#ಶಿವಮೊಗ್ಗ_ಜಿಲ್ಲೆಯಲ್ಲಿ_ಹೋಟೆಲಗಳಿಗೆ_ತಂದೂರಿ_ಒಲೆ_ತಯಾರಿಸಿ_ಕೊಡುವ_ಎಕ್ಸಪರ್ಟ್.
#ಹಾರನಳ್ಳಿಯ_ತಿಪ್ಪೇಶಪ್ಪ_ಕುಂಬಾರರು.
#ಕಳೆದ_ಹನ್ನೆರುಡು_ವಷ೯ದಿಂದ_ನಾವು_ಇವರ_ಗ್ರಾಹಕರು
#ಸಂಪ್ರದಾಯಿಕ_ಕುಂಬಾರಿಕೆಯಿಂದ_ಆಧುನಿಕತೆಗೆ_ಬದಲಾದ_ಕುಂಬಾರಿಕೆ
#ಒಂದು_ಕಾಲದಲ್ಲಿ_ಹಾರನಳ್ಳಿಯ_ಕುಂಬಾರರು_ತಯಾರಿಸುತ್ತಿದ್ದ_ಗುಡಾಣಗಳು_ಪ್ರಸಿದ್ದಿ_ಪಡೆದಿತ್ತು.
ನಾನು ಹೋಟೆಲ್ ವೃತ್ತಿಗೆ ಬಂದ ನಂತರ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರ ತಂದೂರಿ ಭಟ್ಟಿಗೆ ಗಿರಾಕಿ ಆಗಿದ್ದೇನೆ, ಒಂದು ಕಾಲದಲ್ಲಿ ಈ ಹಾರನಳ್ಳಿಯ ಬೃಹತ್ ಗಾತ್ರದ ಮಣ್ಣಿನ ಗುಡಾಣಗಳ ತಯಾರಿಗೆ ಪ್ರಸಿದ್ಧಿ ಪಡೆದಿತ್ತು.
ಇವರು ತಯಾರಿಸಿದ ಮಣ್ಣಿನ ದೊಡ್ಡ ದೊಡ್ಡ ಗುಡಾಣಗಳನ್ನು ಮುಸ್ಲಿಂ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು ಆಗ ಹಣದ ಚಲಾವಣೆ ಕಡಿಮೆ ರೈತರು ಬೆಳೆದ ಬತ್ತ - ರಾಗಿ- ಅಡಿಕೆಗೆ ಕೈ ಬದಲಾಗುತ್ತಿತ್ತು.
ಈ ಗುಡಾಡಗಳಲ್ಲಿ ರೈತರು ಬೆಳೆದ ಕಾಳು ಕಡಿ ಸಂಗ್ರಹಿಸಿಟ್ಟರೆ ಅದು ಹಾಳಾಗುವುದಿಲ್ಲ.
ಕಾಲ ಬದಲಾದಂತೆ ಎಲ್ಲವೂ ಬದಲಾಯಿತು ಸಂಪ್ರದಾಯಿಕ ಕುಂಬಾರಿಕೆಗೆ ಬೇಡಿಕೆ ಕಡಿಮೆ ಆಗಿದೆ.
ಬಸವಣ್ಣರ ಕಾಲದಲ್ಲಿನ ಈ ಹಾರನಳ್ಳಿ ಕುಂಬಾರರು ಲಿಂಗಾಯಿತರು ಈಗ ತಮ್ಮ ಶತಮಾನಗಳ ವಂಶಪಾರಂಪರ್ಯವಾಗಿ ಬಂದ ಕು೦ಬಾರಿಕೆ ತೊರೆದಿದ್ದಾರೆ.
ಕುಂಬಾರಿಕೆ ವೃತ್ತಿ ಆದುನಿಕ ಕಾಲದ ಅಲ್ಯೂಮಿನಿಯಂ, ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳಿ೦ದ ನಶಿಸಿ ಹೋಗಿದೆ ಇದರಿಂದ ಕುಂಬಾರಿಕೆಯನ್ನ ತಲ ತಲಾoತರದಿಂದ ಮಾಡಿಕೊಂಡು ಬಂದ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರರು ಆ ಕುಟುಂಬದ ವೃತ್ತಿಯ ಕೊನೆಯವರು ಏಕೆಂದರೆ ಇವರ ಮಕ್ಕಳು ಇಂಜಿನಿಯರಿಂಗ್ ಓದುತ್ತಿದ್ದಾರೆ.
ಒಂದು ದಶಕದ ಹಿಂದೆ ನೀರಿನ ಬಾನಿ ಇತ್ಯಾದಿ ತಯಾರಿಸುತ್ತಿದ್ದ ಇವರ ಕುಟುಂಬ ಖರೀದಿದಾರರಿಲ್ಲದೆ ಕಷ್ಟ ಪಡಬೇಕಾದಾಗ ಇವರು ಹೋಟೆಲ್ ಗಳಿಗೆ ಅವಶ್ಯವಿರುವ ತಂದೂರಿ ರೊಟ್ಟಿ ಮಾಡುವ ತಂದೂರಿ ಒಲೆ ತಯಾರಿಸಲು ಪ್ರಾರಂಬಿಸಿದರಂತೆ ಈಗ ಇವರ ತಂದೂರಿ ಒಲೆ ಶಿವಮೊಗ್ಗ, ಹಾಸನ, ದಾವಣಗೆರೆ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೋಟೆಲ್ ಗಳಲ್ಲಿ ಇದೆ.
ತಿಪ್ಪೇಶಪ್ಪ ಕುಂಬಾರರು ಗುಣಮಟ್ಟದ ತಂದೂರಿ ಭಟ್ಟಿ ತಯಾರಿಸುವುದರಿಂದ ಇವರು ತಯಾರಿಸುವ ಭಟ್ಟಿಗೆ ಬಹು ಬೇಡಿಕೆ.
ತಂದೂರಿ ಭಟ್ಟಿ ಉತ್ತಮ ಮಣ್ಣಿನಲ್ಲಿ ತಯಾರಿಸಿ ಇವರೇ ತಂದು ಒಲೆ ಕಟ್ಟಿ ಅಳವಡಿಸಿ ಹೋಗುತ್ತಾರೆ.
2012 ರಿಂದ ನಮ್ಮ ರೆಸ್ಟೋರೆಂಟ್ಗಳಿಗೆ ಇವರಿಂದ 4 ತ೦ದೂರಿ ಭಟ್ಟಿ ಖರೀದಿಸಿದ್ದೇನೆ, ನಿನ್ನೆ ಒಂದು ಭಟ್ಟಿ ಒಡೆದು ಹೋಗಿತ್ತು ಫೋನ್ ಮಾಡಿದ್ದೆ ಬೆಳಿಗ್ಗೆ 6ಕ್ಕೆ ಬಂದು ಹೊಸ ಭಟ್ಟಿ ಅಳವಡಿಸಿ ಹೊಸದಾಗಿ ಒಲೆ ಬೆಳಿಗ್ಗೆ 9ರ ಒಳಗೆ ನಿಮಿ೯ಸಿದ ಕೈ ಚಳಕ ಅವರದ್ದು.
ಇವರ ವಿಸಿಟಿಂಗ್ ಕಾಡ್೯ ಕೂಡ ಇಲ್ಲಿದೆ ಅವಶ್ಯವಿದ್ದವರು ಸಂಪಕಿ೯ಸಬಹುದು.
Comments
Post a Comment