#ಪ್ರಾಥಮಿಕ_ಶಾಲಾ_ಸಹಪಾಠಿ_ಎಡ್ವಿಕ್_ಡಿಕಾಸ್ಟಾ
#ಎಡ್ಡಿ_ಎಂಬ_ಸ೦ಕ್ಷಿಪ್ತ_ನಾಮದಿಂದ_ಜನಪ್ರಿಯ.
#ದೈರ್ಯವಂತ_ಗೆಳೆಯ
#ಸೈಕಲ್_ಅಪಘಾತದಲ್ಲಿ_ಒಂದು_ದೃಷ್ಟಿ_ಕಳೆದುಕೊಂಡ_ನತದೃಷ್ಟ.
#ಒಂದೇ_ಕಣ್ನಿನಲ್ಲಿ_ವಿಷಪೂರಿತ_ಹಾವು_ಹಿಡಿದು_ಕಾಡಿಗೆ_ಬಿಡುತ್ತಾನೆ.
https://youtu.be/NrTliYgFcCw?feature=shared
ಎಡ್ಡಿ ಅಲಿಯಾಸ್ ಎಡ್ವಿಕ್ ಡಿಕಾಸ್ಟಾ ನನ್ನ ಬಾಲ್ಯದ ಗೆಳೆಯ ,ಬಾಲ್ಯದಲ್ಲೇ ಸಾಹಸಿ, ಆಟದಲ್ಲಿ ಮೊದಲಿಗ, ಚಿಕ್ಕಂದಿನಲ್ಲೇ ಎಡ್ಡಿಗೆ ಪ್ರಕೃತಿ ಜೊತೆ ಸಂಬಂದ ಜಾಸ್ತಿ ಜೊತೆಗೆ ದೈಯ೯ವಂತ ಕೂಡ,ಒಬ್ಬಂಟಿಯಾಗಿ ಕೃಷಿ ಜಮೀನಿನ ಕೊಟ್ಟಿಗೆ ಮನೆಯಲ್ಲಿಯೇ ಬಾಲ್ಯದಲ್ಲಿ ವಾಸವಿರುತ್ತಿದ್ದ.
ಇವನ ತಂದೆ ಕೆ.ಪಿ.ಸಿ.ಯಲ್ಲಿ ಮ್ಯಾನೇಜರ್ ಆಗಿ ಜೋಗ್ ಫಾಲ್ಸ್ ಮತ್ತು ಚಕ್ರಾದಲ್ಲಿ ಉದ್ಯೋಗದಲ್ಲಿ ಇದ್ದರು, ಎಲ್ಲಾ ಮಕ್ಕಳು ವಿದ್ಯಾಬ್ಯಾಸದಲ್ಲಿ ತೊಡಗಿದ್ದರಿಂದ ಮನೆಯಿಂದ ದೂರದ ಬಸವನಕೊಪ್ಪದ ಇವರ ಜಮೀನಿನ ಜವಾಬ್ದಾರಿ ಬಾಲಕ ಎಡ್ಡಿ ಸ್ವಯಂ ತೆಗೆದು ಕೊಂಡು 4ನೇ ತರಗತಿಗೆ ಶಾಲೆಗೆ ಟಾಟಾ ಹೇಳಿ ಬಿಟ್ಟಿದ್ದರಿಂದ ಎಡ್ಡಿ ಸಂಪರ್ಕ ಕಡಿಮೆ.
ಮನೆಯಿಂದ ಕೃಷಿ ಜಮೀನಿಗೆ ಸೈಕಲ್ ಮೇಲೆ ವೇಗವಾಗಿ ಹೋಗಿ ಬರುವ ಹವ್ಯಾಸದಲ್ಲಿ ಎಡ್ಡಿ ಕತ್ತಲಲ್ಲಿ ಎದುರಿನಿಂದ ಬಂದ ಸೈಕಲ್ ಗೆ ನೇರವಾಗಿ ಎದುರಾಬದುರಾ ಡಿಕ್ಕಿ ಮಾಡಿಕೊಂಡು ಒಂದು ಕಣ್ಣು ಕಳೆದುಕೊಂಡಿರುವುದು ದುರಂತ.
ಒಂದು ಕಣ್ಣಿನಲ್ಲೇ ಎಡ್ಡಿ ವಿಷ ಪೂರಿತ ಹಾವು ಹಿಡಿದು ಕಾಡಿಗೆ ಬಿಡುವುದು ಕೂಡ ವಿಶೇಷವೇ ಆಗಿದೆ.
ಹೆಚ್ಚಾಗಿ ತನ್ನ ಕೃಷಿ ಜಮೀನಿನ ಗದ್ದೆಮನೆಯಲ್ಲೇ ಒಂಟಿಯಾಗಿ ವಾಸವಿರುತ್ತಿದ್ದ ಎಡ್ಡಿ ಯಾವುದೊ ನಿರಾಸೆಯಿಂದ ವಿಷ ಕುಡಿದು ಬಿಟ್ಟಿದ್ದ ಅಲ್ಲಿ ಯಾರೂ ಇರುತ್ತಿರಲಿಲ್ಲ. ವಿಷದ ಪರಿಣಾಮವಾಗಿ ವಿಪರೀತ ವಾಂತಿ ಮಾಡುತ್ತಾ ನಿತ್ರಾಣವಾಗಿ ಪ್ರಜ್ಞೆ ತಪ್ಪಿದಾಗ ಅದೃಷ್ಟವಶಾತ್ ಅಲ್ಲಿಗೆ ಬಂದಿದ್ದ ಹೊಳೆ ಬಸಣ್ಣ ಎಂಬ ದಲಿತ ಕಲಾವಿದರು ಎಡ್ಡಿಯ ಮನೆಯ ಎತ್ತಿನಗಾಡಿಯಲ್ಲೇ ಎಡ್ಡಿಯನ್ನು ಹಾಕಿಕೊಂಡು ಆನಂದಪುರಂ ಆಸ್ಪತ್ರೆಗೆ ದಾಖಲು ಮಾಡಿದ್ದರು, ಎಡ್ಡಿ ಬದುಕುವುದಿಲ್ಲ ಎಂಬ ಸುದ್ದಿ ಆಗಿತ್ತು ಆದರೆ ಅಚಾನಕ್ ಆಗಿ ಎಡ್ಡಿ ಪುನರ್ಜನ್ಮ ಪಡೆದಿದ್ದ.
ನಮ್ಮ ಊರಿನ ಸಮೀಪದ ಗೇರುಬೀಸಿನಲ್ಲಿ ಎಡ್ಡಿ ತನ್ನ ಸ್ವಂತ ಜಮೀನಲ್ಲಿ ಅಡಿಕೆ ಇತ್ಯಾದಿ ಕೃಷಿ ಮಾಡಿಕೊಂಡು ಸಂಸಾರದ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಈ ಜಮೀನು ನಾನು ರಾಜಕೀಯದಲ್ಲಿದ್ದಾಗ ರಾಜ್ಯದಲ್ಲೇ ಮೊದಲ ಬಗರ್ ಹುಕುಂ ಜಮೀನು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಮಂಜೂರು ಮಾಡಿದ ದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದಾಗ ಎಡ್ಡಿಗೂ ಮೂರುವರೆ ಎಕರೆ ಜಮೀನು ಮಂಜೂರು ಮಾಡಿಸಿದ್ದನ್ನು ಎಡ್ಡಿ ಯಾವಾಗಲೂ ಸ್ಮರಿಸುತ್ತಾನೆ.
ಕರೆಂಟು ನೀರು ದಾರಿ ಇಲ್ಲದ ಈ ಜಮೀನಿನಲ್ಲಿ ಎಡ್ಡಿ ದಂಪತಿಗಳು ಗುಡಿಸಲು ಕಟ್ಟಿಕೊಂಡು ಕಷ್ಟ ಪಟ್ಟು ಜೀವನ ಮಾಡಿದ್ದರು, ಎಲ್ಲಾ ರೀತಿಯ ಪ್ರಯತ್ನಗಳಿಂದ ಈಗ ಈ ಜಮೀನಿನಿಂದ ಉತ್ಪತ್ತಿ ಪಡೆಯುತ್ತಾ ಎಲ್ಲಾ ಸೌಲಭ್ಯ ಪಡೆದಿದ್ದಾರೆ.
ಇಬ್ಬರು ಗಂಡು ಮಕ್ಕಳು ರಬ್ಬರ್ ಶೀಟುಗಳ ಖರೀದಿಸುವ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಏಕೈಕ ಪುತ್ರಿ ಮದುವೆ ಆಗಿ ದಾರವಾಡದಲ್ಲಿ ನೆಲೆಸಿದ್ದಾಳೆ, ಮಗಳ ಹೆರಿಗೆ ಆನಂದಪುರಂ ಆಸ್ಪತ್ರೆಯಲ್ಲಿ ಆಗಿದ್ದರಿಂದ ಎಡ್ಡಿಯ ಅಳಿಯ ಮತ್ತು ಬೀಗತಿ ದಾರವಾಡದಿಂದ ಬಂದಿದ್ದವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರಿಂದ ಬಾಲ್ಯದ ಸಂಗಾತಿ ಪ್ರಾಥಮಿಕ ಶಾಲಾ ಕ್ಲಾಸ್ ಮೇಟ್ ಎಡ್ಡಿ ಪುನರ್ಮಿಲನ ಆಯಿತು.
Comments
Post a Comment