Blog number 1744. ಸ್ಥೂಲ ಕಾಯ ನಿವಾರಣೆಯಲ್ಲಿ ದೇಹದ ಮೆಟಬಾಲಿಸಂ -ಹಾರ್ಮೋನ್ -ಮೆದಳು ಸ್ನಾಯುಗಳ ಬೆಳವಣಿಗೆಗೆ ದೇಹದ ತೂಕ ಸೆಟ್ ಪಾಯಿಂಟ್ ಮಾಡಿ ಬಿಡುತ್ತದೆ ಈ ಹಂತದಲ್ಲಿ ನಿರಾಶರಾಗ ಬೇಕಿಲ್ಲ
#ಶ್ರಾವಣ_ಮಾಸ_ಮುಕ್ತಾಯ
#ಈ_ವರ್ಷ_ಅಧಿಕ_ಶ್ರಾವಣ_ಸೇರಿ_ಎರೆಡು_ತಿಂಗಳು_ಆಚರಣೆ
#ನನ್ನ_ಸ್ಥೂಲ_ಕಾಯ_ನಿವಾರಣೆಯಲ್ಲಿ_ಶ್ರಾವಣ_ಮುಖ್ಯ_ಪಾತ್ರದಲ್ಲಿ
#ಇದರಿಂದ_ತೂಕ_ಇಳಿದಿದ್ದು_ಎಷ್ಟು ?
#ದೇಹದ_ತೂಕ_ಸೆಟ್_ಪಾಯಿಂಟನಿಂದ_ಕೆಳಗೆ_ಇಳಿಯುವುದಿಲ್ಲ_ಯಾಕೆ?
#ಇಲ್ಲಿದೆ_ಅದಕ್ಕೆ_ಉತ್ತರ..
ನಾನು ನನ್ನ ಸ್ಥೂಲಕಾಯ ನಿವಾರಣೆಯಲ್ಲಿ ಧಾರ್ಮಿಕ ಆಚರಣೆಯ ದಿನಗಳನ್ನು ಬಳಸುತ್ತೇನೆ ಕಾರಣ ವರ್ಷದಿಂದ ವರ್ಷಕ್ಕೆ ತುಲನೆ ಮಾಡಲು ಇದು ಉಪಯುಕ್ತ. ಉದಾಹರಣೆ 2024ರ ಶಿವರಾತ್ರಿ ಬಂದರೆ ನಾನು ರಾತ್ರಿ ಊಟ ತ್ಯಜಿಸಿ ನಾಲ್ಕು ವರ್ಷ ಅಂತ ಗೊತ್ತಾಗುತ್ತದೆ.
ಪ್ರತಿ ವರ್ಷ ಶ್ರಾವಣ ಮಾಸ ಪ್ರಾರಂಭವಾದಾಗ ನಾನು ವರ್ಷ ಪೂರ್ತಿ ಸೇವಿಸುವ ಕಾಫಿ-ಟೀ ಕುಡಿಯುವುದಿಲ್ಲ ಇದರಿಂದ ಕಾಫಿ ಟೀ ಚಟವಾಗಿರುವುದು ನಿವಾರಣೆ ಆಗುತ್ತದೆ ಅನೇಕರು ಇದನ್ನು ಧಾರ್ಮಿಕ ಆಚರಣೆ ಭಾಗವಾಗಿ ಮಾಂಸ ಮಧ್ಯಪಾನ ದೂಮಪಾನ ತಂಬಾಕು ಕೂಡ ಈ ಮಾಸದಲ್ಲಿ ತ್ಯಜಿಸುತ್ತಾರೆ ಇದರಿಂದ ದೇಹ ಡಿಟಾಕ್ಸಿಕ್ ಮಾಡಿದಂತೆ ಮತ್ತು ಚಟಗಳ ನಿಯಂತ್ರಣದ ಸಂಯಮ ಸಿದ್ಧಿಸುತ್ತದೆ ಇದು ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.
ಮದ್ಯಪಾನ ಒಂದು ತಿಂಗಳು ಸ್ವಯಂ ಸಂಯಮದಿಂದ ನಿಶೇದ ಮಾಡಿದರೆ ಮನುಷ್ಯನ ದೇಹದ ಲಿವರ್ ಕಿಡ್ನಿ ಸ್ವಯ೦ ದುರಸ್ತಿ ಆಗುವುದು ಸುಳ್ಳಲ್ಲ.
ನನ್ನ ಅಳಿಯ ಮೂರು ವರ್ಷದ ಹಿಂದೆ ತಂದು ಕೊಟ್ಟ weighing machine ನನಗೆ ತುಂಬಾ ಉಪಯೋಗಕ್ಕೆ ಬಂದಿದೆ.
ನಾನು ಈ ವಷ೯ ಜುಲೈ 16 ರಿಂದ ಶ್ರಾವಣ ಮಾಸ ಪ್ರಾರಂಭದಲ್ಲಿ ನನ್ನ ತೂಕ ನೋಡಿದ್ದೆ 108 ಕೇಜಿ ಇತ್ತು (2019 ರಲ್ಲಿ 140 ಕೇಜಿ ದಾಟಿತ್ತು) ಇವತ್ತು ಬೆಳಿಗ್ಗೆ ಸುಮಾರು 60 ದಿನದ ನಂತರ ತೂಕ 107 ಕೇಜಿ 750 ಗ್ರಾಂ ಅಂದರೆ ಕೇವಲ 250 ಗ್ರಾಂ ಇಳಿದಿದ್ದು ನೋಡಿದೆ!? ಇದನ್ನು ಓದಿದವರಿಗೆ ಖಂಡಿತಾ ಬೇಸರ ಆಗಿರುತ್ತದೆ ಏಕೆಂದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ 60 ದಿನದಲ್ಲಿ ಕೇವಲ 250 ಗ್ರಾಂ ಇಳಿದಿದೆ ಅಂದರೆ ಈ ಡಯಟ್ ಬೇಕಾ? ಅನ್ನಿಸುವುದು ಸಹಜ.
ಆದರೆ ನನಗೆ ಖಂಡಿತಾ ಬೇಸರ ನಿರಾಶೆ ಇಲ್ಲ... ಯಾಕೆಂದರೆ ಸ್ಥೂಲಕಾಯದ ನಿವಾರಣೆಯಲ್ಲಿ ಕೊಬ್ಬು ಖಂಡಿತಾ ಕರಗುತ್ತಿರುತ್ತದೆ, ಸೊಂಟದ ಸುತ್ತಳತೆ ಕಡಿಮೆ ಆಗಿರುತ್ತದೆ, ಉತ್ಸಾಹ ಚಟುವಟಿಕೆ ಹೆಚ್ಚಾಗಿರುತ್ತದೆ, ಬಿಪಿ ಶುಗರ್ ನಾರ್ಮಲ್ ಆಗಿರುತ್ತದೆ ಆದರೆ ತೂಕ ಯಾಕೆ ಕಡಿಮೆ ಆಗಲಿಲ್ಲ?.... 140 ಕೇಜಿಯಿಂದ 110 ಕೇಜಿ ತೂಕ ಇಳಿದಿದ್ದ ವೇಗದಲ್ಲಿ 110 ಕೇಜಿಯಿಂದ ತೂಕ ಯಾಕೆ ಇಳಿಯುತ್ತಿಲ್ಲ ಎಂಬ ನನ್ನ ಸ್ವಂತ ಅನುಭವದಂತೆ ಅನೇಕರ ಅನುಭವದಲ್ಲಿ ಈ ಪ್ರಶ್ನೆ ಸಹಜ.
ಅದಕ್ಕೆ ವಿಜ್ಞಾನಿಗಳ ಉತ್ತರವಿದೆ ಏನೆಂದರೆ ನಿರ್ದಿಷ್ಟ ತೂಕ ಇಳಿದ ಮೇಲೆ ದೇಹದ ಕೊಬ್ಬು ಇಳಿದಂತೆ ದೇಹದ ಸ್ನಾಯುಗಳು ಬೆಳೆಯಲು ಪ್ರಾರಂಭವಾಗುತ್ತದೆ ಆಗ ದೇಹದ ತೂಕ ನಿರ್ದಿಷ್ಟವಾಗಿ ಸೆಟ್ ಪಾಯಿಂಟ್ ನಲ್ಲಿ ಹೆಚ್ಚು ಆಗದೆ ಕಡಿಮೆ ಆಗದೆ ನಿಂತು ಬಿಡುತ್ತದೆ.
ದೇಹದ ಮೆಟಬಾಲಿಸಂ,ಹಾರ್ಮೋನು ಮತ್ತು ಮೆದಳು ದೇಹದ ನಿರ್ದಿಷ್ಟ ತೂಕಕ್ಕೆ ಸೆಟ್ ಮಾಡಿ ಬಿಡುತ್ತದೆ ಇದರಿಂದ ತೂಕ ಇಳಿಕೆಯ ವೇಗ ಸ್ಥಗಿತವಾಗಿ ದೇಹದ ಸ್ನಾಯುಗಳ ಬೆಳವಣಿಗೆಗೆ ಕಾರಣವಾಗುತ್ತದೆ.
ಈ ರೀತಿಯಲ್ಲಿ ಸ್ನಾಯುಗಳು ಬೆಳವಣಿಗೆ ಪೂರಕವಾಗಿ ಆದನಂತರ ಪುನಃ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು ದೇಹದ ತೂಕ ಇಳಿಸಲು ಸಂದೇಶ ನೀಡುತ್ತದೆ ಇದು ಕೆಲ ತಿಂಗಳಿಂದ ಕೆಲ ವರ್ಷಗಳ ಕಾಲ ನಿರ್ದಿಷ್ಟ ತೂಕ (set point) ನಿಂತಲ್ಲೇ ನಿಂತಿರುತ್ತದೆ.
ಈ ಕಾರಣದಿಂದ ಈ ಹಂತದಲ್ಲೇ ಅನೇಕರು ತಮ್ಮ ಸ್ಥೂಲಕಾಯ ನಿವಾರಣೆಯ ಪ್ರಯತ್ನದಿಂದ ಹತಾಶರಾಗಿ ನಿರಾಸೆಯಿಂದ ವಾಕಿಂಕ್ ವ್ಯಾಯಾಮ ಡಯಟ್ ಬಿಟ್ಟುಬಿಡುತ್ತಾರೆ, ಏನು ಮಾಡಿದರೂ ಪ್ರಯೋಜನ ಆಗಲಿಲ್ಲ ಎಂದು ಸಮರ್ಥನೆಗೆ ಇಳಿದು ಬಿಡುತ್ತಾರೆ.
ಇವತ್ತು 60 ದಿನದ ಶ್ರಾವಣ ಮಾಸದ ನನ್ನ ಡಯಟ್ ಕೇವಲ 250 ಗ್ರಾಂ ತೂಕ ಮಾತ್ರ ಕಡಿಮೆ ಮಾಡಿದ್ದಕ್ಕೆ ನನಗೆ ಇದೆಲ್ಲ ಮಾಹಿತಿ ಗೊತ್ತಿದ್ದರಿಂದ ನಿರಾಸೆ ಬೇಸರ ಆಗಲೇ ಇಲ್ಲ ನನ್ನ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು 108 ಕಿಲೋಗೆ ಸೆಟ್ ಪಾಯಿಂಟ್ ನಿರ್ದಿಷ್ಟಗೊಳಿಸಿದೆ ಸೊಂಟದ ಅಳತೆ 80 ಸೆ.ಮಿ.ಗೆ ಇಳಿದಿದೆ ಅಂದರೆ ದೇಹಕ್ಕೆ ಬೇಡವಾದ ಕೊಬ್ಬು ಇಳಿಯುತ್ತಿದೆ ಮತ್ತು ನನ್ನ ದೇಹದ ಸ್ನಾಯುಗಳು ಬೆಳೆಯುತ್ತಿದೆ ಅಂತ ಅರ್ಥ ಹಾಗೆಯೇ ನಾನು ಮುಂದಿನ ತೂಕ ಇಳಿಕೆಗೆ ದೇಹದ ಆಜ್ಞೆಗೆ ತಾಳ್ಮೆಯಿಂದ ಕಾಯಬೇಕು ಎಂಬ ಸೂಚನೆ ಇದಾಗಿದೆ.
Comments
Post a Comment