#ನನ್ನ_ನಿತ್ಯ_ಉಪಹಾರದ_ತಟ್ಟೆ_ನೋಡಿ.
#ಸ್ಥೂಲಕಾಯ_ನಿವಾರಣೆಗೆ_ಮಿತ_ಆಹಾರ_ಸೇವನೆ
#ನಿತ್ಯ_ವಾಕಿಂಗ್_ನಿರ೦ತರವಾಗಿಡುವಂತೆ_ಮಿತ_ಆಹಾರದ_ಅಭ್ಯಾಸ_ಕೂಡ.
#ನನ್ನ_ಸ್ವಂತ_ಅನುಭವ_ಯಾರಿಗಾದರೂ_ಉಪಯೋಗ_ಆದೀತಾ ....
ಬದುಕಲಿಕ್ಕಾಗಿ ತಿನ್ನುತ್ತೀಯಾ ಅಥವ ತಿನ್ನಲಿಕ್ಕಾಗಿ ಬದುಕಿತ್ತೀಯ ಎಂಬ ಪ್ರಶ್ನೆ ನನಗೆ ನಾನೆ 140 ಕಿಲೋ ದಾಟಿದ ನನ್ನ ದೇಹದ ತೂಕದಿಂದ ತತ್ತರಿಸಿ ಪ್ರಶ್ನೆ ಮಾಡಿಕೊಳ್ಳುವ ಸಂದರ್ಭ 2019 ರಲ್ಲಿ ಬಂದಿತ್ತು ಈ ಪ್ರಶ್ನೆ ಕೋಳಿಯಿಂದ ಮೊಟ್ಟೆಯಾ ಅಥವ ಮೊಟ್ಟೆಯಿಂದ ಕೋಳಿನಾ ಅಂತ ಪ್ರಶ್ನಿಸಿದ ಹಾಗೆ.
ಬಾಲ್ಯದಲ್ಲಿ ಯೌವ್ವನದಲ್ಲಿ ಎಷ್ಟು ತಿಂದರೂ ದೇಹ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ವಯಸ್ಸಿಗೆ ತಕ್ಕ ಹಾಗೆ ನಾವೂ ಕ್ರಿಯಾಶೀಲರಾಗಿರುತ್ತೇವೆ ಆದರೆ 40 ದಾಟಿದಂತೆ ಕ್ರಿಯಾಶೀಲತೆ ಕಡಿಮೆ ಆದಂತೆ ಸೇವಿಸುವ ಹೆಚ್ಚುವರಿ ಆಹಾರವನ್ನು ದೇಹ ಕೊಬ್ಬಾಗಿ ಪರಿವರ್ತಿಸಿ ಸ್ಥೂಲಕಾಯರಾಗಿಸುತ್ತದೆ.
ಸ್ತ್ರೀಯರಲ್ಲಿ ಹಾರ್ಮೋನ್ ವೈಪರಿತ್ಯದಿಂದ ಕಡಿಮೆ ಆಹಾರ ತಿಂದರೂ ಸ್ಥೂಲಕಾಯರಾಗುತ್ತಾರೆ.
ನಾನು ಜೀವನದಲ್ಲಿ ಆ ಸಮಯದಲ್ಲಿ ನಿರಾಸಕ್ತಿ ಹೊಂದಿದ್ದೆ ಪುನಃ ಜೀವನೋತ್ಸವ ಪಡೆದದ್ದು ನನ್ನ ನಿತ್ಯ ಜೀವನ ಶೈಲಿ ಬದಲಾಯಿಸಿಕೊಂಡ ನಂತರವೇ.
ಹತ್ತು ಹೆಜ್ಜೆ ನಡೆಯಲಾರದವನು ಈಗ ದಿನ ಒಂದು ಗಂಟೆ ವಾಕಿಂಗ್ ಸಲೀಸಾಗಿ ಮಾಡುವುದು, ರಾತ್ರಿ ಊಟ ನಿಲ್ಲಿಸಿ ಮುಂದಿನ ಶಿವರಾತ್ರಿಗೆ ನಾಲ್ಕು ವರ್ಷ ಆಗಲಿದೆ ಮತ್ತು ನಿತ್ಯ ಬೆಳಗಿನ ಉಪಹಾರವೂ ತೃಜಿಸಬೇಕೆಂದಿದ್ದೆ ಆದರೆ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನ ಉಪಹಾರದ ರುಚಿ ಪರಿಶೀಲಿಸುವ ನನ್ನ ಕೆಲಸ ತಪ್ಪಿಸುವಂತಿಲ್ಲವಾದ್ದರಿಂದ ನಾನು ಅನಿವಾರ್ಯವಾಗಿ ನನ್ನ ಉಪಹಾರದ ತಟ್ಟೆಯಲ್ಲಿ ಅರ್ಧ ಇಡ್ಲಿ, ಅರ್ದ ವಡಾ, ಬಿಸಿಬೇಳೆ ಬಾತ್, ಪಲಾವ್, ಕೇಸರಿ ಬಾತ್ ಉಪ್ಪಿಟ್ಟು ತಲಾ ಒಂದು ಟೇಬಲ್ ಸ್ಪೂನ್ ಗೆ ನಿಯಂತ್ರಿಸಿ ಎರೆಡು ವರ್ಷ ಆಯಿತು.
ಮಧ್ಯಾಹ್ನ ಊಟ ನನ್ನಿಷ್ಟದಂತೆ ಬೇಕಾದಷ್ಟು ಅಂತ ನಿರ್ಧರಿಸಿದ್ದೆ ಆದರೆ ರಾತ್ರಿ ಊಟ ತ್ಯಜಿಸಿದ್ದರಿಂದ ಬೆಳಗಿನ ಉಪಹಾರ ನಿಯಂತ್ರಿಸಿದ್ದರಿಂದ ಮಧ್ಯಾಹ್ನದ ಊಟ ಹೆಚ್ಚು ಮಾಡಲು ಸಾದ್ಯವಿಲ್ಲ ದೇಹ ಅದಾಗಿಯೇ ಮಿತಿಗೊಳಿಸಿದೆ.
ಇದೆಲ್ಲ ಒಂದೇ ದಿನದಲ್ಲಿ ಅಳವಡಿಸಲು ಸಾಧ್ಯವಿಲ್ಲ 5 ನಿಮಿಷದ ವಾಕಿಂಗ್ ಅನೇಕ ದಿನ ಅಭ್ಯಾಸ ಮಾಡಿ ನಂತರ ಅದೇ ರೀತಿ 10 ನಿಮಿಷ ಅದನ್ನೂ ತಿಂಗಳುಗಟ್ಟಲೆ ಮಾಡಿ ಕ್ರಮೇಣ ಒಂದು ಗಂಟೆ ವಾಕಿಂಗ್ ಗೆ ಬಂದಂತೆ ಈ ಆಹಾರ ಪದ್ದತಿ ನಿಯಂತ್ರಣ ಕೂಡ ಹಂತ ಹಂತವಾಗಿ ತಲುಪಿದ್ದೇನೆ.
ಅನೇಕರು ಮೊದಲ ದಿನವೇ ಒಂದು ಗಂಟೆ ವಾಕಿಂಗ್ ಮಾಡುತ್ತಾರೆ ದಿನ ಪೂರ್ತಿ ಉಪವಾಸ ಮಾಡುತ್ತಾರೆ ಮರುದಿನ ಅವರಿಗೆ ಮನಸ್ಸಿದ್ದರೂ ದೇಹ ಅವರಿಗೆ ಏಳದಂತೆ ಮಲಗಿಸಿ ಬಿಡುತ್ತದೆ ನಂತರ ಸ್ಥೂಲಕಾಯ ನಿವಾರಣೆಯ ಸಂಕಲ್ಪ ಕಳೆದು ಹೋಗುತ್ತದೆ.
ಇದನ್ನು ಒಂದು ತಪಸ್ಸಿನಂತೆ ಅಭ್ಯಾಸ ಮಾಡಿದರೆ ಖಂಡಿತಾ ಸ್ಥೂಲಕಾಯ ನಿವಾರಣೆ ಸಾದ್ಯವಿದೆ ಇದಕ್ಕೆ ನಾನೇ ಉದಾಹರಣೆ 140 ಕಿಲೋದಿಂದ 107 ಕಿಲೋಗೆ 3 ವರ್ಷದಲ್ಲಿ ಇಳಿಸಿದ್ದೇನೆ.
ಯಾವ ಆಹಾರವೂ ತ್ಯಜಿಸದೆ ಇದರಿಂದ ಗೊರಕೆ - ಮದುಮೇಹ - ರಕ್ತದ ಒತ್ತಡ ನನಗೆ ಗೊತ್ತಿಲ್ಲದೆ ನಿಯಂತ್ರಣವಾಗಿದ್ದು ಬೋನಸ್.
Comments
Post a Comment