#ಚಳಿಗಾಲದಲ್ಲಿ_ಪಾದದ_ಹಿಮ್ಮುಡಿ_ಸಂರಕ್ಷಣೆ_ಅತಿ_ಮುಖ್ಯ
#ಪಾದದ_ರಕ್ಷಣೆಗೆ_ನಿರ್ಲಕ್ಷ್ಯ_ಮಾಡಿದರೆ_ಹಿಮ್ಮುಡಿ_ಸೀಳಿ_ಹೆಚ್ಚು_ಬಾದಿಸುತ್ತದೆ.
#ಚಳಿಗಾಲದ_ಪ್ರಾರಂಬಕ್ಕೆ_ಮೊದಲೇ_ಪಾದಗಳ_ಜಾಗೃತೆ_ಮಾಡಿ.
#ಸ್ಕ್ರಬ್ಬರ್_ಬಳಸುವುದು_ಸುರಕ್ಷಿತ.
https://youtu.be/ci2fkKg9MJQ?feature=shared
ಪುರುಷರು ತಮ್ಮ ಮೈಕಾಂತಿಯ ಸೌಂದರ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಗಮನವಹಿಸುವುದಿಲ್ಲ ಈ ವಿಚಾರದಲ್ಲಿ ಮಹಿಳೆಯರಿಗಿಂತ ಕಡಿಮೆ ಸೌಂದರ್ಯ ಪ್ರಜ್ಞೆ ಪುರುಷರಲ್ಲಿದೆ ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಇದನ್ನು ಮಹಿಳೆಯರು ಪುರುಷರಿಗೆ ವಿವರಿಸುವುದಲ್ಲಿ ಆಸಕ್ತಿ ಇರುವುದಿಲ್ಲ.
ಪುರುಷರ ಅಂಗಾಲ ಹಿಮ್ಮಡಿಯ ತ್ವಚೆ ಚಳಿಗಾಲದಲ್ಲಿ ಒಡೆದು ಬಿರುಕು ಬಿಡುವುದು ಒಂದು ಆದರೆ ಇದನ್ನು ಪುರುಷರು ಚಳಿಗಾಲದ ಮೊದಲೇ ಮುಂಜಾಗೃತೆ ವಹಿಸಿದರೆ ವರ್ಷಪೂರ್ತಿ ಆರೋಗ್ಯವಂತ ಅಂಗಾಲ ಹಿಮ್ಮುಡಿ ತ್ವಚೆ ಒಡೆಯದಂತೆ ನೋಡಿ ಕೊಳ್ಳಬಹುದು.
ವರ್ಷದ ಮಳೆಗಾಲ ಮುಕ್ತಾಯ ಮತ್ತು ಚಳಿಗಾಲದ ಮೊದಲೆ ನಮ್ಮ ಪಾದಗಳ ಆರೈಕೆಗೆ ತಯಾರಿ ಮಾಡಬೇಕು, ಪಾದಗಳ ಡೆಡ್ ಸ್ಕಿನ್ ಗಳನ್ನು ಸ್ಕ್ರಬ್ಬರ್ ಗಳನ್ನು ಬಳಸಿ ನಿವಾರಿಸಬೇಕು (ಇದು ಕಾರ್ಪೆಂಟರ್ ಗಳು ಮರದ ಪೀಠೋಪಕರಣಗಳ ಮೇಲ್ಮೈ ನುಣುಪು ಮಾಡಲು ಉಪ್ಪು ಕಾಗದ ಬಳಸುವಂತೆ) ಒಣ ಪಾದಗಳ ಬಿರುಕುಗಳ ಚರ್ಮಗಳನ್ನು ಸ್ಕೃಬ್ಬರ್ ಗಳಿಂದ ತಿಕ್ಕಿ ಪಾದವನ್ನು ನುಣುಪಾಗಿಸ ಬೇಕು.
ಚಳಿಗಾಲ ಪ್ರಾರಂಭದ ನಂತರ ಪ್ರತಿ ದಿನ ಪಾದಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಎಣ್ಣೆ ಅಥವಾ ವ್ಯಾಸಲಿನ್ ಸವರಬೇಕು,
ಒಣ ಚರ್ಮ ಹೊಂದಿರುವ ಮತ್ತು ಹೆಚ್ಚು ಹಿಮ್ಮಡಿ ಚರ್ಮ ಸೀಳು ಒಡೆಯಿಂದ ಬಾದೆ ಪಡುವವರು ರಾತ್ರಿ ಬಿಸಿನೀರಿನ ಬಕೇಟನಲ್ಲಿ ಸೋಪು ಅಥವ ಶಾಂಪೂ ಮತ್ತು ಮುಷ್ಟಿ ಉಪ್ಪು ಸೇರಿಸಿ ಎರಡೂ ಅಂಗಾಲು ಅದರಲ್ಲಿ ಕಾಲು ಗಂಟೆ ನೆನಸಿ ಬ್ರಷ್ ನಿಂದ ಅಂಗಾಲು ಹಿಮ್ಮುಡಿ ತಿಕ್ಕಿ ತೊಳೆದು ನಂತರ ಶುಭ್ರ ಬಟ್ಟೆಯಿಂದ ಒರೆಸಿ ಎಣ್ಣೆ ಅಥವ ವ್ಯಾಸಲಿನ್ ಹಚ್ಚಬೇಕು ಇದರಿಂದ ಪಾದದ ಹಿಮ್ಮಡಿ ಒಡೆಯುವುದು ನಿಲ್ಲುತ್ತದೆ.
Comments
Post a Comment