https://youtube.com/shorts/tvT9DfFTKXQ?feature=shared
#ಹೆಂಗಿದ್ದ_ಹೆಂಗಾದ_ಗೊತ್ತಾ
#ನಮ್ಮ_ಚಿನ್ನಾರಿ_ಮುತ್ತಾ
#ಶಂಭೂರಾಮ
2021ರ ಸೆಪ್ಟೆಂಬರ್ 26 ರಾತ್ರಿ ಬೆಂಗಳೂರಿಂದ ನನ್ನ ಮನೆ ತಲುಪಿದಾಗ ನನ್ನ ಅತ್ಯಾಸೆ ಆಗಿದ್ದ ರಾಟ್ ವೀಲರ್ ಸಾಕುವುದು ಈಡೇರಿತ್ತು,ಇವನಿಗೆ ಒಂದು ತಿಂಗಳು ನಂತರ ಆರು ತಿಂಗಳು ಮಗುವಿನಂತೆ ಆರೈಕೆ ಮಾಡಿದ್ದು ನನ್ನ ಮಗ, ಮದ್ಯ ರಾತ್ರಿ ಕೂಡ ಎದ್ದು ಅವನ ಕೇಜ್ ಕ್ಲೀನ್ ಮಾಡಿ ಒರೆಸಿ ಇವನಿಗೆ ಮಲಗಿಸಬೇಕಿತ್ತು.
ನಂತರದ ದಿನಗಳಲ್ಲಿ ಪ್ರಾಥಮಿಕ ಪಾಠ ಕಲಿಸಲು ತುಂಬಾ ತಾಳ್ಮೆ ಬೇಕು, ಸ್ಲೋ ಪೀಡಿಂಗ್ ತರಬೇತಿ ಆಗಬೇಕು ಹೀಗೆ ಸಾಕು ನಾಯಿಯ ತರಬೇತಿಯ ಮಾರ್ಗದರ್ಶಕವಾದ ವಿಡಿಯೋಗಳು Youtube ನಲ್ಲಿದೆ.
ಪಟ್ಟಣಗಳಲ್ಲಿ ಇದಕ್ಕಾಗಿ ತರಬೇತಿ ನೀಡುವವರೇ ಇದ್ದಾರೆ ಆದರೆ ಹಳ್ಳಿಗಳಲ್ಲಿ ನಾವೇ ತರಬೇತುದಾರರು ಮತ್ತು ನಮಗೆ Youtube ಒಂದೇ ಮಾರ್ಗದರ್ಶಕ.
ಅದರಲ್ಲೂ ರಾಟ್ ವೀಲರ್ ಸಾಕುವ ಬಗ್ಗೆ ಅನೇಕ ರೀತಿಯ ಭಯ ಹುಟ್ಟುವಂತ ಸತ್ಯ ಕಥೆಗಳು ಸಾಮಾಜಿಕ ಜಾಲ ತಾಣದಲ್ಲಿತ್ತು ಅಷ್ಟೇ ಅಲ್ಲ ನಮ್ಮ ಮನೆಗೆ ನಿತ್ಯ ನಂದಿನಿ ಹಾಲು ಹಾಕುವವರು ಅಡಾಪ್ಟ್ ಮಾಡಿಕೊಂಡಿದ್ದ ರಾಟ್ ವೀಲರ್ ಅವರ ಪಕ್ಕದ ಮನೆಯ ಎಮ್ಮೆಕರುವನ್ನೆ ಸಿಗಿದು ಹಾಕಿದ್ದು ಅವರ ಬಾಯಲ್ಲೇ ಕೇಳಿದ್ದೆ.
ರಾಟ್ ವೀಲರ್ ಸಾಕಿದವರ ಮನೆ ಗೆಸ್ಟ್ ಪ್ರೆಂಡ್ಲಿ ಮನೆ ಆಗುವುದಿಲ್ಲ ಎಂಬುದು ಗೊತ್ತಿತ್ತು ಆದರೆ ಯಾರು ಏನಾದರೂ ಹೇಳಲಿ ಈ ತಳಿ ಸಾಕಲೇ ಬೇಕೆಂದು ತೀರ್ಮಾನ ಮಾಡಿ ಆಗಿತ್ತು.
ಇವತ್ತಿಗೆ ಶಂಭೂ ರಾಮನಿಗೆ 30 ತಿಂಗಳು (ಎರೆಡೂವರೆ ವರ್ಷ) ತುಂಬಿದೆ ಮನೆಯವರಲ್ಲಿ ನಮ್ಮವರಲ್ಲೇ ಒಬ್ಬನಾಗಿದ್ದಾನೆ, ಮಗ ನೀಡಿದ ತರಬೇತಿ ಅತ್ಯುತ್ತಮ ಆಗಿದೆ, ಅದರಂತೆ ನಮಗೆ ಯಾವುದೇ ಕಿರಿ ಕಿರಿ - ಹಪಾಹಪಿ - ತುಂಟಾಟಗಳಿಲ್ಲದೆ ಪ್ರೌಡನಾಗಿ ಜೊತೆಗಿದ್ದಾನೆ.
ಮನೆಯವರನ್ನ ಬಿಟ್ಟು ಬೇರೆಯವರು ಅವನಿಗೆ ಆಗಿಬರುವುದಿಲ್ಲ ಅದು ಅವನ ಹುಟ್ಟು ಗುಣ, ಯಾವ ಕ್ಷಣದಲ್ಲೂ ಅಪರಿಚಿತರಿಗೆ ಅಪಾಯ ಎಂದು ವೈದ್ಯರು ಎಚ್ಚರಿಸುವುದರಿಂದ ಮನೆಯ ಗೇಟ್ ಯಾವಾಗಲೂ ಲಾಕ್ ಆಗಿ ಇಡುತ್ತೇನೆ, ನನ್ನ ಬೇಟಿಗೆ ಬಂದವರಿಗೆ ಹೇಗೂ ನನ್ನ ಕಛೇರಿ ಇದ್ದೇ ಇದೆ ಜೊತೆಗೆ ಮನೆಗೆ ಕರೆಯುವುದಿಲ್ಲ ಅನ್ನುವ ಆಪಾದನೆ ಗೆಳೆಯರ ಬಂದುಗಳ ವಲಯದಲ್ಲಿ ಹಿಂದಿನಿಂದ ಪರೋಕ್ಷವಾಗಿ ಪಿಸು ಮಾತೂ ಕೂಡ ನನ್ನ ಪ್ರೀತಿಯ ಶಂಭೂರಾಮನ ಬಳವಳಿ ಆಗಿದೆ.
ಮುಂದಿನ ವರ್ಷ ಶಂಭೂರಾಮನ ಕುಲದ ಗೆಳೆಯ ಅಥವ ಗೆಳತಿ ಶಂಭೂರಮನ ಜೊತೆ ಮಾಡುವ ಯೋಜನೆ ಮಗನದ್ದು.
Comments
Post a Comment