Blog number 1756. ರಾಜಸ್ಥಾನದ ಬಿಕನೇರ್ ನ ಹುರುಳಿ ಕಾಳಿನ ಹಿಟ್ಟಿನಿಂದ ತಯಾರಿಸುವ ಸೇವ್ ಕಾರ 25 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಇದು ಪೆಪ್ಸಿಕೊ ನಂತಹ ಬಹುರಾಷ್ಟ್ರೀಯ ಕಂಪನಿಗಳ ಮಾರಾಟದ ಸರಕಾಗಿದೆ.
https://youtu.be/DheByXp_yOQ?feature=shared
#ಬಿಕೇನರ್_ಬುಜಿಯಾ
#ರಾಜಸ್ಥಾನದ_ಬಿಕೇನರ್_ಗುಡಿಕೈಗಾರಿಕೆ
#ಎರೆಡುವರೆ_ಲಕ್ಷ_ಜನರಿಗೆ_ವಿಶೇಷವಾಗಿ_ಮಹಿಳೆಯರಿಗೆ_ಸ್ವಯಂ_ಉದ್ಯೋಗ
#ಹುರುಳಿ_ಹಿಟ್ಟಿನ_ವಿಶೇಷ_ಖಾರಾ_ಶೇವ್
#ಬಿಕೇನರ್_ಮಹಾರಾಜ_ಡುಂಗರ್_ಸಿಂಗ್_ಆಳ್ವಿಕೆಯಲ್ಲಿ_1877ರಲ್ಲಿ_ಮೊದಲ_ಬ್ಯಾಚ್_ಬುಜಿಯ_ತಯಾರಿ
#ಜಿ_ಐ_ಟ್ಯಾಗ್_2008ರಲ್ಲಿ_ಮತ್ತು_2010ರಲ್ಲಿ_ಪೆಟೆಂಟ್_ಪಡೆದಿದೆ.
ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ಗೋಪಾಳದ ಶಂಕರ್ ಪ್ರಾವಿಜನ್ ಸ್ಟೋರ್ ಗೆ ಹೋಗಿದ್ದೆ, ಮಾಲಿಕರು ರಾಜಸ್ಥಾನದವರು ಅವರಲ್ಲಿ ಮಾರಾಟಕ್ಕಿಟ್ಟಿದ್ದ Haladiram ರವರ ರಾಜಸ್ಥಾನದ ಬಿಕೇನರ್ ಬುಜಿಯಾ ಮಾರಾಟಕ್ಕೆ ಇಟ್ಟಿದ್ದನ್ನು ಖರೀದಿಸಿದೆ.
ಇದು ವಿಶಿಷ್ಟ ಸ್ವಾದದ ರುಚಿಕರ ಶೇವ್ ಕಾರವಾಗಿದೆ ಈ ಬಿಕನೇರ್ ಬುಜಿಯ ಹೆಸರಿನಲ್ಲಿ ಪ್ರಖ್ಯಾತವಾದ ಈ ಬ್ರಾಂಡ್ ಈ ಪೆಪ್ಸಿಕೋ ಅಂತ ಬಹು ರಾಷ್ಟ್ರೀಯ ಕಂಪನಿಗಳ ಮಾರಾಟದ ಸರಕಾರವಾಗಿದೆ.
ರಾಜಸ್ಥಾನದ ಬಿಕೇನರ್ ನಲ್ಲಿ ಬೆಳೆಯುವ ಹುರುಳಿ ಹಿಟ್ಟು, ಕಾಬೂಲ್ ಕಡಲೆ ಹಿಟ್ಟು ಜೊತೆ ಮಸಾಲೆ ಸೇರಿಸಿ ಶೇಂಗಾ ಎಣ್ಣೆಯಲ್ಲಿ ಡಿಪ್ ಪ್ರೈ ಮಾಡಿದ ಸೇವ್ ಕಾರಕ್ಕೆ ವಿಶಿಷ್ಟ ಸ್ವಾದವಿದೆ ಆದ್ದರಿಂದಲೇ ಬಿಕನೇರ್ ಬುಜಿಯಾ ಈಗ ದೇಶ ವಿದೇಶಗಳಲ್ಲಿ ಜನಪ್ರಿಯಗಳಿಸಿದೆ.
1877 ರಲ್ಲಿ ಮಹಾರಾಜ ಶ್ರೀ ಡುಂಗರ್ ಸಿಂಗ್ ಆಳ್ವಿಕೆಯಲ್ಲಿ ಮೊದಲ ಬ್ಯಾಚ್ ಬುಜಿಯಾ ತಯಾರಿಸಲಾಗಿದ್ದು 2008ರಲ್ಲಿ ಬಿಕನೇರ್ ಭುಜಿಯಾಗೆ GI ಟ್ಯಾಗ್ ಸಿಕ್ಕಿತು ಇದಕ್ಕೆ 2010ರಲ್ಲಿ ಪೇಟೆಂಟ್ ಸಿಕ್ಕಿದೆ.
ರಾಜಸ್ಥಾನದ ಬಿಕನೇರ್ ನಲ್ಲಿ ಇದು ಗುಡಿ ಕೈಗಾರಿಕೆ, ಇಲ್ಲಿನ ಸುಮಾರು 25 ಲಕ್ಷ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಇದು ಉದ್ಯೋಗ ನೀಡಿದೆ.
Comments
Post a Comment