Blog number 1734. ಸಿರಸಿಯ ಸುಯೋಗಾಶ್ರಯ ಅನಾಥ ವೃದ್ಧಾಶ್ರಮ ನಡೆಸುತ್ತಿರುವ ಸುಶಿಕ್ಷಿತ ದಂಪತಿಗಳಾದ ಶ್ರೀಮತಿ ಲತೀಕಾಭಟ್ ಮತ್ತು ಗಣಪತಿ N ಭಟ್ಟರು.
#ಶಿರಸಿಯ_ಸುಯೋಗಾಶ್ರಯ_ವೃದ್ಧಾಶ್ರಮ
#ಶ್ರೀಮತಿ_ಲತೀಕಾಭಟ್_ದಂಪತಿಗಳು_ನನ್ನ_ಅತಿಥಿಗಳು.
#ಸುಲಭವಲ್ಲದ_ಸಮಾಜಸೇವಾ_ನಿರತ_ದಂಪತಿಗಳು.
ಶ್ರೀಮತಿ ಲತೀಕಾ ಭಟ್ಟರು ಸಾಮಾಜಿಕ ಜಾಲ ತಾಣದಿಂದ ಪರಿಚಯ, ಲೇಖಕರಾದ ಜಯಪ್ರಕಾಶ್ ಹಬ್ಬು ಮತ್ತು ಅವರ ಸಹೋದರ ಕಾರವಾರದ ರಾಮಚಂದ್ರ ಹಬ್ಬು ಅವರು ಇವರ ಸಮಾಜ ಸೇವೆ ಬಗ್ಗೆ ಹೇಳಿದ್ದರು.
ನಾನು ನಿತ್ಯ ಬೆಳಿಗ್ಗೆ ಏಳುವಾಗ ನಿತ್ಯ ಇವರು ಹಾಕುವ ದೇವರ ಸ್ಮರಣೆ ಮತ್ತು ದಿನಕ್ಕೊಂದು ದೇವರ ಪಟ ತಪ್ಪದೆ ನೋಡುತ್ತೇನೆ.
ಅನೇಕ ಬಾರಿ ಈ ಮಾರ್ಗದಲ್ಲಿ ಸಾಗಿದರೆ ನಿಮ್ಮಲ್ಲಿಗೆ ಒಮ್ಮೆ ಬೇಟಿ ನೀಡಬೇಕು ಎಂದು ಶ್ರೀಮತಿ ಲತೀಕಾ ಭಟ್ಟರು ಹೇಳಿದ್ದರು ನಾನು ಕೂಡ ಬರುವ ಮೊದಲು ತಿಳಿಸಿ ಬನ್ನಿ ಅಂತ ಸ್ವಾಗತಿಸಿದ್ದೆ.
ಮೊನ್ನೆ ಸೋಮವಾರ 3- ಸೆಪ್ಟೆಂಬರ್ - 2023 ರಂದು ಈ ಮಾರ್ಗದಲ್ಲಿ ಶಿವಮೊಗ್ಗ ಹೋಗಲಿದೆ ನಿಮ್ಮಲ್ಲಿಗೆ ಬೇಟಿ ನೀಡಿ ಹೋಗುವುದಾಗಿ ತಿಳಿಸಿದ್ದರು.
ಮದ್ಯಾಹ್ನ ಅವರ ಆಗಮನ ಆಯಿತು, ಅವರ ಪತಿಯ ಜೊತೆ ... ಬನ್ನಿ ಬನ್ನಿ ಅಂತ ಸ್ವಾಗತಿಸಿದೆ ಆಗ " ಇವರು ಗೊತ್ತಾ ನನ್ನ ಪತಿ " ಅಂತ ಪರಿಚಯಿಸಿದಾಗ ನೆನಪಿನ ಸರಳಿ ಬಿಚ್ಚಿತು " #ಗಣಪತಿ_ಎನ್_ಭಟ್ಟಿರು_ಶಿವಮೊಗ್ಗ_ಜಿಲ್ಲಾ_LIC_ಮಾರ್ಕೆಟಿಂಗ್_ಮ್ಯಾನೇಜರ್ " ಅಂದೆ.
ಗಣಪತಿ N ಭಟ್ಟರು ಕೆಲ ತಿಂಗಳ ಹಿಂದೆ ನಮ್ಮ ಸಂಸ್ಥೆಗೆ ವ್ಯವಹಾರಿಕವಾಗಿ ಬೇಟಿ ಮಾಡಿದ್ದರು.
ಶ್ರೀಮತಿ ಲತೀಕಾ ಭಟ್ ದಂಪತಿಗಳು ಹೊನ್ನಾವರ ಮೂಲದವರು ಪತಿ ಗಣಪತಿ ಭಟ್ಟರು LIC ಉದ್ಯೋಗಿ ಆಗಿ ಎಲ್ಲೆಲ್ಲಿ ಹೋಗುತ್ತಾರೆ ಅಲ್ಲಿನ ಖಾಸಾಗಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ನಂತರ ಪ್ರಾಂಶುಪಾಲರಾಗಿ ಶ್ರೀಮತಿ ಲತೀಕಾಭಟ್ಟರು ಉದ್ಯೋಗ ಮಾಡುತ್ತಿದ್ದರಂತೆ.
ತಮ್ಮ 40 ನೇ ಹುಟ್ಟುಹಬ್ಬದಂದು ಇವರು ಮಾಡಿದ ಸಂಕಲ್ಪ ತಮ್ಮ ಜೀವಮಾನ ಪೂರ್ತಿ ಅನಾಥ ವ್ಯದ್ದರಿಗಾಗಿ ಸೇವೆ ಮಾಡಬೇಕೆಂಬ ಅಚಲ ನಿರ್ಧಾರ ಇದಕ್ಕೆ ಇವರ ಪತಿ ಗಣಪತಿ ಭಟ್ಟರು ಬೆನ್ನೆಲುಬಾಗಿ ನಿಲ್ಲುವ ವಚನ ನೀಡುತ್ತಾರೆ ಅದೇ ಸುಯೋಗಾಶ್ರಯ ವೃದ್ಧಾಶ್ರಮ ಅದು ದಾರವಾಡದಲ್ಲಿ ಪ್ರಾರಂಭವಾಗಿ ಗಣಪತಿ ಭಟ್ಟರು ವರ್ಗವಾದ ಊರುಗಳಿಗೆ ಸ್ಥಳಾಂತರವಾಗಿ ಈಗ ಸಿರಸಿಯ ಅಬ್ರಿಮನೆಯಲ್ಲಿ ಶಾಶ್ವತವಾಗಿ ಸ್ವಂತದ್ದಾದ 3 ಎಕರೆ ಜಾಗದಲ್ಲಿ ಸಣ್ಣ ಗುಡಿಸಲಲ್ಲಿ ಪ್ರಾರಂಭವಾಗಿ ಸುಸಜ್ಜಿತ ಕಟ್ಟಡದಲ್ಲಿ 52 ಜನ ಅನಾಥ ವೃದ್ಧರಿಗೆ ಆಶ್ರಯ ನೀಡಿದೆ.
ಆಶ್ರಮ ವಾಸಿಗಳಿಗೆ ಇವರು ನೀಡುವ ಪೌಷ್ಟಿಕವಾದ ಮತ್ತು ಆರೋಗ್ಯಕರವಾದ ಊಟ - ಉಪಹಾರದ ತಟ್ಟೆ ನೋಡಿದರೆ ಅರ್ಥವಾಗುತ್ತದೆ ಇವರ ನಿಸ್ವಾರ್ಥ ಸಮಾಜಸೇವೆ.
ಪ್ರತಿ ತಿಂಗಳಿಗೆ ಎರೆಡು ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸುತ್ತಾರೆ ಈ ಹಣಕ್ಕಾಗಿ ಯಾರನ್ನೂ ಒತ್ತಾಯಿಸುವುದಿಲ್ಲ ಹೆಚ್ಚಿನ ತಿಂಗಳು ಪತಿಯ ಆದಾಯ ಇದಕ್ಕೆ ಬಳಕೆ ಆಗುತ್ತದೆ.
ಇವರ ಅಂದು ಬಂದುಗಳು ಇವರಿಗೆ ಇದೆಂತಾ ಹುಚ್ಚು ಸುಖವಾಗಿ ಇರಬಹುದು ಬಿಟ್ಟು ಈ ಕಷ್ಟ ಪಡುವ ಸಮಾಜ ಸೇವೆ ಬೇಕಾ? ಅಂತಲೂ... ದೊಡ್ಡ ಹುದ್ದೆಯ ಗಣಪತಿ ಭಟ್ಟರ ದೊಡ್ಡ ಮೊತ್ತದ ಸಂಬಳ ಎಲ್ಲಾ ಹೀಗೆ ಹಾಳು ಮಾಡುತ್ತಾರೆಂಬ ಮಾತುಗಳು ಸಹಜವಾದರೂ ಈ ದಂಪತಿಗಳು ಈ ಸಮಾಜ ಸೇವೆಯಲ್ಲಿ ಯಾವುದೇ ಸ್ವಾರ್ಥ - ಲಾಭಗಳ ನಿರೀಕ್ಷೆಗಳಿಲ್ಲದೆ ಸ್ವಯಂ ತೊಡಗಿಸಿಕೊಂಡಿದ್ದಾರೆ ಮತ್ತು ಈ ದಾರಿಯಲ್ಲಿ ಬಹು ದೂರ ಸಾಗಿದ್ದಾರೆ.
ಮಾತಾಡುವಾಗ ಲತೀಕಾ ಭಟ್ಟರು ನಾನು ಬರೆದ ಒಂದು ಲೇಖನದಿಂದ ಪ್ರಭಾವಿತರಾಗಿ ಅವರ ಆಶ್ರಮದ ತಗಡಿನ ಮೇಲ್ಚಾವಣಿಗೆ ಸಣ್ಣ ಮೈಕ್ರೋ ಸ್ಪಿಂಕ್ಲರ್ ಅಳವಡಿಸಿ ಬೇಸಿಗೆಯಲ್ಲಿ ಕೊಠಡಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಮಾಡಿದ್ದು ಕೇಳಿ ಆಶ್ಚರ್ಯ ಆಯಿತು ಏಕೆಂದರೆ ಇದು ಸಾಮಾಜಿಕ ಜಾಲ ತಾಣದ ಶಕ್ತಿ.
ದಂಪತಿಗಳಿಗೆ ನಮ್ಮ ಮಲ್ಲಿಕಾ ವೆಜ್ ನಲ್ಲಿ ತಂದೂರಿ ರೊಟ್ಟಿ, ಪನೀರ್ ಬಟರ್ ಮಸಾಲ, ದಾಲ್ ನ ಮಧ್ಯಾಹ್ನದ ಊಟ ಮಾಡಿಸಿ ಒಮ್ಮೆ ಸಿರಸಿಗೆ ಅವರ ವೃದ್ದಾಶ್ರಮ ನೋಡಲು ಬರುವುದಾಗಿ ತಿಳಿಸಿ ಟಿಪ್ಪೂ ಸುಲ್ತಾನರ ಮರಿ ಮಗಳು ಹಿಟ್ಲರ್ ವಿರುದ್ದ ಬೇಹುಗಾರಿಕೆ ಮಾಡಿದ ಯುರೋಪಿನಲ್ಲಿ ಈಗಲೂ ಸ್ಮರಣೀಯ ಧೀರ ಮಹಿಳೆ ಆಗಿರುವ ನೂರ್ ಪುಸ್ತಕ ನೀಡಿ ಬೀಳ್ಕೊಡುವಾಗ ಗೊತ್ತಾಗಿದ್ದು ಗಣಪತಿ ಭಟ್ಟರು ಶಿವಮೊಗ್ಗಕ್ಕೆ ವರ್ಗಾವಾಗಿ ಅನೇಕ ತಿಂಗಳ ನಂತರ ಇದೇ ಮೊದಲ ಬಾರಿ ಶ್ರೀಮತಿ ಲತೀಕಾ ಭಟ್ಟರು ಪತಿಯ ಮನೆ ನೋಡಲು ಹೊರಟಿದ್ದಾರೆ.
Comments
Post a Comment