Skip to main content

Posts

Showing posts with the label Let us fallow easy HEALTH SHIELD OF OUR FAMILY

ನಾವು ಜನ ಸಾಮಾನ್ಯರು ನಮ್ಮ ಕುಟುಂಬದ ಸುರಕ್ಷೆ ನಮ್ಮದೇ ಜವಾಬ್ದಾರಿ, ಕೊರಾನ ಎರಡನೆ ಅಲೆ ಎದುರಿಸಲು ಇಲ್ಲಿದೆ ಆರೋಗ್ಯ ಕವಚದ ಉಪಾಯ

#ನಾವು_ಜನಸಾಮಾನ್ಯರು_ನಮ್ಮ_ಕೈ_ನಮ್ಮ_ತಲೆಮೇಲೆ #ನಮಗೆ_ನಾವೇ_ರೋಗಮುಕ್ತ_ಉಪಾಯಗಳು_ಪಾಲಿಸೋಣ #ಸಕಾ೯ರ_ರಾಜಕೀಯ_ಪಕ್ಷ_ಎಲ್ಲಾ_ಚಿಂತಿಸಬೇಡಿ.   ಕಳೆದ ವರ್ಷ ಕೊರಾನಾ ಮೊದಲ ಅಲೆ ಇಷ್ಟು ಕತರ್ ನಾಕ್ ಆಗಿರಲಿಲ್ಲ ಆದರೆ ಸರ್ಕಾರ ಮತ್ತು ಜನತೆ ಹೆಚ್ಚು ಜಾಗೃತಿ ವಹಿಸಿದೆವು ಆಗ ಸ್ಯಾನಿಟೈಸರ್, ಮಾಸ್ಕಗಳು ತುಂಬಾ ಕೊರತೆ ಇತ್ತು. ಆದರೂ ನಾವೆಲ್ಲ ಗೆದ್ದೆವು.   ಈ ವರ್ಷದ ಕೊರಾನಾ ಎರಡನೆ ಅಲೆ ಅತ್ಯಂತ ಅಪಾಯಕಾರಿ ಈಗಾಗಲೇ ರೋಗ ಪೀಡಿತರಿಗೆ ದೇಶದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಜಾಗ ಖಾಲಿ ಇಲ್ಲ. ಆದರೆ ವ್ಯಾಕ್ಸಿನ್ ಬಂದಿದೆ, ಮಾಸ್ಕ ಮತ್ತು ಸ್ಯಾನಿಟೈಸರ್ ಗೆ ಕೊರತೆ ಇಲ್ಲ.   ಜೀವ ಕಳೆದುಕೊಂಡವರ ಅಂತ್ಯಕ್ರೀಯೆ ಮಾಡಲೂ ಸ್ಮಶಾನದಲ್ಲಿ ಸರತಿ ಸಾಲುಗಳಿದೆ ಎರಡರಿಂದ ಮೂರು ದಿನ ಅಂತ್ಯಸಂಸ್ಕಾರಕ್ಕೆ ಕಾಯಬೇಕಾಗಿದೆ.   ಹಣ, ಅಧಿಕಾರ ಮತ್ತು ಪ್ರಭಾವ ಇದ್ದರೂ ಬದುಕಲು ಸಾಧ್ಯವಿಲ್ಲ ಅಂತ ಸಾವು ನೋವಿನ ಸುದ್ದಿ ಕೇಳುತ್ತಲೇ ಇದೆ.     ಈ ಸಂದಭ೯ದಲ್ಲಿ ನಾವು ಈ ಸಕಾ೯ರಗಳನ್ನು ಅವುಗಳ ನಡೆಸುವ ಪಕ್ಷಗಳನ್ನು ಅವುಗಳ ಕ್ರೀಯಾಶೀಲತೆ ಅಥವ ಕರ್ತವ್ಯ ಲೋಪ ವಿಮರ್ಶೆ ಮಾಡುತ್ತಲೋ, ವ್ಯಾಕ್ಸಿನ್ ಬಗ್ಗೆ ಯೋಚಿಸುತ್ತಾ ಕುಳಿತು ಕೊಳ್ಳದೆ ನಮ್ಮ ಕುಟುಂಬದ ಆರೋಗ್ಯ ಕವಚ ನಿರ್ಮಿಸಿಕೊಂಡು ಬದುಕುವ ಬಗ್ಗೆ ಹೆಚ್ಚು ಯೋಚಿಸಬೇಕು.   #ನಮ್ಮ_ಕುಟುಂಬದ_ಆರೋಗ್ಯ_ಕವಚ   1. ತಕ್ಷಣದಿಂದ ನಿಮ್ಮ ನಿಮ್ಮ ಮನೆಯ ಗೇಟಿಗೆ ...