Blog number 1737. ಭಾರತೀಯ ಚಂದ್ರಯಾನ 3 ರ ಸಂದಭ೯ದಲ್ಲಿ 54 ವರ್ಷಗಳ ಹಿಂದೆ ಅಮೇರಿಕಾ ಮೊದಲ ಮಾನವ ಚಂದ್ರನ ಮೇಲೆ ಇಳಿಸಿದ ಬಿಬಿಸಿ ವೀಕ್ಷಕ ವಿವರಣೆ ಕೇಳಿದ ನೆನಪು
#ಮೊದಲ_ಮಾನವ_ಚಂದ್ರ_ಯಾನದ_ರೇಡಿಯೋ_ವೀಕ್ಷಕ_ವಿವರಣೆ_ಕೇಳಿದ_ನೆನಪು
#ಭಾರತದ_ಚಂದ್ರಯಾನ_3ರ_ಯಶಸ್ಸಿನ_ಸಮಯದಲ್ಲಿ
#ಮಾನವ_ಚಂದ್ರನ_ಮೇಲೆ_ಇಳಿದದ್ದು_ನಂಬಲಾರದ_ದಿನಗಳು.
#ಚಂದ್ರನ_ಮೇಲೆ_ಅಮೇರಿಕಾ_ದ್ವಜ_ಸ್ಪಷ್ಟವಾಗಿ_ಕಾಣುವಂತೆ_ಪೋಟೋ_ಎಡಿಟ್_ಮಾಡಿದ್ದರು.
ನಾನು ಹುಟ್ಟಿದ ದಿನಾ೦ಕ 9 ಪೆಬ್ರವರಿ 1965.
ಅವತ್ತು 20 ಜುಲೈ 1969 ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11. ಆದರೆ ಅವತ್ತು ನನ್ನ ವಯಸ್ಸು 4 ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ.
ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮಾನವ ಚಂದ್ರ ಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಮನೆ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ.
ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಕಟಾ೦ಜನದಲ್ಲಿ ( ವಿದ್ಯುತ್ ಸಂಪಕ೯ ಇಲ್ಲದ ಆ ದಿನಗಳಲ್ಲಿ) ನಡು ರಾತ್ರಿ ನಮಗೆ ಅಥ೯ ಆಗದ ಇಂಗ್ಲೀಷ್ ಭಾಷೆಯ BBC ವೀಕ್ಷಕ ವಿವರಣೆ ಕೇಳುತ್ತಾ ನಮ್ಮಣ್ಣ ವಿಜಯೋತ್ಸವದ ಕೇಕೆ ಹಾಕಿ ನಮಗೆಲ್ಲ ಚಂದ್ರನ ಮೇಲೆ ಮನುಷ್ಯ ಇಳಿದ ಅಂದಾಗ ನಂಬಲು ಸಾಧ್ಯವೇ ಆಗಲಿಲ್ಲ.
ಸ್ವಲ್ಪ ಹೊತ್ತಲ್ಲಿ ಬಿದನೂರು ನಗರಕ್ಕೆ ಹೋಗಿದ್ದ ದೇವಗಂಗೆಯ ಯುವ ಪಡೆ ನಮ್ಮ ದೊಡ್ಡಣ್ಣ ಮಂಜುನಾಥರನ್ನ ಬಿಡಲು ಬಂದಿತ್ತು, ಅವರಲ್ಲಿ ಪಕೀರಣ್ಣ, ಜಗ್ಗಣ್ಣ ಮತ್ತು ಚಂದ್ರ ಶೆಟ್ಟರ ನೆನಪಿದೆ ಈಗಿನ ಜ್ಞಾನದಂತೆ ಅವರೆಲ್ಲ ಯುವಕರು ಮಧ್ಯಪಾನ ಮಾಡಿ ಬಂದವರು ಅವರಿಗೆ ನಾವೆಲ್ಲ ಸರಿ ರಾತ್ರಿಯಲ್ಲಿ ಮಲಗದೆ ರೇಡಿಯೋ ಆಲಿಸುವುದು ಅಚ್ಚರಿ ಆಯಿತು.
ನಮ್ಮಣ್ಣ ಚಂದ್ರನ ಮೇಲೆ ನೀಲ್ ಆಮ್೯ ಸ್ಟ್ರಾ೦ಗ್ ಇಳಿದ ಸುದ್ದಿ ಹೇಳಿದ, ಇವತ್ತು ನನಗೆ ನೆನಪಿದೆ ಆ ಯುವ ಪಡೆ ಇದನ್ನ ನಂಬಲೇ ಇಲ್ಲ ಇದಲ್ಲ ಸುಳ್ಳು, ಚಂದ್ರಲೋಕ ಅಂದರೆ ದೇವರ ಲೋಕ ಅಲ್ಲಿ ಮನುಷ್ಯ ಹೋಗಲು ಸಾಧ್ಯವೇ ಇಲ್ಲ ಅಂತ ವಾದಿಸಿದ್ದು!?.
ಅವರೆಲ್ಲ ಅವರ ಮನೆಗೆ ಹೋದ ನಂತರ ಬೆಳಗಾದಾಗ 2ನೇ ವ್ಯಕ್ತಿ ಆಲ್ಡ್ರೀನ್ ಚ೦ದ್ರನ ಮೇಲೆ ಇಳಿದರೆಂದು ನಮಗೆ ಬುದ್ಧಿ ಬಂದ ವಯಸಲ್ಲಿ ಗೊತ್ತಾಯಿತು.
ಸುಮಾರು 54 ವಷ೯ದ ನಂತರ ಭಾರತದ ಚಂದ್ರಯಾನ 3ರ ದಿನ ಇದೆಲ್ಲ ನೆನಪಾಯಿತು.
ಇವತ್ತು ಚಂದ್ರನ ಮೇಲೆ ಗಾಳಿ ಇಲ್ಲ ಅಮೇರಿಕಾ ಧ್ವಜ ಹೇಗೆ ಹಾರುತ್ತಿದೆ ಎಂದು ಚಂದ್ರಯಾನ ಪ್ರಶ್ನೆ ಮಾಡುವವರೂ ಇದ್ದಾರೆ!
(ಧ್ವಜ ಹಾರುವುದಿಲ್ಲ ಅಲ್ಲಿ ನಿವಾ೯ತ ಪ್ರದೇಶ ಎಂದು ಪ್ರಾಥಮಿಕ ಜ್ಞಾನ ಇರುವ ವಿಜ್ನಾನಿಗಳು ಧ್ವಜ ಸ್ಪಷ್ಟವಾಗಿ ಕಾಣಲು ಬೇರೆ ವ್ಯವಸ್ಥೆ ಮಾಡಿದ್ದಾರೆಂದು ಹೇಳುತ್ತಾರೆ)
Comments
Post a Comment