#ಬಡವರ_ನಿತ್ಯ_ಅನ್ನದ_ಬಟ್ಟಲ_ಹೋರಾಟ
#ಸಮಾಜಕ್ಕೆ_ಇಂತವರು_ಮಾದರಿ
#ಬೀಗಗಳ_ಮಾರಾಟದ_ಶಿವಮೊಗ್ಗ_ಕಲಂದರ್_ಸಾಹೇಬರು
#ಬೀಗದ_ವ್ಯಾಪಾರದಿಂದ_ಮಗನನ್ನು_ಇಂಜಿನಿಯರ್_ಮಾಡಿಸಿದ್ದಾರೆ
#ಪಡಿತರ_ಅಕ್ಕಿ_ಊಟಕ್ಕೆ.
#ಬಗರ್_ಹುಕುಂ_ಜಮೀನಿನಲ್ಲಿ_ಜೋಳ_ಬಿತ್ತಿ_ಹಣ_ಕಳೆದು_ಕೊಂಡಿದ್ದಾರೆ.
#ಈ_ಪ್ರದೇಶದ_ಜನಪರ_ಶಾಸಕಿ_ಶಾರದಾಪೂರ್ಯನಾಯಕರು_ಸಹಾಯ_ಮಾಡಬೇಕು.
#ಬರಪೀಡಿತ_ಜಿಲ್ಲೆ_ಘೋಷಣೆ_ಆದರೆ_ಲಾಭ_ಯಾರಿಗೆ?
#ಬಯಲು_ಸೀಮೆ_ವ್ಯಾಪ್ತಿ_ಮಲೆನಾಡಿನ_ಅಂಚು_ದಾಟಿ_ದಾಪುಗಾಲು_ಹಾಕುತ್ತಿದೆ.
https://youtu.be/Et-1a46HrAk?feature=shared
ನಮ್ಮ ಸಂಸ್ಥೆಯಲ್ಲಿ 61 ಬೀಗಗಳು ಇವೆ ಇದನ್ನು ಖರೀದಿಸಿದ್ದು ಈ ಖಲಂದರ್ ಸಾಹೇಬರಿಂದ ಬೀಗಗಳು ಮಳೆ ಗಾಳಿಗೆ ಹೊರಗಿರುವುದು ಬೇಗ ಹಾಳಾಗುತ್ತದೆ ಆದ್ದರಿಂದ ಪ್ರತಿ ವರ್ಷ ಹೊಸ ಬೀಗ ಖರೀದಿಸಲೇ ಬೇಕು ಸ್ಟೇರ್ ಆಗಿಯೂ ಕೆಲ ಬೀಗ ದಾಸ್ತಾನಿನಲ್ಲಿ ಇರಲೇ ಬೇಕು.
ಮೊನ್ನೆ ಖಲಂದರ್ ಸಾಹೇಬರು ಬಂದಾಗ ದೊಡ್ಡ 5 ಬೀಗ ಮತ್ತು ಚಿಕ್ಕದಾದ 10 ಬೀಗ ಖರೀದಿಸಿದೆ ರೂ 980 ಆಯಿತು ಅವರಿಗೆ ಚಹಾ ಕುಡಿಸಿ ಒಂದು ಸಾವಿರ ನೀಡಿದೆ.
ಹೀಗೆ ಅವರ ಜೊತೆ ಮಾತಾಡಿದಾಗ ಅವರ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಜೋಳ ಬಿತ್ತಿದ್ದು ಎರೆಡು ತಿಂಗಳ ಮುಂಗಾರು ಮಳೆ ಇಲ್ಲದೆ ಪೂರ ನಲವತ್ತು ಸಾವಿರ ಕಳೆದುಕೊಂಡ ದುಃಖ ಹಂಚಿಕೊಂಡರು.
ಸಾಗರ ತಾಲ್ಲೂಕು ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಬಂದಿರುವ ಮಳೆ ಅದರ ಅಂಚಿನ ಶಿವಮೊಗ್ಗ ತಾಲ್ಲೂಕಿನಲ್ಲಿ ಬಂದಿಲ್ಲ ಈ ತಾಲ್ಲೂಕು ಒಂದು ತರ ಬಯಲು ಸೀಮೆ ಅಗುತ್ತಿದೆ ಕೆಲ ವರ್ಷಗಳ ನಂತರ ನಮ್ಮ ತಾಲ್ಲೂಕುಗಳು ಬಯಲು ಸೀಮೆ ಆಗದೆ ಉಳಿಯಲಾರದು.
ಬೀಗ ವ್ಯಾಪಾರದ ಖಲಂದರ್ ಸಾಹೇಬರು ನಿತ್ಯ 50 ರಿಂದ 100 ಕಿ.ಮಿ. ಬೀಗ ವ್ಯಾಪಾರಕ್ಕಾಗಿ ಅನೇಕ ಊರು ಹಳ್ಳಿ ತಿರುಗುತ್ತಾರೆ ನೂರಾರು ಜನರ ಸಂಪರ್ಕ ಇದೆ ಇದು ಇವರಿಗೆ ದೊಡ್ಡ ಪ್ರಪಂಚ ಜ್ಞಾನ ನೀಡಿದೆ.
ದೊಡ್ಡ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಲು ಕೊರಾನಾ ಪ್ರಾರಂಭ ಆಗಿತ್ತು ಕೆಲಸ ಸಿಗುವುದು ಕಷ್ಟ ಆಗಿತ್ತು ಈಗ ದೂರದ ಗುಜರಾತಿನಲ್ಲಿ ಕಂಪನಿ ಒಂದರಲ್ಲಿ ಉದ್ಯೋಗ
ಮಾಡುತ್ತಿದ್ದಾರೆ "ಸಂಬಳ ಕಡಿಮೆ ಆದರೆ ಕೆಲ ವರ್ಷ ಅನುಭವ ಪಡೆದರೆ ಸಂಬಳ ಜಾಸ್ತಿ ಆಗುತ್ತೆ" ಅಂತ ಖಲಂದರ್ ಸಾಹೇಬರೇ ತಮಗೆ ತಾವೇ ಸಮಾದಾನ ಹೇಳಿ ಕೊಳ್ಳುತ್ತಾರೆ.
ಮಗಳು ಬಿಎಸ್ಪಿ ಅಂತಿಮ ವರ್ಷದಲ್ಲಿ ಮಗ ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ ಅವರು ನಿತ್ಯ ಖಾಸಾಗಿ ಬಸ್ಸಿನಲ್ಲಿ ಚಿನ್ಮನೆಯಿಂದ ಆಯನೂರು ತಲುಪಿ ಅಲ್ಲಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿ ಶಿವಮೊಗ್ಗ ಕಾಲೇಜಿಗೆ ಹೋಗಬೇಕು ಇದೆಲ್ಲ ತಮ್ಮ ವ್ಯಾಪಾರದಿಂದ ಬರುವ ಆದಾಯದಲ್ಲಿ ಮನೆಯ ನಿತ್ಯ ನಿರ್ವಹಣೆ ಜೊತೆ ಸ೦ಭಾಲಿಸಬೇಕು ಒಂದು ರೀತಿ ತಂತಿ ಮೇಲೆ ಬ್ಯಾಲನ್ಸ್ ಮಾಡಿ ನಡೆದಂತೆ.
ಈಗ ಮಗನ ಆದಾಯ ಸ್ವಲ್ಪ ಮಟ್ಟಿಗೆ ಖಲಂದರ್ ಸಾಹೇಬರಿಗೆ ಜೀವನದಲ್ಲಿ ಆದಾರವಾಗಿದೆ ಇವರ ಸ್ವಂತದ್ದಾದ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಕಳೆದ ವರ್ಷ ಖರ್ಚು ಕಳೆದು ಸುಮಾರು 30 ಸಾವಿರ ಜೋಳದ ಬೆಳೆಯಲ್ಲಿ ಆದಾಯ ಪಡೆದಿದ್ದರು ಅದೇ ಉತ್ಸಾಹಲ್ಲಿ ಸುಮಾರು ನಲವತ್ತು ಸಾವಿರ ವಿನಿಯೋಗಿಸಿ ಜೋಳ ಬಿತ್ತಿ ಕೃಷಿ ಮಾಡಿದ್ದರು ಆದರೆ ಕಳೆದ ಎರೆಡು ತಿಂಗಳು ಮಳೆ ಇಲ್ಲದೆ ಬೆಳೆ ಸುಟ್ಟು ಹೋಗಿದೆ ಖರ್ಚು ಮಾಡಿದ 40 ಸಾವಿರ ಕೂಡ ಇದು ಬಡವರ ಕೂಳಿನ ಹೋರಾಟವೂ ಹೌದು.
ಶ್ರೀಮಂತ ಎಂದರೆ ಯಾರು? ಹಣ ಮಾತ್ರ ಇರುವವರಾ? ನೆಮ್ಮದಿ ಆರೋಗ್ಯ ಸಂಸ್ಕಾರ ಇರುವವರಾ?.
ಇವರ ಜಮೀನು ಅರಣ್ಯ ಭೂಮಿ ಅಂತ ಬಗರ್ ಹುಕುಂ ಹಕ್ಕು ಪತ್ರ ದೊರೆತಿಲ್ಲ ಇನ್ನು ಬರಪೀಡಿತ ಪ್ರದೇಶ ಘೋಷಣೆ ಆದರೂ ಇವರಿಗೆ ಪರಿಹಾರ ಸಿಗಲಾರದು ಅಷ್ಟಕ್ಕೂ ಬರ ಪರಿಹಾರ ಖುಷ್ಕಿ ಜಮೀನಿಗೆ ಎಕರೆಗೆ ಆರು ಸಾವಿರ ಮಾತ್ರ ಅದು ರೈತನಿಗೆ ಸಿಗಲು ಮದ್ಯವರ್ತಿಗಳ ಪಾಲಿನ ಹಣ ಪೀಕಬೇಕು.
ತಿಂಗಳಿಗೆ 25 ಕೇಜಿ ಪಡಿತರ ಅಕ್ಕಿ ಈ ಕುಟುಂಬಕ್ಕೆ ಆಸರೆ ಆಗಿದೆ, ಸಿದ್ದರಾಮಯ್ಯರ ಸರ್ಕಾರದ ಬಾಗ್ಯಲಕ್ಷ್ಮೀ ಯೋಜನೆ ಯ ಎರೆಡು ಸಾವಿರ ಸಿಕ್ಕರೆ ಇವರ ಕುಟುಂಬಕ್ಕೆ ದೊಡ್ಡ ಆಸರೆ ಆಗಲಿದೆ.
ಕೆಲವು ವರ್ಷಗಳಲ್ಲಿ ಎಲ್ಲಾ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಕಂಡುಕೊಂಡು ಅವರ ಕಾಲ ಮೇಲೆ ನಿಂತರೆ ತಮ್ಮಷ್ಟು ಸುಖಿ ಯಾರಿಲ್ಲ ಎಂಬ ಆಶಾ ಭಾವನೆಯ ಕನಸುಗಳು ಅವರ ಕಣ್ಣಿನಲ್ಲಿದೆ.
ದೇವರು ಈ ಕುಟುಂಬಕ್ಕೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಿ ಎಂದು ಹಾರೈಸುತ್ತೇನೆ.
ಸಣ್ಣ ಬೀಗದ ವ್ಯಾಪಾರದಿಂದ ಕುಟುಂಬ ಸಲುಹುತ್ತಾ ಮಕ್ಕಳನ್ನು ವಿದ್ಯಾವಂತರಾಗಿಸಿ ಅವರ ಭವಿಷ್ಯ ಉಜ್ವಲಗೊಳಿಸುತ್ತಿರುವ ಖಲಂದರ್ ಸಾಹೇಬರು ಸಮಾಜಕ್ಕೆ ಮಾದರಿ ಆಗಿದ್ದಾರೆ ಈ ಪ್ರದೇಶದ ಶಾಸಕಿ ಆಗಿರುವ ಶ್ರೀಮತಿ ಶಾರದಾ ಪೂರ್ಯಾ ನಾಯಕರು ಇವರಿಗೆ ಸಹಾಯ ಮಾಡಬಹುದಾ?.
Comments
Post a Comment