Skip to main content

Posts

Showing posts with the label HOSANAGARA TALUK inaugurated by me.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾದಾಪುರದಲ್ಲಿ ಪ್ರತಿ ಮನೆಯಲ್ಲಿ ಕಲಾವಿದರಿದ್ದಾರೆ, 1995-96 ರಲ್ಲಿ ಶ್ರೀ ಶನಿ ಪರಮೇಶ್ವರ ಯುವಕ ಸಂಘ ಉದ್ಘಾಟನೆ ಆಗಿ 26 ವರ್ಷದಿಂದ ಕ್ರಿಯಾಶೀಲವಾಗಿದೆ

#ಇಪ್ಪಾತ್ತಾರು_ವರ್ಷದ_ಹಿಂದೆ_ಉದ್ಘಾಟನೆಗೊಂಡ_ಯುವಕ_ಸಂಘ. #ಈಗಲೂ_ಕ್ರಿಯಾಶೀಲ_ಆಗಿರುವುದು_ಶ್ಲಾಘನೀಯ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಮಾದಾಪುರದ_ಪ್ರತಿ_ಮನೆಯಲ್ಲೂ_ಕಲಾವಿದರಿದ್ದಾರೆ.       ಪ್ರಶಸ್ತಿ ವಿಜೇತ ಶಿಕ್ಷಕ, ಖ್ಯಾತ ಜನಪದ ಕಲಾವಿದ, ಕವಿ, ಡೊಳ್ಳು ಕಲಾವಿದ, ರಂಗಭೂಮಿ ಕಲಾವಿದ, ಹಾಡುಗಾರ, ತಬಲ ಹಾರ್ಮೋನಿಯಂ ನುಡಿಸುವ ಸಕಲ ಕಲಾ ವಲ್ಲಭರೇ ಆದ ಕಿರಿಯ ಮಿತ್ರ ರೇವಣ್ಣ ಮಾಸ್ತರ್  ಅವರ ಊರಾದ ಸಣ್ಣ ಹಳ್ಳಿಯಲ್ಲಿ ಮಾದಾಪುರದಲ್ಲಿ ಇದೇ ತಿಂಗಳ 11ನೇ ತಾರೀಖು ಸೋಮವಾರ ತಾಲ್ಲೂಕು ಕೇಂದ್ರದಲ್ಲಿ ನಡೆಸುವಂತ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಆಹ್ವಾನ ಪತ್ರಿಕೆ ನೀಡಿದ್ದಾರೆ.   ಆಹ್ವಾನ ಪತ್ರಿಕೆ ವಿಶೇಷ ವರ್ಣರಂಜಿತವಾದ ಆಹ್ವಾನ ಪತ್ರಿಕೆ ಆಗಿದೆ.   ಸಾದಕರಿಗೆ ಸನ್ಮಾನ, ಕವನ ಸಂಕಲನ ಬಿಡುಗಡೆ, ಸಂಗ್ಯಾ ಬಾಳ್ಯ ಎಂಬ ನಾಟಕ ಮತ್ತು ಬರಲಿರುವ ವಿಶೇಷ ಅತಿಥಿಗಳಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮ ಪಂಚಾಯತನ ಮಾದಾಪುರ ಕಂಗೊಳಿಸಲಿದೆ.   1995-96 ರಲ್ಲಿ ಈ ಊರಿನ ಶ್ರೀ ಶನಿ ಪರಮೇಶ್ವರ ಯುವಕ ಸಂಘ ಪಕ್ಕದ ಸಾಗರ ತಾಲೂಕಿನ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನನ್ನಿಂದ  ಉದ್ಘಾಟನೆ ಮಾಡಿಸಿದ್ದರು.   ಸುಮಾರು 26 ವರ್ಷ ಕಾಲ ದೇಶ ವಿದೇಶಗಳಲ್ಲಿ ಈ ಸಂಘ ಅನೇಕ ಕಾಯಕ್ರಮ ನಡೆಸಿದೆ.   ಈ ಹಳ್...