#ನಮ್ಮ_ಮಲ್ಲಿಕಾ_ವೆಜ್_ಗ್ರಾಹಕರಿಗೆ_ನೀರುದೋಸೆ_ನಿತ್ಯ_ನೀಡುತ್ತಿದೆ.
#ದೋಸೆಯ_ತವರುಮನೆ_ದಕ್ಷಿಣಭಾರತದ_ಉಡುಪಿ
#ನೀರು_ದೋಸೆ_ಮೂಲ_ಕರಾವಳಿಯ_ತುಳು_ಪ್ರದೇಶ
#ದೋಸೆ_ಒಂದನೆ_ಶತಮಾನದಿಂದ_ಬಳಕೆಯಲ್ಲಿ
#ಹನ್ನೆರಡನೆ_ಶತಮಾನದ_ಸಂಸ್ಕೃತ_ವಿಶ್ವಕೋಶ_ಮನಸೋಲ್ಲಾಸದಲ್ಲಿ_ದೋಸೆ_ಪಾಕ_ವಿದಾನ_ಇದೆ.
#ಸ್ವಾತಂತ್ರ್ಯನಂತರ_ದೆಹಲಿ_ಕನಾಟ್_ಪ್ಲೇಸಿನ_ಮದ್ರಾಸ್_ಹೋಟೇಲಿಂದ
#ಉಡುಪಿ_ರೆಸ್ಟೋರೆಂಟ್_1930ರಿಂದ_ಮುಂಬೈಯಲ್ಲಿ_ದೋಸೆ_ಪರಿಚಯಿಸಿತು.
https://youtu.be/MPWdoRd7Wtc?feature=shared.
ದೋಸೆಯಲ್ಲಿ 112 ಕ್ಯಾಲೋರಿ ಶಕ್ತಿ ಇದೆ, 84% ಕಾರ್ಬೋಹೈಡ್ರೇಟ್ ಮತ್ತು 16% ಪ್ರೋಟೀನ್ ಇದೆ.
ಇತ್ತೀಚಿಗೆ ಅಮೇರಿಕಾ ಅಧ್ಯಕ್ಷಿಯ ಚುನಾವಣಾ ಪ್ರಚಾರದಲ್ಲಿ ಉಪಾದ್ಯಕ್ಷೆ ಆಗಿರುವ ಕಮಲಾ ಹ್ಯಾರೀಸ್ ನಟಿ ಮಿಂಡಿ ಕಾಲಿಂಗ್ ಜೊತೆ ಮಸಾಲೆ ದೋಸೆ ಮಾಡುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದರು (ಭಾರತ ಮೂಲದ ಅಮೇರಿಕನ್ ಮತದಾರರ ಗಮನ ಸೆಳೆಯಲು).
ನಮ್ಮ ಮಲ್ಲಿಕಾ ವೆಜ್ ನಲ್ಲಿ ಎಲ್ಲಾ ಸಂಪ್ರದಾಯಿಕ ದೋಸೆಗಳು ಲಭ್ಯವಿದೆ ಅನೇಕ ಗ್ರಾಹಕರ ಬೇಡಿಕೆ ಆಗಿದ್ದ #ನೀರು_ದೋಸೆ ಈಗ ಲಭ್ಯವಿದೆ, ಮೂರು ನೀರು ದೋಸೆಯ ಒಂದು ಪ್ಲೇಟಿನಲ್ಲಿ ಹಸಿ ಮೆಣಸಿನಕಾಯಿಯ ತೆಂಗಿನ ಕಾಯಿ ಚಟ್ನಿ ಮತ್ತು ಕೆಂಪು ಒಣ ಮೆಣಸಿನಕಾಯಿ ಮತ್ತು ತೆಂಗಿನ ಕಾಯಿಯ ನೀರು ಚಟ್ನಿ ( ರೇಲ್ ಚಟ್ನಿ ) ಜೊತೆ ಗ್ರಾಹಕರಿಗೆ ನೀಡುತ್ತಿದೆ.
ನೀರು ದೋಸೆಯ ಮೂಲ ಕರಾವಳಿಯ ತುಳು ಭಾಷಾ ಪ್ರದೇಶ ಅಂದರೆ ಉಡುಪಿ ಮೂಲವೇ ಆಗಿದೆ.
ದಕ್ಷಿಣ ಬಾರತದಲ್ಲಿ ಉಡುಪಿ ದೋಸೆಯ ತವರು ಮನೆ ಎ೦ದು ಇತಿಹಾಸಕಾರ ಪಿ. ತಂಕಪ್ಪನ್ ನಾಯರ್ ನಮೂದಿಸಿದ್ದಾರೆ.
ಒಂದನೆ ಶತಮಾನದಲ್ಲಿ ಪ್ರಾಚೀನ ತಮಿಳು ದೇಶದಲ್ಲಿ ದೋಸೆ ಬಳಕೆಯಲ್ಲಿತ್ತು ಎಂದು ಆಹಾರ ಇತಿಹಾಸಕಾರ ಟಿ.ಕೆ.ಆಚಾರ್ಯರು ಉಲ್ಲೇಖಿಸಿದ್ದಾರೆ.
8ನೇ ಶತಮಾನದಲ್ಲಿ ಇಂದಿನ ತಮಿಳುನಾಡಿನ ಸಾಹಿತ್ಯದಲ್ಲಿ ದೋಸೆಯ ಲಿಖಿತ ಉಲ್ಲೇಖ ಇದೆ ಅಂತೆ.
ಕನಾಟಕದಿಂದ ಆಳಿದ ಮೂರನೇ ಸೋಮೇಶ್ವರರವರು ಸಂಗ್ರಹಿಸಿದ 12 ನೇ ಶತಮಾನದ ಸಂಸ್ಕೃತ ವಿಶ್ವಕೋಶ #ಮನಸೋಲ್ಲಾಸ ಗ್ರಂಥದಲ್ಲಿ ದೋಸೆಯ ಪಾಕ ವಿದಾನವಿದೆ.
ಈಗ ವಿಶ್ವದಾದ್ಯಂತ ಭಾರತೀಯ ದೋಸೆ ಜನಮನ್ನಣೆ ಪಡೆದಿದೆ.
Comments
Post a Comment