Blog number 2105. ಶಿವಮೊಗ್ಗ ಜಿಲ್ಲೆಯ ನಮಗೆ ಗೊತ್ತಿಲ್ಲದ ಅಥವ ಅಸ್ಪಷ್ಟ ಮಾಹಿತಿ ಕೇಳಿದ್ದ ಶಿವಮೊಗ್ಗ ಜಿಲ್ಲೆಯ ಇತಿಹಾಸವನ್ನು ಸ್ಥಳಿಯ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ಇತಿಹಾಸ ಸಂಶೋಧಕರ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ದಾಖಲಿಸುತ್ತಿರುವ ಆಕರ್ಷ ನಂದಿನಿ ದಂಪತಿಗಳ ಅಮೂಲ್ಯ ಇತಿಹಾಸ ಸಂರಕ್ಷಣ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಗಳು.
#ಬೆಂಜಮಿನ್_ಲೂವಿಸ್_ರೈಸ್_ನಂತರ_125_ವರ್ಷಗಳ_ನಂತರ
#ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಕುರುಹು_ಹುಡುಕಿಕೊಂಡು_ಬಂದು
#ತಮ್ಮ_ಡಿಜಿಟಲ್_ಮಾಧ್ಯಮದಲ್ಲಿ_ದಾಖಲಿಸುತ್ತಿರುವ_ಆಕರ್ಷ_ನಂದಿನಿ_ದಂಪತಿಗಳು
#ಇವರಿಗೆ_ಸಹಕರಿಸುತ್ತಿರುವ_ಇತಿಹಾಸ_ಸಂಶೋಧಕರಾದ
#ಲೋಕರಾಜ_ಜೈನ್_ರಮೇಶ್_ಹಿರೇಜಂಬೂರ್_ಶಿರಾಳಕೊಪ್ಪದ_ಪತ್ರಕರ್ತ_ನವೀನ್
#ಪ್ರತಿಯೊಂದು_ಭಾಗವೂ_ಉಪಯುಕ್ತ_ಮಾಹಿತಿ_ಒಳಗೊಂಡಿದೆ
#ಶಿವಮೊಗ್ಗ_ಜಿಲ್ಲೆಯ_ಸಮಗ್ರಇತಿಹಾಸ_ಹೊಸ_ತಲೆಮಾರಿನ_ದೃಶ್ಯ_ಮಾಧ್ಯಮದಲ್ಲಿ
#ಮುಂದಿನ_ತಲೆಮಾರಿಗೆ_ಸಂರಕ್ಷಿಸಲಾಗುತ್ತಿದೆ.
ಶರಾವತಿ ನದಿಯ ದಂಡೆಯ ಬಲಿಷ್ಟವಾದ ಏಕೈಕ ಜೈನ ರಾಜರ ಆಡಳಿತದ ಕಥೆ ಭಾರತೀಯರೆಲ್ಲರಿಗೂ ಮುಖ್ಯವಾದ ಇತಿಹಾಸ ಆದರೂ ಸಾಗರ ತಾಲೂಕಿನ ಜನತೆಗೆ ಬಹುಮುಖ್ಯ ಇತಿಹಾಸ ಇದನ್ನು ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮದ ಮೂಲಕ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕರು ಈ ರಾಣಿಯ ವಂಶಸ್ಥರೂ ಆಗಿರುವ #ಲೋಕರಾಜ್_ಜೈನ್ ತುಂಬಾ ಸ್ಟಾರಸ್ಯವಾಗಿ ಜನತೆಗೆ ವಿವರಿಸುತ್ತಿದ್ದಾರೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/kOk6J1zx6to?feature=shared
ಈ ರಾಣಿಯ ಆಡಳಿತಕ್ಕೆ ನಮ್ಮ ಸಾಗರ ತಾಲೂಕಿನ ಅರ್ದ ಬಾಗ ಸೇರಿತ್ತು ತಾಲ್ಲೂಕಿನ ಪಶ್ಚಿಮ ಭಾಗದ ಆವಿನಹಳ್ಳಿಯಿಂದ, ತಾಳಗುಪ್ಪದ ಗಮಟೆ ಘಟ್ಟದಿಂದ ಅರಬೀ ಸಮುದ್ರದ ತನಕ ರಾಣಿ ಚಿನ್ನ ಬೈರಾದೇವಿ ವ್ಯಾಪ್ತಿಗೆ ಸೇರಲ್ಪಟ್ಟ ಪ್ರದೇಶವಾಗಿತ್ತು.
ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ಒಬ್ಬ ರಾಣಿ. 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು.
ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಸಂಗೀತಪುರ] ಅಥವಾ ಹಾಡುವಳ್ಳಿ/ಹಾಡವಳ್ಳಿ (ಸಂಗೀತಪುರ) ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.
ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಳುಮೆಣಸನ್ನು ಯುರೋಪಿಗೆ ರಫ್ತು ಮಾಡುತ್ತಿದ್ದ ಈಕೆಗೆ ಕರಿಮೆಣಸಿನ/ಕಾಳುಮೆಣಸಿನ ರಾಣಿ ಎಂದೂ ಕರೆಯಲಾಗಿದೆ.
ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಢಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿದ ಈಕೆ 1552-1606 ರ ನಡುವಿನ ಐವತ್ನಾಲ್ಕು ವರ್ಷಗಳ ಕಾಲ ರಾಜ್ಯಭಾರ ನಡೆಸಿದಳು.
ಗೇರುಸೊಪ್ಪೆಯಲ್ಲಿ ಅಲ್ಲಿನ ನಾಡವರು ಮತ್ತು ಖಾರ್ವಿಗಳು "ಅವ್ವರಸಿ" ಎಂದು ಪೂಜಿಸುವ ರಾಣಿ ಚೆನ್ನಭೈರಾದೇವಿಯ ದೇವಸ್ಥಾನವಿದೆ. ಈಕೆಗೆ ಪೋರ್ಚುಗೀಸರು #ರೈನಾ_ದೆ_ಪಿಮೆಂಟಾ" ಎಂಬ ಹೆಸರು ಕೊಟ್ಟಿದ್ದರು.
ಕಳೆದ ಆರು ತಿಂಗಳಿಂದ ಚೆನ್ನಬೈರಾದೇವಿ ಇತಿಹಾಸದ ಕುರುಹು ಹುಡುಕುತ್ತಾ ಅಲ್ಲಿಗೆ ತಲುಪಿ ಅಲ್ಲಿನ ಅಳಿದುಳಿದ ಕುರುಹುಗಳ ಎದರು ಚೆನ್ನಬೈರಾದೇವಿ ವಂಶ -ಆಡಳಿತು- ಇತಿಹಾಸ ನಮಗೆ ತೋರಿಸುವ ಮೂಲಕ ಜನಮಾನಸದಲ್ಲಿ ಮರೆತೇ ಹೋಗಿದ್ದ ಹಾಗೂ ಅಸ್ಪಷ್ಟ ಮಾಹಿತಿಗಳು ಹೊಸ ಹೊಳಪಿನಿಂದ ನಮ್ಮ ಎದುರು ತೆರೆದುಕೊಳ್ಳುವಂತೆ ಮಾಡಿದ್ದಾರೆ #ಆಕರ್ಷ_ನಂದಿನಿ ದಂಪತಿಗಳು.
ಇವರ ಮಾಧ್ಯಮದ ಮೂಲಕ #ನರಹಂತಕ_ವೀರಪ್ಪನ್ #ಸಂಗೊಳ್ಳಿ_ರಾಯಣ್ಣ #ಕನಕದಾಸ #ಸರ್ವಜ್ಞ #ಉತ್ತರಕರ್ನಾಟಕದ_ವಾಡೆಗಳು ತುಂಬಾ ಪ್ರಸಿದ್ದಿ ಪಡೆದಿದೆ.
ಈಗ ಶಿವಮೊಗ್ಗ ಜಿಲ್ಲೆಯಲ್ಲಿರುವ .... #ತಾಳಗುಂದದ_ಮೊದಲ_ಕನ್ನಡ_ಶಾಸನ #ಬಳ್ಳಿಗಾವೆ #ಅಲ್ಲಮಪ್ರಭು #ಈಸೂರು_ಹೋರಾಟ #ಖಂಡೋಬರಾವ್_ಮ್ಯೂಸಿಯಂ #ಸಿಂಹದಾಮ #ಸಕ್ರೆಬೈಲು_ಆನೆ_ಕ್ಯಾಂಪ್ #ನೀನಾಸಂ #ಗೇರುಸೊಪೈಯ_ಚೆನ್ನಬೈರಾದೇವಿ #ಕೆಳದಿ_ಅರಸರು #ಕವಿಶೈಲ.... ಹೀಗೆ ಶಿವಮೊಗ್ಗ ಜಿಲ್ಲೆಯ ನಮಗೇ ಗೊತ್ತಿಲ್ಲದ ನಮ್ಮ ಜಿಲ್ಲೆಯ ಇತಿಹಾಸ ದಾಖಲಿಸುತ್ತಿದ್ದಾರೆ.
ಜಿಲ್ಲೆಯ ಇತಿಹಾಸ ಆಸಕ್ತರು, ಶಿಕ್ಷಕರುಗಳು ಇವುಗಳನ್ನು ತಪ್ಪದೇ ನೋಡಬೇಕು ಮತ್ತು ಇದನ್ನು ತಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಶೇರ್ ಮಾಡಿ ನಮ್ಮ ಜಿಲ್ಲೆಯ ಇತಿಹಾಸ ಮುಂದಿನ ತಲೆಮಾರಿಗೆ ಹಂಚಬೇಕೆಂದು ವಿನಂತಿಸುತ್ತೇನೆ.
Comments
Post a Comment