕಿಂತ ಹೆಚ್ಚು ಅಂತರದಿಂದ ಅದು ಕಾಣುತ್ತಿದೆ.
ಯಾವುದಕ್ಕೂ ಈಗ ಅಲ್ಲಿಗೆ ತಲುಪಿರುವ ತಂಡಕ್ಕೆ ಶುಭ ಹಾರೈಸುತ್ತೇನೆ. ಹಾಗೆ ಜೂನ್ ತಿಂಗಳಲ್ಲಿ ಮಳೆ ಇರುವುದರಿಂದ ಜಾಗರೂಕರಾಗಿರಲು ಹೇಳಿ..
Comments
Post a Comment