#ಬಡವರ_ನಿತ್ಯ_ಅನ್ನದ_ಬಟ್ಟಲ_ಹೋರಾಟ #ಸಮಾಜಕ್ಕೆ_ಇಂತವರು_ಮಾದರಿ #ಬೀಗಗಳ_ಮಾರಾಟದ_ಶಿವಮೊಗ್ಗ_ಕಲಂದರ್_ಸಾಹೇಬರು #ಬೀಗದ_ವ್ಯಾಪಾರದಿಂದ_ಮಗನನ್ನು_ಇಂಜಿನಿಯರ್_ಮಾಡಿಸಿದ್ದಾರೆ #ಪಡಿತರ_ಅಕ್ಕಿ_ಊಟಕ್ಕೆ. #ಬಗರ್_ಹುಕುಂ_ಜಮೀನಿನಲ್ಲಿ_ಜೋಳ_ಬಿತ್ತಿ_ಹಣ_ಕಳೆದು_ಕೊಂಡಿದ್ದಾರೆ. #ಈ_ಪ್ರದೇಶದ_ಜನಪರ_ಶಾಸಕಿ_ಶಾರದಾಪೂರ್ಯನಾಯಕರು_ಸಹಾಯ_ಮಾಡಬೇಕು. #ಬರಪೀಡಿತ_ಜಿಲ್ಲೆ_ಘೋಷಣೆ_ಆದರೆ_ಲಾಭ_ಯಾರಿಗೆ? #ಬಯಲು_ಸೀಮೆ_ವ್ಯಾಪ್ತಿ_ಮಲೆನಾಡಿನ_ಅಂಚು_ದಾಟಿ_ದಾಪುಗಾಲು_ಹಾಕುತ್ತಿದೆ. https://youtu.be/Et-1a46HrAk?feature=shared ನಮ್ಮ ಸಂಸ್ಥೆಯಲ್ಲಿ 61 ಬೀಗಗಳು ಇವೆ ಇದನ್ನು ಖರೀದಿಸಿದ್ದು ಈ ಖಲಂದರ್ ಸಾಹೇಬರಿಂದ ಬೀಗಗಳು ಮಳೆ ಗಾಳಿಗೆ ಹೊರಗಿರುವುದು ಬೇಗ ಹಾಳಾಗುತ್ತದೆ ಆದ್ದರಿಂದ ಪ್ರತಿ ವರ್ಷ ಹೊಸ ಬೀಗ ಖರೀದಿಸಲೇ ಬೇಕು ಸ್ಟೇರ್ ಆಗಿಯೂ ಕೆಲ ಬೀಗ ದಾಸ್ತಾನಿನಲ್ಲಿ ಇರಲೇ ಬೇಕು. ಮೊನ್ನೆ ಖಲಂದರ್ ಸಾಹೇಬರು ಬಂದಾಗ ದೊಡ್ಡ 5 ಬೀಗ ಮತ್ತು ಚಿಕ್ಕದಾದ 10 ಬೀಗ ಖರೀದಿಸಿದೆ ರೂ 980 ಆಯಿತು ಅವರಿಗೆ ಚಹಾ ಕುಡಿಸಿ ಒಂದು ಸಾವಿರ ನೀಡಿದೆ. ಹೀಗೆ ಅವರ ಜೊತೆ ಮಾತಾಡಿದಾಗ ಅವರ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಜೋಳ ಬಿತ್ತಿದ್ದು ಎರೆಡು ತಿಂಗಳ ಮುಂಗಾರು ಮಳೆ ಇಲ್ಲದೆ ಪೂರ ನಲವತ್ತು ಸಾವಿರ ಕಳೆದುಕೊಂಡ ದುಃಖ ಹಂಚಿಕೊಂಡರು. ಸಾಗರ ತಾಲ್ಲೂಕು ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಬಂದಿರುವ ಮಳೆ ಅದರ ಅಂ...